Published : Aug 22, 2024, 07:09 PM ISTUpdated : Aug 22, 2024, 09:06 PM IST
ಬಹುಭಾಷಾ ನಟಿ ತಮನ್ನಾ ಭಾಟಿಯಾ ತಮನ್ನಾ ಉತ್ತರದವರಾದರೂ ದಕ್ಷಿಣದ ಪ್ರೇಕ್ಷಕರಿಗೆ ತುಂಬಾ ಹತ್ತಿರ. ನಾಯಕಿಯಾಗಿ ಎರಡು ದಶಕಗಳು ಕಳೆದರೂ ಅದೇ ಕ್ರೇಜ್ ಹೊಂದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ 'ಸ್ತ್ರೀ 2' ಸಿನಿಮಾದ ಆಜ್ ಕಿ ರಾತ್ ಹಾಡಿನಲ್ಲಿ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದರು, ಸದಾ ತನ್ನ ಹಾಟ್ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದ ತಮನ್ನಾ ಇದೀಗ ರಾಧೆಯಾಗಿ ಬದಲಾಗಿದ್ದಾರೆ.
27
ಸಾಮಾನ್ಯವಾಗಿ ವೆಸ್ಟ್ರನ್ ಡ್ರೆಸ್ ಇಲ್ಲ ಅಂದ್ರೆ ಮಾಡ್ರೆನ್ ಅವತಾರದಲ್ಲಿ ಕಾಣಿಸಿಕೊಳ್ಳುವ ತಮನ್ನಾ ಇದೀಗ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಕ್ಯೂಟ್ ಫೋಟೊಸ್‌ನಿಂದ ಹುಡುಗರ ನಿದ್ದೆ ಕದ್ದಿದ್ದಾರೆ.
37
ಇತ್ತೀಚೆಗೆ ತಮನ್ನಾ ರಾಧೆಯ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪೀಚ್ ಬಣ್ಣದ ಲೆಹೆಂಗಾ ಧರಿಸಿದ ತಮನ್ನಾ ತಮ್ಮ ಲುಕ್‌ನಿಂದ ಹುಡುಗರನ್ನು ಸಖತ್ತಾಗಿ ಅಟ್ರಾಕ್ಟ್ ಮಾಡಿದ್ದಾರೆ.
47
ಕೈಯಲ್ಲಿ ಮೆಹಂದಿ ಧರಿಸಿ ಸಾಕ್ಷತ್ ದೇತೆಯಂತೆ ತಮನ್ನಾ ಭಾಟಿಯಾ ಕಂಗೊಳಿಸಿದ್ದಾರೆ. ಬೈತಲೆ ಬೊಟ್ಟು, ಹಣೆಗೆ ಕುಂಕುಮ, ಕೈ ಬಳೆ ಧರಿಸಿ ಕೈಯಲ್ಲಿ ನವಿಲು ಗರಿ ಹಿಡಿದು ಫೋಟೋಸ್‌ಗೆ ತಮನ್ನಾ ಫೋಸ್ ಕೊಟ್ಟಿದ್ದಾರೆ.
57
ತಮನ್ನಾ ರಾಧೆಯ ಅವತಾರ ನೋಡಿ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ. ಸದ್ಯ ಈ ಫೋಟೊಗಳನ್ನು ತಮನ್ನಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಈ ವಿಶೇಷ ಲುಕ್‌ಗೆ ಫ್ಯಾನ್ಸ್ ಮನಸೋತಿದ್ದಾರೆ.
67
ಅಂದ ಹಾಗೆ ತಮನ್ನಾ ಬ್ರ್ಯಾಂಡ್ ಪ್ರಮೋಷನ್ ಭಾಗವಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಕೊಲಾಬರೇಷನ್ ಫೋಟೋಶೂಟ್ನಂತೆ ಕಂಡು ಬಂದಿದ್ದು ತಮನ್ನಾ ಆ ಬಗ್ಗೆ ಪೋಸ್ಟ್ನಲ್ಲಿಯೂ ಬರೆದುಕೊಂಡಿದ್ದಾರೆ.
77
ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ತಮನ್ನಾ ಸೂಪರ್ ಫಾರ್ಮ್ನಲ್ಲಿದ್ದಾರೆ. ಸ್ಪೆಷಲ್ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಫೇಮಸ್ ಆಗಿದ್ದಾರೆ. ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.