ರವೀನಾ ಟಂಡನ್‌ ಲಕ್ಷುರಿಯಸ್‌ ಬಂಗಲೆ ಫೋಟೋಸ್!

First Published | May 11, 2021, 7:01 PM IST

ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಆ್ಯಕ್ಟಿವ್ ಆಗಿದ್ದಾರೆ ಹಾಗೂ ಈ ಮೂಲಕ ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿದ್ದಾರೆ. ಸ್ಟಾರ್ಸ್‌ ಆಗಾಗ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈ ನಡುವೆ ಬಾಲಿವುಡ್‌ ನಟಿ  ರವೀನಾ ಟಂಡನ್ ಅವರ  ಮನೆ ಫೋಟೋಗಳು ಹರಿದಾಡುತ್ತಿವೆ. 

ಮುಂಬೈನ ಐಷಾರಾಮಿ ಪ್ರದೇಶವಾದ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ ನಟಿ ರವೀನಾ ಟಂಡನ್‌.
ರವೀನಾ ಅವರ ಸೀ ಫೇಸಿಂಗ್‌ ಬಂಗಲೆಹೆಸರು 'ನಿಲಯ'. ಪತಿ ಅನಿಲ್ ತಡಾನಿ ಮತ್ತು ಮಕ್ಕಳೊಂದಿಗೆ (ಮಗಳು ಸಶಾ ಮತ್ತು ಮಗ ರಣವೀರ್) ವಾಸಿಸುತ್ತಿದ್ದಾರೆ.
Tap to resize

ತಮ್ಮ ಕನಸಿನ ಮನೆಯನ್ನು ಪ್ರಕೃತಿಗೆ ಹತ್ತಿರವಾಗುತ್ತಿರುವಂತೆ ಡಿಸೈನ್‌ ಮಾಡಿದ್ದಾರೆ
'ಬಂಗಲೆಯ ಡಿಸೈನ್‌ನಲ್ಲಿ ಫ್ಯೂಶನ್‌ ಇರಬೇಕೆಂದು ಬಯಸಿದೆ. ನನಗೆ ಕೇರಳದ ಮನೆಗಳು ತುಂಬಾ ಇಷ್ಟ ಮತ್ತು ಅವುಗಳಿಂದ ಪ್ರೇರಣೆಗೊಂಡು ಈ ಮನೆಯನ್ನು ವಿನ್ಯಾಸಗೊಳಿಸಿದ್ದೇನೆ,' ಎಂದು ರವೀನಾ ತನ್ನ ಮನೆಯ ಬಗ್ಗೆ ಹೇಳುತ್ತಾರೆ.
ರವೀನಾ ಮನೆಯೊಳಗೆ ಕಾಲಿಟ್ಟು ಕೂಡಲೇಸುತ್ತಲೂ ಹಸಿರು ಗೋಚರಿಸುತ್ತದೆ. ಮನೆಹೊರಾಂಗಣವನ್ನು ಕಪ್ಪು, ಕೆಂಪು ಮತ್ತು ಬೂದು ಕಲ್ಲುಗಳಿಂದ ಅಲಂಕರಿಸಲಾಗಿದೆ.
ಕುಟುಂಬ ಸದಸ್ಯರು ಕುಳಿತು ಪ್ರಾರ್ಥನೆ ಸಲ್ಲಿಸಲು ದೇವಾಲಯವೂ ಇದೆ. ಅದನ್ನು ನಿರ್ಮಿಸುವಾಗ ವಾಸ್ತು ಬಗ್ಗೆ ಕಾಳಜಿ ವಹಿಸಲಾಗಿದೆ. ಇಡೀ ಸಮಯ ಸೂರ್ಯನ ಬೆಳಕು ಬರುವ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.
ಪ್ರವೇಶದ್ವಾರದ ಬಳಿ ಗಣಪತಿ ಸುಂದರ ಮೂರ್ತಿ ಸ್ಥಾಪಿಸಲಾಗಿದೆ.
ರವೀನಾ ಶಾಂತಿ ಪ್ರಿಯ ಎಂಬುದು ಅವರ ಮನೆಯಲ್ಲಿ ಕಂಡುಬರುತ್ತದೆ. ನನ್ನ ಮನೆಯಲ್ಲಿ ನಿಶಬ್ದವಾಗಿ ಕುಳಿತುಕೊಂಡರೆ, ಕೆಲವೇ ಕ್ಷಣಗಳಲ್ಲಿ ಪಕ್ಷಿಗಳು ಹಾಡುವ ಶಬ್ದವನ್ನು ನೀವು ಕೇಳುತ್ತೀರಿ ಎನ್ನುತ್ತಾರೆ ನಟಿ.
ನು ಬೆಳಗ್ಗೆ ಕಣ್ಣು ಬಿಟ್ಟಾಗ ಮನೆಯ ಕಿಟಕಿ ತೆರೆದ ಕೂಡಲೇ ಹಸಿರು ಹಾಗೂ ಹೂವುಗಳನ್ನು ನೋಡಬೇಕು ಎಂಬ ಕಲ್ಪನೆ ಯಾವಾಗಲೂ ಇತ್ತು. ಅದನ್ನು ನಾನು ಮನೆಯಲ್ಲಿ ನನ್ನ ಭಾವನೆಯನ್ನು ಸಾಕಾರಗೊಳಿಸಿದ್ದೇನೆ, ಎಂದು ಮನೆಯ ಬಗ್ಗೆ ಹೇಳಿದ ರವೀನಾ.
ಸಿಟ್ಟಿಂಗ್‌ ಏರಿಯಾ.
ರವೀನಾ ಟಂಡನ್ ಮನೆಯ ಡ್ರಾಯಿಂಗ್‌ ಏರಿಯಾ.
ಲೀವಿಂಗ್‌ ಏರಿಯಾದಲ್ಲಿ ರವೀನಾ ಟಂಡನ್.
ಅವರ ಮನೆಯ ಒಳಭಾಗ.
ಮನೆಯ ಗಾರ್ಡನ್‌ನಲ್ಲಿ ರವೀನಾ.
ತನ್ನ ಸುಂದರವಾದ ಬಂಗಲೆ ನಿಲಯದೊಳಗೆ ರವೀನಾ ಟಂಡನ್.

Latest Videos

click me!