58ವರ್ಷದ ಸುನಿಲ್ ಶೆಟ್ಟಿ ವರ್ಕೌಟ್‌ ವಿಡಿಯೋ ವೈರಲ್‌ - ಫಿಟ್ನೆಸ್‌ ಸಿಕ್ರೇಟ್‌ ಏನು?

First Published Jul 30, 2020, 4:53 PM IST

ಸುನಿಲ್ ಶೆಟ್ಟಿ  ನಟನೆ ಮತ್ತು ಸಿನಿಮಾದ ಜೊತೆಗೆ ದೇಹದ ಫಿಟ್ನೆಸ್ ಬಗ್ಗೆ ತುಂಬಾ ಕಟ್ಟುನಿಟ್ಟು. ತಮ್ಮನ್ನು ತಾವು ಫಿಟ್‌ ಆಗಿ ಇರಿಸಿಕೊಳ್ಳಲು , ಆಹಾರ ಮತ್ತು ವ್ಯಾಯಾಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. 58 ನೇ ವಯಸ್ಸಿನಲ್ಲೂ ಫಿಟ್‌ ಬಾಡಿ ಹೊಂದಿರುವ ಇವರು ಫ್ಯಾನ್ಸ್‌ಗೆ   ಸ್ಫೂರ್ತಿ ಆಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಅವರ   ವರ್ಕೌಟ್‌  ವಿಡಿಯೋ ವೈರಲ್ ಆಗುತ್ತಿದೆ.  ಅವರು ಹೈ ಇಂಟೆನ್ಸಿಟಿ ವರ್ಕೌಟ್‌   ಕಂಡುಬರುತ್ತದೆ, ಟೈಗರ್ ಶ್ರಾಫ್ ಸೇರಿದಂತೆ ಅನೇಕ ಬಾಲಿವುಡ್ ಖ್ಯಾತನಾಮರನ್ನು ಅಚ್ಚರಿಗೊಳಿಸಿದೆ.

ಅವರ ಫಿಟ್ನೆಸ್ ಬಗ್ಗೆ, ಸುನಿಲ್ ಶೆಟ್ಟಿ ಒಮ್ಮೆ ಸಂದರ್ಶನವೊಂದರಲ್ಲಿ ಪ್ರತಿದಿನ ಕನಿಷ್ಠ 40-45 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತಾರೆ, ಜೊತೆಗೆ ಅವರ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ ಎಂದು ಹೇಳಿದರು.
undefined
ಚಿಕ್ಕವರಿದ್ದಾಗ ಜಿಮ್‌ಗೆ ಹೋಗುವುದನ್ನು ಇಷ್ಟಪಡುತ್ತಿರಲಿಲ್ಲವಂತೆ, ಆದ್ದರಿಂದ ಪುಲ್-ಅಪ್‌ಗಳು, ಪುಷ್-ಅಪ್‌ಗಳು, ಸೂರ್ಯನಮಸ್ಕಾರ, ದಂಡ ಮತ್ತು ಯೋಗದ ವಿಭಿನ್ನ ಆಸನಗಳನ್ನು ಮಾಡುತ್ತಿದ್ದರು. ಇದಲ್ಲದೆ ಮಾರ್ಷಲ್‌ ಆರ್ಟ್‌ ಮತ್ತು ಫೋರ್‌ಹೆಡ್‌ ವ್ಯಾಯಾಮಗಳನ್ನು ಮಾಡುತ್ತಿದ್ದರು ಸುನಿಲ್ ಶೆಟ್ಟಿ .
undefined
ಒಂದು ದಿನದಲ್ಲಿ ನೀವು ಫಿಟ್‌ ದೇಹವನ್ನು ಪಡೆಯಲು ಸಾಧ್ಯವಿಲ್ಲ. ನೀವು ಪ್ರತಿದಿನವೂ ಅದರ ಮೇಲೆ ಕೆಲಸ ಮಾಡಬೇಕಾಗುತ್ತದೆ ಎಂದು ಸುನಿಲ್ ಶೆಟ್ಟಿ ಹೇಳುತ್ತಾರೆ. ಮೈಗ್ರೇನ್‌ ಕಾರಣದಿಂದ ಸಾಕಷ್ಟು ಒತ್ತಡ ಅನುಭವಿಸಿದ ಅವರು ಹೆಚ್ಚಿನ ಸಮಯ ಮನೆಯಲ್ಲಿಯೇ ಇದ್ದರು ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
undefined
ಇದಕ್ಕಾಗಿ ಔಷಧಿಗಳನ್ನು ಸಹ ತೆಹೆದು ಕೊಳ್ಳುತ್ತಿದ್ದರು ನಂತರ ಯಾರೋ ಅವರಿಗೆ ಯೋಗ ಮಾಡಲು ಸಲಹೆ ನೀಡಿದರಂತೆ. ಪ್ರಾಣಾಯಾಮ ಮೈಗ್ರೇನ್ ನೋವನ್ನು ಕಡಿಮೆ ಮಾಡುತ್ತದೆ.ಯೋಗ ಮಾಡುವುದರಿಂದ ಮೈಗ್ರೇನ್‌ನ ನೋವು ಕಡಿಮೆಯಾಗುವುದಲ್ಲದೆ, ತುಂಬಾ ರಿಲ್ಯಾಕ್ಸ್‌ ಹಾಗೂ ಎನರ್ಜಿಟಿಕ್‌ ಅನಿಸುತ್ತದೆ ಎನ್ನುತ್ತಾರೆ ಕರಾವಳಿ ಮೂಲದ ಬಾಲಿವುಡ್‌ ಸ್ಟಾರ್.
undefined
ಬೆಳಿಗ್ಗೆ 5 ಗಂಟೆ ಎದ್ದು 2 ಗಂಟೆಗಳ ಕಾಲ ವ್ಯಾಯಾಮ ಮಾಡುವ ಸುನಿಲ್‌ ಶೆಟ್ಟಿ ದಿನವನ್ನು ಯೋಗ ಮತ್ತು ಪ್ರಾಣಾಯಾಮದಿಂದ ಪ್ರಾರಂಭಿಸುತ್ತಾರೆ. ನಂತರ, ಜಿಮ್‌ನಲ್ಲಿ 40-45 ನಿಮಿಷಗಳ ಕಾಲ ಶ್ರಮಿಸಿರುತ್ತಾರೆ.
undefined
20 ರೆಪ್ಸ್ ಲೋ ವೈಯಟ್‌ ಟ್ರೈನಿಂಗ್‌ ಮಾಡುವ ಈ ನಟ ತಮ್ಮ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ವ್ಯಾಯಾಮ ಮಾಡುತ್ತಾರೆ.
undefined
ವಿವಿಧ ರೀತಿಯ ವ್ಯಾಯಾಮದ 304 ಸೆಟ್‌ಗಳ ನಂತರ ಬೇರೆ ಬೇರೆ ಮಸಲ್‌ ಮೇಲೆ ಕೇಂದ್ರೀಕರಿಸುತ್ತಾರೆ. ಅವರ ಪ್ರಕಾರ, ನಿಜವಾದ ವರ್ಕೌಟ್‌ 20 ರೆಪ್ಸ್‌ ನಂತರವೇ ಪ್ರಾರಂಭವಾಗುವುದಂತೆ.
undefined
ಕೇವಲ ನಮ್ಮ ಕರಾವಳಿಯ ನಂಟು ಮಾತ್ರ ಹೊಂದಿರುವುದು ಮಾತ್ರವಲ್ಲ ಕನ್ನಡದ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ನಮ್ಮ ಕಿಚ್ಚ ಸುದೀಪ್‌ ಜೊತೆ ಪೈಲ್ವಾನ್‌ ಚಿತ್ರದಲ್ಲಿ ನಟಿಸಿರುವ ಅಣ್ಣ.
undefined
ಪ್ರೋಟೀನ್ ಶೇಕ್ಸ್, ಸ್ಟೀರಾಯ್ಟ್‌ ಮತ್ತು ಸಂಪ್ಲಿಮೇಂಟ್‌ಗಳನ್ನು ತೆಗೆದುಕೊಳ್ಳುವುದನ್ನು ನಂಬುವುದಿಲ್ಲ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
undefined
ಎಳನೀರು ಅಥವಾ ಕೊಬ್ಬರಿ ಎಣ್ಣೆಯಂತಹ ನೈಸರ್ಗಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ.
undefined
ತನ್ನ ಅಜ್ಜಿಯರು ಅರಿಶಿನವನ್ನು .ಔಷಧಿಗಳಲ್ಲಿ ಬಳಸುತ್ತಿದ್ದರು. ಅದು ಆಂಟಿಸೆಪ್ಟಿಕ್‌ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ ಸುನಿಲ್‌ ಶೆಟ್ಟಿ.
undefined
click me!