ಸವಲತ್ತು ಸಿಕ್ತು ಸುಲಭವಾಗಿ ಬಂದೆ ಹಾಗಂತ ಶ್ರಮ ಹಾಕಿಲ್ವಾ?; ಗರಂ ಆದ ಅಲಿಯಾ ಭಟ್

Published : Mar 18, 2024, 01:40 PM IST

ಪದೇ ಪದೇ ನೆಪೋಟಿಸಂ ಕಿಡ್‌ ಎಂದು ಆಲಿಯಾ ಭಟ್‌ನ ಟಾರ್ಗೆಟ್ ಮಾಡುತ್ತಿರುವ ನೆಟ್ಟಿಗರಿಗೆ ಉತ್ತರ ಕೊಟ್ಟ ಸುಂದರಿ. 

PREV
16
ಸವಲತ್ತು ಸಿಕ್ತು ಸುಲಭವಾಗಿ ಬಂದೆ ಹಾಗಂತ ಶ್ರಮ ಹಾಕಿಲ್ವಾ?; ಗರಂ ಆದ ಅಲಿಯಾ ಭಟ್

ಬಾಲಿವುಡ್‌ನ ಕೆಲವು ಸ್ಟಾರ್ ಕಿಡ್ ವಿರುದ್ಧ ಅನೇಕರು ಆಕ್ರೋಶ ಹೊರಹಾಕುಕ್ತಿದ್ದಾರೆ. ನಟಿ ಅಲಿಯಾ ಭಟ್ ವಿರುದ್ಧವೂ ಅನೇಕರು ಕಿಡಿ ಕಾರಿದ್ದರು. ನೆಪೋ ಕಿಡ್ ಎಂದು ಜರಿದಿದ್ದರು. ಇದೀಗ ಮತ್ತೆ ಅಲಿಯಾ ಭಟ್ ಸ್ಟಾರ್ ಕಿಡ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

26

 ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಸಿನಿಮಾರಂಗದಲ್ಲಿ ಅವಕಾಶಗಳು ಸುಲಭವಾಗಿ ಸಿಕ್ಕಿತು, ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡುವಂತಾಯಿತು ಎಂದು ಅಲಿಯಾ ಟೀಕೆಗಳನ್ನು ಎದುರಿಸಿದರು. 
 

36

ಕಳೆದ ಎರಡು ವರ್ಷಗಳಿಂದ ಈ ಮಾತು ಕೇಳುತ್ತಿದ್ದೇನೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಮತ್ತೊಬ್ಬರ ಕನಸುಗಳಿಗೆ ಹೋಲಿಸುತ್ತೇನೆ.

46

ಕನಸುಗಳಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರ ಕನಸುಗಳು ಒಂದೇ. ಎಲ್ಲರ ಆಸೆಯೂ ಒಂದೇ. ನನಗೆ ಸುಲಭವಾಗಿ ಎಂಟ್ರಿ ಕೊಟ್ಟೆ, ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. 

56

ಈ ಕಾರಣಕ್ಕೆ ನಾನು ನನ್ನ 100 ಪರ್ಸೆಂಟ್ ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ತೆಗೆದುಕೊಂಡಿಲ್ಲ.ಸ್ಟಾರ್ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಆದರೆ ಹಾಗಂತ ತನ್ನ ಕೆಲಸವನ್ನು ಹಗುರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.  

66

ಸಿನಿಮಾ ಜೀವನ ಉತ್ತುಂಗದಲ್ಲಿ ಇರುವಾಗಲೇ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾಗಿ ವರ್ಷದೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯ ಮಗಳ ಆರೈಕೆ ಜೊತೆಗೆ ಅಲಿಯಾ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

Read more Photos on
click me!

Recommended Stories