ಐಶ್ವರ್ಯ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ ಅವರಿಂದ ಸಾರಾ ಅಲಿ ಖಾನ್ ಮತ್ತು ಪರಿಣಿತಿ ಚೋಪ್ರಾವರೆಗೆ ಎಲ್ಲರ ಅವರ ಸಹೋದರರು ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು ಕ್ಯಾಮೆರಾವನ್ನು ಎದುರಿಸಲು ಇಷ್ಟಪಡುವುದಿಲ್ಲ.
ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರ ಸಹೋದರ ಆದಿತ್ಯ ರೈ ಮರ್ಚೆಂಟ್ ನೇವಿ. ಆದರೆ, ದೇಶವನ್ನು ರಕ್ಷಿಸುವುದರ ಜೊತೆಗೆ, ಚಲನಚಿತ್ರ ನಿರ್ಮಾಣದಲ್ಲೂ ಅವರು ಕೈ ಹಾಕಿದ್ದಾರೆ.
ಪ್ರಿಯಾಂಕಾ ಚೋಪ್ರಾರಿಗೆ ಸಹೋದರ ಇರುವ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಹಾಸ್ಪಿಟೇಲಿಟಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಸಿದ್ಧಾರ್ಥ್ ಸ್ವಿಟ್ಜರ್ಲೆಂಡ್‌ನಿಂದ ಶೇಫ್ ಟ್ರೈನಿಂಗ್ ತರಬೇತಿ ಪಡೆದಿದ್ದು,ಪುಣೆಯಲ್ಲಿ ಲೌಂಜ್ ಮುಗ್ಶಾಟ್ ಕೆಫೆ ಪಬ್ ಹೊಂದಿದ್ದಾರೆ.
ಅನುಷ್ಕಾ ಶರ್ಮಾ ಸಹೋದರ ಕರ್ನೀಶ್ ಬಗ್ಗೆ ಯಾರು ಹೆಚ್ಚು ತಿಳಿದಿಲ್ಲ. ಆದರೆ ತಂಗಿಯ ಪರ್ಸನಲ್ ಹಾಗೂ ಪ್ರೋಫೆಶನಲ್ ಲೈಫ್‌ಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಅವರು ಅನುಷ್ಕಾರ ಪ್ರೊಡಕ್ಷನ್ ಹೌಸ್ ಕ್ಲೀನ್ ಸ್ಲೇಟ್ ಫಿಲ್ಮ್‌ಸ್‌ನ ಸಹ-ಸ್ಥಾಪಕರಾಗಿದ್ದಾರೆ.
ಅಥಿಯಾ ಶೆಟ್ಟಿಯ ಸಹೋದರ ಅಹನ್ ಶೆಟ್ಟಿ ಪ್ರಚಾರ ಅಥವಾ ಫೋಟೋಗಳನ್ನು ಕ್ಲಿಕ್ ಮಾಡಲು ಇಷ್ಟಪಡುವುದಿಲ್ಲ.
ಸುಷ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಅವರಿಗೂ ಬಾಲಿವುಡ್ ಜೊತೆ ಯಾವುದೇ ಸಂಬಂಧವಿಲ್ಲ ಆದರೆ ಟಿವಿ ನಟಿ ಚಾರು ಅಸ್ಸೋಪಾರನ್ನು ಮದುವೆಯಾದ ನಂತರ ಅವರು ಸುದ್ದಿಯಲ್ಲಿದ್ದರು. ರಾಜೀವ್ ಫ್ಯಾಷನ್ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಬಟ್ಟೆಗಳ ರಫ್ತು-ಆಮದು ವ್ಯವಹಾರವನ್ನು ನಿರ್ವಹಿಸುತ್ತಾರೆ.
ಪರಿಣಿತಿ ಚೋಪ್ರಾಳಿಗೆ ಇಬ್ಬರು ಸಹೋದರರು, ಶಿವಾಂಗ್ ಮತ್ತು ಸಹಜ್ ಚೋಪ್ರಾ. ಸಿನಿಮಾ ಪ್ರಪಂಚದಿಂದ ಬಹಳ ದೂರ, ತಮ್ಮ ಕುಕೀಸ್ ವ್ಯವಹಾರವನ್ನು ನೆಡೆಸುತ್ತಾರೆ
ಸಾರಾ ಅಲಿ ಖಾನ್ ತಮ್ಮ ಇಬ್ರಾಹಿಂ ಅಲಿ ಖಾನ್ ಕ್ಯಾಮೆರಾ ಮುಂದೆ ಬರಲು ಇಷ್ಟಪಡುವುದಿಲ್ಲ. ಲೈಮ್‌ಲೈಟ್‌ನಿಂದ ದೂರವಿರಲು ಆದ್ಯತೆ ನೀಡುವ ಈತ ಕ್ರಿಕೆಟ್‌ನಲ್ಲಿ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದಾನೆ.