ಜಾನ್ ಅಬ್ರಹಾಂನ ಪರ್ಫೇಕ್ಟ್ ಬಾಡಿಯನ್ನು ಇಷ್ಟಪಡದೇ ಇರುವವರು ಯಾರು ಇಲ್ಲ . 49 ವರ್ಷ ವಯಸ್ಸಿನಲ್ಲೂ ಅವರು ಬಾಲಿವುಡ್‌ನ ಫಿಟ್ ಮತ್ತು ಆರೋಗ್ಯಕರ ತಾರೆಗಳಲ್ಲಿ ಒಬ್ಬರು. ಫಿಟ್ನೆಸ್ ವಿಚಾರದಲ್ಲಿ ಅವರು ತುಂಬಾ ಕಟ್ಟುನಿಟ್ಟಾದ ಡಯಟ್ ಚಾರ್ಟ್ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇದರೊಂದಿಗೆ, ಸಾಕಷ್ಟು ಕಠಿಣವಾದ ವ್ಯಾಯಾಮಗಳನ್ನು ಮಾಡಿ ಆಹಾರದಲ್ಲಿ ಹೆಚ್ಚು ಪ್ರೋಟೀನ್ ತೆಗೆದುಕೊಳ್ಳುತ್ತಾರೆ.
ಅವರು ತಮ್ಮ ಆಹಾರದಲ್ಲಿ ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಸೇರಿಸುತ್ತಾರೆ. ಇದರ ಹೊರತಾಗಿ ಮೊಳಕೆಕಾಳು,ಸೊಪ್ಪುಗಳನ್ನು ಹೆಚ್ಚು ಸೇವಿಸುವ ಜಾನ್ ತನ್ನ ಆಹಾರದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ. ಫೈಬರ್‌ಗಾಗಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ತೆಗೆದುಕೊಳ್ಳಲು ನಾನು ಇಷ್ಟಪಡುತ್ತೇನೆ ಎನ್ನುತ್ತಾರೆ ನಟ.
ಬೆಳಗಿನ ಉಪಾಹಾರಕ್ಕಾಗಿ, ಜಾನ್ ನಾಲ್ಕು ಮೊಟ್ಟೆಗಳು, ಒಂದು ಆಲೂಗಡ್ಡೆ ಅಥವಾ ಗೆಣಸು, ಗ್ರೀನ್ ಟೀ ಅಥವಾ ಬ್ಲ್ಯಾಕ್ ಕಾಫಿಯೊಂದಿಗೆ ತಿನ್ನುತ್ತಾರೆ. ಇದಲ್ಲದೆ, ಅವರು ಬಾದಾಮಿ, ಒಂದು ಲೋಟ ಜ್ಯೂಸ್ ಮತ್ತು ಟೋಸ್ಟ್ ಅನ್ನು ಬೆಳಗಿನ ಆರಂಭದಲ್ಲಿ ತೆಗೆದುಕೊಳ್ಳುತ್ತಾರೆ. ಮಧ್ಯಾಹ್ನದ ಊಟಕ್ಕೆ ಅವರು ಸರಳವಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ. ಇದರಲ್ಲಿ ಬೇಳೆ, ಅನ್ನ, ರೊಟ್ಟಿ, ಮೀನು ಅಥವಾ ಚಿಕನ್ ಇರುತ್ತದೆ.
ಅದೇ ಸಮಯದಲ್ಲಿ, ಡಿನ್ನರ್‌ನಲ್ಲಿ ಬೇಯಿಸಿದ ತರಕಾರಿಗಳು, ಸಲಾಡ್ ಅಥವಾ ಸೂಪ್ ಇರುತ್ತದೆ. ಜಾನ್ ರಾತ್ರಿ 9 ಗಂಟೆಯ ಮೊದಲು ತಮ್ಮ ಊಟ ಮುಗಿಸುತ್ತಾರೆ .ಇದರೊಂದಿಗೆ, 'ಸೂಪರ್ ಸೋಲ್ಜರ್' ತನ್ನನ್ನು ಮದ್ಯ ಮತ್ತು ಸಿಗರೇಟ್‌ಗಳಿಂದ ದೂರವಿಟ್ಟಿದ್ದಾರೆ. ಇದಲ್ಲದೆ, ಅವರು ಶುಗರ್‌ಲೆಸ್ ಜೀವನವನ್ನು ಇಷ್ಟಪಡುತ್ತಾರೆ.
ಇತ್ತೀಚೆಗೆ, ಅವರು ಸಂದರ್ಶನವೊಂದರಲ್ಲಿ 27 ವರ್ಷಗಳಿಂದ ತನ್ನ ನೆಚ್ಚಿನ ಸಿಹಿತಿಂಡಿಗಳನ್ನು ಸೇವಿಸಿಲ್ಲ. ಕಾಜು ಕಟ್ಲಿ ಅವರ ಫೇವರೇಟ್ ಅಂತೆ ಆದರೆ ಅವರು ಅದನ್ನು ಫಿಟ್ನೆಸ್‌ಗಾಗಿ ತಿನ್ನುವುದಿಲ್ಲ ಎಂದು ಹೇಳಿದ್ದಾರೆ.
ವ್ಯಾಯಾಮದ ಬಗ್ಗೆ ಮಾತನಾಡುತ್ತಾ, ಜಾನ್ ವಾರದಲ್ಲಿ ನಾಲ್ಕು ದಿನ ವರ್ಕೌಟ್ ಮಾಡುತ್ತಾರೆ. ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯುವ ಜಾನ್ ಸೈಕ್ಲಿಂಗ್, ರನ್ ಮತ್ತು ಫುಟ್ಬಾಲ್ ಆಡುವ ಮೂಲಕ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ.
ಅದೇ ಸಮಯದಲ್ಲಿ, ನಟನು ತನ್ನ ವರ್ಕೌಟ್ ಬಗ್ಗೆ 'ತಾನು ವರ್ಕೌಟ್ ಅನ್ನು ಎರಡು ಸೆಷನ್‌ಗಳಾಗಿ ವಿಂಗಡಿಸಿದ್ದೇನೆ. ಮೇಜರ್ ಮತ್ತು ಮೈನರ್' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.ಇದರೊಂದಿಗೆ, ಅವರು ಹೆಚ್ಚು ಬಾಡಿ ಬಿಲ್ಡಿಂಗ್ ಮಾಡುತ್ತಾರೆ. ಒಂದು ದಿನದಲ್ಲಿ ತಮ್ಮ ದೇಹದ ಎರಡು ಭಾಗಗಳಿಗೆ ಮಾತ್ರ ವ್ಯಾಯಾಮ ಮಾಡುತ್ತಾರೆ.
ಜಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ಪ್ರಿಯಾ ರುಂಚಲ್ ಅವರ ಜೊತೆ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ. ಈ ಹಿಂದೆ ಅವರು ಬಿಪಾಶಾ ಬಸು ಜೊತೆ ಡೇಟಿಂಗ್ ಮಾಡಿದ್ದರು. ಇಬ್ಬರ ಸಂಬಂಧ 9 ವರ್ಷಗಳ ಕಾಲ ನಡೆಯಿತು. 2011ರಲ್ಲಿ ಇಬ್ಬರ ನಡುವೆ ಬಿರುಕು ಮೂಡಿತ್ತು.