ಕೃತಿ ಮೊದಲು ಬಣ್ಣ ಹಚ್ಚಿದ್ದು ತೆಲುಗು ಸಿನಿಮಾ 'ನೇನೊಕ್ಕಡಿನೇ' ಮೂಲಕ. ಅದರಲ್ಲಿ ಮಹೇಶ್ ಬಾಬು ಹೀರೋ. ಅದಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು ಕೃತಿ.
ಹೊಸದಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದಾಗ ತಮಗಾಗಿದ್ದ ಕಹಿ ಅನುಭವವನ್ನು ಅವರು ಈಗ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಫೋಟೋಶೂಟ್ ಮಾಡಿಸುವಾಗ ಕಣ್ಣೀರು ಹಾಕಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ನನ್ನ ಮೊದಲ ಫೋಟೋಶೂಟ್ ಮಾಡುವಾಗ ನಾನು ತುಂಬ ನರ್ವಸ್ ಆಗಿದ್ದೆ. ನನಗೆ ಇನ್ನೂ ಚೆನ್ನಾಗಿ ಅದು ನೆನಪಿದೆ. ನಾನು ಅಳುತ್ತಲೇ ಮನೆಗೆ ಬಂದೆ. ಯಾಕೆಂದರೆ, ಅಂದು ನಾನು ಚೆನ್ನಾಗಿ ಮಾಡಿರಲಿಲ್ಲ.
ಎಲ್ಲ ಕೆಲಸವನ್ನೂ ಪರ್ಫೆಕ್ಟ್ ಆಗಿ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಆ ದಿನ ಫೋಟೋಶೂಟ್ ನಾನು ಅಂದುಕೊಂಡ ರೀತಿ ಬರಲಿಲ್ಲ.
ಇದಕ್ಕಾಗಿ ಬೇಸರ ಆಗಿತ್ತು. ಫೋಟೋಶೂಟ್ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕುತ್ತ ಮನೆಗೆ ಬಂದೆ ಎಂದಿರುವ ನಂತರ ತಮ್ಮ ತಪ್ಪುಗಳಿಂದಲೇ ಪಾಠ ಕಲಿತೆ ಎಂದಿದ್ದಾರೆ.
ಅಂದಹಾಗೆ ಕೃತಿ ಅವರ ತಾಯಿ ಪ್ರೊಫೆಸರ್ ಆದವರು. ಈ ಬಗ್ಗೆ ಹೇಳಿಕೊಂಡಿರುವ ಕೃತಿ, 'ನನ್ನ ತಾಯಿ ಪ್ರೊಫೆಸರ್ ಆಗಿದ್ದರು. ನಮ್ಮ ಕುಟುಂಬದಲ್ಲಿ ಮೊದಲ ಉದ್ಯೋಗಸ್ಥ ಮಹಿಳೆ ಅವರೇ ಆಗಿದ್ದರು. ನಮ್ಮಮ್ಮ ಗರ್ಭಿಣಿ ಆಗಿದ್ದಾಗಲೇ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದರು' ಎಂದಿದ್ದಾರೆ.