ಸಿದ್ದುಗೆ ಲಿಪ್ ಕಿಸ್ ಕೊಟ್ಟ ಮೂಡ್‌ನಲ್ಲಿಯೇ ಫೋಟೋ ಪೋಸ್ ಕೊಟ್ಟ ಅನುಪಮಾ ಪರಮೇಶ್ವರನ್!

First Published | Mar 17, 2024, 9:57 PM IST

ದಕ್ಷಿಣ ಭಾರತದಲ್ಲಿ ವಯಸ್ಕರನ್ನು ನಿದ್ದೆಗಡಿಸುತ್ತಿರುವ ಡಿಜೆ ಟಿಲ್ಲು ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ತುಂಬಾ ಹಾಟ್ ಅಂಡ್ ಸೆಕ್ಸಿಯಾಗಿ ನಟಿಸಿದ್ದಾರೆ. ಜೊತೆಗೆ, ಈ ಚಿತ್ರದ ನಾಯಕ ಸಿದ್ದು ಅವರೊಂದಿಗೆ ಲಿಪ್ ಲಾಕ್ ಕೂಡ ಮಾಡಿದ್ದಾರೆ. ಈಗ ಲಿಪ್‌ಕಿಸ್ ಮೂಡ್‌ನಲ್ಲಿಯೇ ಅನುಪಮಾ ಮುತ್ತಿಡುವ ಪೋಸ್‌ನ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೂ ಹರಿಬಿಟ್ಟಿದ್ದಾಳೆ.
 

ಹೌದು, ದಕ್ಷಿಣ ಭಾರತದ ಬಹುಬೇಡಿಕೆ ನಟಿ ಅನುಪಮಾ ಪರಮೇಶ್ವರನ್ ಅವರ ಹೊಸ ಅವತಾರ ಡಿಜೆ ಟಿಲ್ಲು ಚಿತ್ರದಲ್ಲಿ ನೋಡಬಹುದು. ಡಿಜೆ ಟಿಲ್ಲು ಸೀಕ್ವೆಲ್ ಆಗಿ ಟಿಲ್ಲು ಸ್ಕ್ವೇರ್ ಅನ್ನು ಬ್ಲಾಕ್ ಬಸ್ಟರ್ ಆಗಿ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸುತ್ತಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ತಿಲ್ಲಣ್ಣ ಇಳಗಾಯ್ತೆ ಎಳೆಗಣ್ಣಾ ಹಾಡಿಗೆ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಟೀಸರ್‌ನಲ್ಲಿ ಲಿಪ್‌ಲಾಕ್ ಮತ್ತು ಸೆಕ್ಸ್‌ ಕುರಿತ ಡೈಲಾಗ್‌ಗಳನ್ನು ಕೇಳಿದ ಯವಕರು ಶಿಳ್ಳೆ ಹೊಡೆಯುತ್ತಿದ್ದಾರೆ.  
 

Tap to resize

ಡಿಜೆ ಟಿಲ್ಲೂನಲ್ಲಿ ಸಿದ್ದು ಮತ್ತು ನೇಹಾ ಶೆಟ್ಟಿ ನಡುವಿನ ಪ್ರಣಯ ಒಂದು ರೇಂಜ್‌ನಲ್ಲಿ ಆಕರ್ಷಕವಾಗಿದೆ. ಟಿಲ್ಲು ಸ್ಕ್ವೇರ್‌ನಲ್ಲಿ ಅನುಪಮಾ ಮತ್ತು ಸಿದ್ದು ಅದನ್ನು ಮೀರಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅನುಪಮಾಳ ಇನ್ನೊಂದು ರೂಪವೆಂದೇ ಹೇಳಬಹುದು.

ಟಿಲ್ಲು ಸ್ಕ್ವೇರ್‌ನಿಂದ ಬರುವ ಪ್ರತಿಯೊಂದು ಪೋಸ್ಟರ್ ರೊಮ್ಯಾಂಟಿಕ್ ಆಗಿದೆ. ಪೋಸ್ಟರ್ ನಲ್ಲಿಯೇ ಹೀಗಾದರೆ ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾನ್ಸ್ ಹೇಗಿರುತ್ತೆ ಅಂತ ಎಲ್ಲರೂ ಶಾಕ್ ಆಗಿದ್ದಾರೆ. 

ಇದರ ನಡುವೆ ಅನುಪಮಾ ಟಿಲ್ಲು ಸ್ಕ್ವೇರ್‌ನಲ್ಲಿನ ಪಾತ್ರದಿಂದ ಹೊರಬರಲು ಸಾಧ್ಯವಾಗಲಿಲ್ಲ. ಇತ್ತೀಚೆಗಷ್ಟೇ ಓ ಮೈ ಲಿಲಿ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ನಾಳೆ (ಮಾರ್ಚ್ 18 ರಂದು) ಸಂಪೂರ್ಣ ಹಾಡು ಬಿಡುಗಡೆಯಾಗಲಿದೆ. 
 

ಇದರ ಬೆನ್ನಲ್ಲಿಯೇ ಅನುಪಮಾ ನೀಲಿ ಸೀರೆಯಲ್ಲಿ ಸೆಲ್ಫಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ಟಿಲ್ಲು ಸಿನಿಮಾದ ಮೂಡ್ ಇನ್ನೂ ಹೋಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
 

ಅನುಪಮಾ ಟಿಲ್ಲು ಸಿನಿಮಾದ ಲಿಲಿ ಪಾತ್ರದಿಂದ ಹೊರಬರಲು ಸಾಧ್ಯವಾಗಿಲ್ಲ ಎಂಬಂತೆ ಕಾಣಿಸುತ್ತಿದೆ. ಇನ್ನು ಅವರ ಪೋಸ್ಟ್‌ನಲ್ಲಿ ಲಿಲ್ಲಿಯಂತೆ ಕೊನೆಯ ಬಾರಿಗೆ ದಂಗಾಗಿ ಹೋಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಗಳು ಕೂಡ ತೀವ್ರವಾಗಿವೆ. ಈಗಾಗಲೇ ಅನುಪಮಾ ರೌಡಿ ಬಾಯ್ಸ್ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದು, ಟಿಲ್ಲು ಸ್ಕ್ವೇರ್ ಲಿಪ್‌ಲಾಕ್‌ನ ಎಲ್ಲ ಎಲ್ಲೆಗಳನ್ನೂ ಮೀರಿಸಿದ್ದಾರೆ. ಇನ್ನು ಟಿಲ್ಲು ಸ್ಕ್ವೇರ್‌ ಸಿನಿಮಾ ಮಾರ್ಚ್ 29 ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ.
 

Latest Videos

click me!