Parental Duty: ಮಗನನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಜೊತೆಯಾದ ಮಲೈಕಾ-ಅರ್ಬಾಜ್!

Suvarna News   | Asianet News
Published : Feb 07, 2022, 05:21 PM IST

ವಿಚ್ಛೇದನ ನಂತರವೂ ಪುತ್ರನ ಜವಾಬ್ದಾರಿ ಮರೆತಿಲ್ಲ ಸೆಲೆಬ್ರಿಟಿ ಜೋಡಿ. ಈಗ ಇಬ್ಬರು ಚರ್ಚಿಸಲು ಏನಿದೆ ಎಂದು ಕಾಲೆಳೆದ ನೆಟ್ಟಿಗರು...   

PREV
17
Parental Duty: ಮಗನನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಜೊತೆಯಾದ ಮಲೈಕಾ-ಅರ್ಬಾಜ್!

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿಚ್ಛೇದನ ಪಡೆದುಕೊಂಡ ನಂತರ ಪುತ್ರನಿಗೆ ಕೋ-ಪೇರೆಂಟಿಂಗ್ ಆಗಿರುವುದಾಗಿ ಮಾತುಕತೆ ಮಾಡಿಕೊಂಡರು.

27

ಇವರಿಬ್ಬರ ಪುತ್ರ ಅರ್ಹಾನ್ ಖಾನ್‌ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ. ಈಗ ಮತ್ತೆ ಹಿಂದಿರುಗಿದ್ದಾನೆ. 

37

ಗ್ರೀನ್ ಜಾಕೆಟ್ ಮತ್ತು ಬ್ರೈಟ್ ಪ್ಯಾಂಟಲ್ಲಿ ಕಾಣಿಸಿಕೊಂಡ ಅರ್ಹಾನ್‌ ಹೊರಡುವ ಮುನ್ನ ತಾಯಿ ಮಲೈಕಾ ಮತ್ತು ತಂದೆ ಅರ್ಬಾಜ್ ಖಾನ್ ತಬ್ಬಿಕೊಂಡು ಮುತ್ತಿಟ್ಟಿದ್ದಾನೆ. 

47

ತಮ್ಮ ಪೋಷಕರ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನೂ ಅರ್ಹಾನ್ ತಬ್ಬಿಕೊಂಡು ಸಂತೋಷದಿಂದ ಮಾತನಾಡಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರ್ಹಾವನ್ ಈ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

57

ಪುತ್ರ ಸಿಬ್ಬಂದಿಯೊಂದಿಗೆ ಜೊತೆ ಮಾತನಾಡುವಾಗ ಮಲೈಕಾ ಮತ್ತು ಅರ್ಬಾಜ್ ಜೊತೆ ನಿಂತು ಮಾತನಾಡುತ್ತಿದ್ದಾರೆ. ಇಬ್ಬರೂ ನಗುತ್ತಲೇ ಮಾತನಾಡಿರುವ ಫೋಟೋ ವೈರಲ್ ಆಗುತ್ತಿದೆ. 

67

ನೀವು ಕೋ-ಪೇರೆಂಟ್ ಡ್ಯೂಟಿಯನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದೀರಿ. ಇಷ್ಟೇ ಜವಾಬ್ದಾರಿಯಿಂದ ಆವನ ಭವಿಷ್ಯದ ಬಗ್ಗೆ, ನಿಮ್ಮ ಭವಿಷ್ಯದ ಚಿಂತೆ ಮಾಡಿದ್ದರೆ ನೀವು ಡಿವೋರ್ಸ್ ಪಡೆದುಕೊಳ್ಳುವ ಅಗತ್ಯವಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

77

ಟಿವಿ ಶೋಗಳ ನಿರೂಪಣೆ ಮಾಡಿಕೊಂಡು ಅರ್ಬಾಜ್ ಬ್ಯುಸಿಯಾಗಿದ್ದಾರೆ. ಜಿಮ್, ಪಾರ್ಟಿ, ವಾಕಿಂಗ್ ಯೋಗ ಅಂದುಕೊಂಡು ಹಾಟ್ ಮಲೈಕಾ ಸುದ್ದಿಯಲ್ಲಿರುತ್ತಾರೆ.

Read more Photos on
click me!

Recommended Stories