ಬಿಳಿ ಸೀರೆಯಲ್ಲಿ ಮಹಾರಾಣಿ ಆಗಿ ಕಾಣಿಸಿಕೊಂಡ ಗರ್ಭಿಣಿ ಸೋನಂ ಕಪೂರ್!

First Published | Apr 4, 2022, 12:06 PM IST

ಮೊದಲ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಬಾಲಿವುಡ್ ನಟಿ ಸೋನಂ ಕಪೂರ್. 

ಬಾಲಿವುಡ್ ಸ್ಟೈಲಿಷ್ diva ಸೋನಂ ಕಪೂರ್ ತಾಯಿಯಾಗುತ್ತಿರುವ ವಿಚಾರ ರಿವೀಲ್ ಮಾಡುತ್ತಿದ್ದಂತೆ ಪ್ಯಾಪರಾಜಿಗಳು ಮತ್ತು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಕಣ್ಣು ಆಕೆಯ ಮೇಲಿದೆ. 
 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸೋನಂ ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಬಿಳಿ ಸೀರೆಯಲ್ಲಿ ಮಹಾರಾಣಿ ಹಾಗೆ ಕಾಣಿಸಿಕೊಂಡಿದ್ದಾರೆ. 
 

Tap to resize

ಕಳೆದ ರಾತ್ರಿ ಅಬು ಜಾನಿ ಹುಟ್ಟುಹಬ್ಬಕ್ಕೆ ಅಬು ಜಾನಿ ಡಿಸೈನ್ ಮಾಡಿರುವ ಉಡುಪು ಧರಿಸಿರುವೆ. ನನ್ನ ಸಹೋದರಿ ರಿಯಾ ಕಪೂರ್ ಸ್ಟೈಲ್ ಮಾಡಿಸಿರುವುದು ಎಂದು ಸೋನಂ ಬರೆದುಕೊಂಡಿದ್ದಾರೆ. 

 ಇದು ಆಫ್‌ ವೈಟ್‌ ಸ್ಯಾಟಿನ್ ಸೀರೆ ಆಗಿದ್ದು ಸೋನಮ್ ತಮ್ಮ ಬೇಬಿ ಬಂಪ್‌ನ ಫ್ಲಾಂಟ್ ಮಾಡುತ್ತಿದ್ದಾರೆ. ಸ್ಟೇಟ್ಮೆಂಟ್ ಸರ ಎರಡು ಬಳೆ ಧರಿಸಿರುವ ಸೋನು ಯಾರ ದೃಷ್ಟಿನೂ ತಾಗಬಾರದು ಎಂದು Eveil eye ಧರಿಸಿದ್ದಾರೆ. 

 ನಾಲ್ಕು ವರ್ಷಗಳ ಕಾಲ ಉದ್ಯಮಿ ಆನಂದ್‌ ಅಹುಜಾರನ್ನು ಪ್ರೀತಿಸಿ 2018ರಲ್ಲಿ ಅದ್ಧೂರಿಯಾಗಿ ಸೋನಂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಸ್ವಿಮ್‌ ಸೂಟ್‌ ಶೈಯಲ್ಲಿ ಉಡುಪು ಧರಿಸಿ ಮಾರ್ಚ್ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ ಸೋನಂ ಈಗ 5ನೇ ತಿಂಗಳಿ ಕಾಲಿಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈನ veg nonveg ಅಂಗಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಂ ಕಾಣಿಸಿಕೊಂಡರು.  ನೀಲಿ ಮತ್ತು ವೈಟ್ ಬಣ್ಣದ ಜಾಗರ್ಸ್‌ ಧರಿಸಿದ್ದರು.

Latest Videos

click me!