ಯಾವ ಅರಮನೆಗೂ ಕಮ್ಮಿ ಇಲ್ಲ ಬಾಲಿವುಡ್ ಕಿಂಗ್ ಶಾರುಖ್ ಖಾನ್ 200 ಕೋಟಿ ಮೌಲ್ಯದ ಬಂಗಲೆ ‘ಮನ್ನತ್’

First Published | Sep 13, 2024, 2:29 PM IST

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬೃಹತ್ ಬಂಗಲೆಯಲ್ಲಿ ನೆಲೆಸಿರೋದು ಅನ್ನೋದು ಗೊತ್ತು, ಆ ಭವ್ಯ ಬಂಗಲೆ ಒಳಗೆ ಹೇಗಿದೆ ಅನ್ನೋದರ ಇಣುಕು ನೋಟ ಇಲ್ಲಿದೆ. 
 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Sharukh Khan) ಅರಮನೆಯಂತಹ ಭವ್ಯ ಬಂಗಲೆ ಮನ್ನತ್ ನೋಡೋದಕ್ಕೆ ಅಭಿಮಾನಿಗಳು ತುದಿ ಕಾಲಲ್ಲಿ ಕಾಯ್ತಿರ್ತಾರೆ. ನಿಮಗೂ ಕಿಂಗ್ ಖಾನ್ ಅರಮನೆ ನೋಡೋ ಕಾತುರ ಇದ್ರೆ ಇಲ್ಲಿದೆ, ಮನೆಯ ಇನ್ ಸೈಡ್ ಪಿಕ್ಸ್. 
 

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಒಡೆತನದ ಮನೆಯೇ ಮನ್ನತ್. ಈ ಮನೆಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ (Gouri Khan) ಸ್ವತಃ ತಾವೇ ಡಿಸೈನ್ ಮಾಡಿದ್ದಾರೆ. 

Tap to resize

ಶಾರುಖ್ ಖಾನ್ ರ ಈ ಭವ್ಯ ಅರಮನೆ ಮುಂಬೈನಲ್ಲಿದೆ. ಈ ಬಂಗಲೆಯನ್ನು ಶಾರುಖ್ ಖಾನ್ 2001ರಲ್ಲಿ ಖರೀದಿಸಿದ್ದರು. ಬಳಿಕ ಶಾರುಖ್ ಇದಕ್ಕೆ ಮನ್ನತ್ (Mannath) ಎಂದು ಹೆಸರಿಟ್ಟಿದ್ದರು. 
 

ಗೌರಿ ಖಾನ್ ತಮ್ಮ ಪತಿಗಾಗಿ ಮನೆಯಲ್ಲಿ ಸ್ಪೆಷಲ್ ಕಾರ್ನರ್ ಒಂದನ್ನ ಮಾಡಿದ್ದಾರೆ. ಅಲ್ಲಿ ಶಾರುಖ್ ಖಾನ್ ಗೆ ದೊರೆತಂತಹ ಅವಾರ್ಡ್ ಗಳನ್ನು ವಿಶೇಷವಾಗಿ ಡೆಕೋರ್ ಮಾಡಲಾಗಿದೆ. 

ಶಾರುಖ್ ಖಾನ್ ಮನೆ ಮನ್ನತ್ ತುಂಬಾನೆ ಸ್ಪೇಸಿಯಸ್ ಆಗಿದೆ. ಇಲ್ಲಿದೆ ಡ್ರೆಸ್ಸಿಂಗ್ ರೂಮ್ ನಿಂದ ಹಿಡಿದು, ತಮ್ಮ ಚಪ್ಪಲ್ ಗಳನ್ನು ಇಡೋದಕ್ಕೂ ಸುಂದರವಾದ ಕೋಣೆಯನ್ನು ನಿರ್ಮಾಣ ಮಾಡಿದ್ದಾರೆ ಗೌರಿ ಖಾನ್. 
 

ಸಿನಿಮಾ ಪ್ರಿಯರಾಗಿರುವ ಶಾರುಖ್ ಮನೆಯಲ್ಲಿ ಬೃಹತ್ ಹೋಮ್ ಥಿಯೇಟರ್ (mini theatre) ಕೂಡ ಇದೆ. ಅದು ತುಂಬಾನೆ ಲಕ್ಸುರಿಯಾಗಿದ್ದು, ವೆಲ್ವೆಟ್ ವಾಲ್ ಡಿಸೈನಿಂಗ್ ಹೊಂದಿದೆ. ಥಿಯೇಟರ್ ಎಂಟ್ರೆನ್ಸ್ ನಲ್ಲಿ ಶೋಲೆ, ಮುಘಲ್ ಈ ಆಜಮ್ ಮತ್ತು ಶೋಲೆ ಚಿತ್ರದ ಪೋಸ್ಟರ್ ಗಳಿವೆ. 
 

ಡಿಸೈನರ್ ನಿಯೋಕ್ಲಾಸಿಕಲ್ ಅಂಶಗಳು, ಇಟಾಲಿಯನ್ ವಾಸ್ತುಶಿಲ್ಪ ಮತ್ತು ಪ್ರಪಂಚದಾದ್ಯಂತದ ಕಲಾಕೃತಿಗಳ ಅಪರೂಪದ ಸಂಯೋಜನೆ ಮೂಲಕ ಶಾರುಖ್ ಮನೆಯ ಡ್ರಾಯಿಂಗ್ ರೂಮ್ ಗೆ ರಾಯಲ್ ಲುಕ್ ನೀಡಲಾಗಿದೆ. ಈ ಭಾಗ ಮನೆಯ ಮುಖ್ಯ ಆಕರ್ಷಣೆಯಾಗಿದೆ. 
 

ಶಾರುಖ್ ಮನೆಯ ಲಿವಿಂಗ್ ರೂಮ್ ನ ನೋಡೊದಕ್ಕೆ ರಿಚ್ ಆಗಿದೆ. ಡ್ರಾಯಿಂಗ್ ರೂಮ್ ಗೆ ವಿರುದ್ಧವಾಗಿ, ಲಿವಿಂಗ್ ರೂ ಡಿಸೈನ್ ಮಾಡಲಾಗಿದೆ.  ಲಿವಿಂಗ್ ಸ್ಪೇಸ್ (living space) ಗೆ ರಾ ಟಚ್ ನೀಡಲಾಗಿದೆ, ಜೊತೆಗೆ ಇಲ್ಲಿನ ಅನ್ ಫಿನಿಶ್ಡ್ ಲುಕ್ ಮನೆಯ ವೈಭವವನ್ನು ಹೆಚ್ಚಿಸುತ್ತೆ. 
 

ಇನ್ನು ಶಾರುಖ್ ಮನೆ ಎಂದ ಮೇಲೆ ಕೇಳಬೇಕೆ? ಆರು ಮಳಿಗೆಯ ಮನೆಯಲ್ಲಿ ಎವಿಲೇಟರ್ ವ್ಯವಸ್ಥೆ ಇದೆ. ಅಷ್ಟೇ ಅಲ್ಲ, ಮನೆಯ ಸ್ಟೆಪ್ಸ್ ಗಳನ್ನು ವುಡನ್ ನಲ್ಲಿ ತಯಾರಿಸಿದ್ದು, ಮನೆಯ ಹೆಚ್ಚಿನ ಡೆಕೋರೇಶನ್ ಗಾಗಿ ವುಡನ್ ಹಾಗೂ ವಿವಿಧ ದೇಶಗಳ ಸ್ಪೆಷಲ್ ಇಂಟಿರಿಯರ್ ಬಳಸಿ ಮಾಡಲಾಗಿದೆ. 
 

ಮನ್ನತ್ (Mannat) ಕುರಿತಾಗಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಹೇಳ್ತೀವಿ ಕೇಳಿ. ಮನ್ನತ್ ಬಂಗಲೆಯನ್ನು ಮೊದಲು ಸಲ್ಮಾನ್ ಖಾನ್ ಖರೀದಿ ಮಾಡಬೇಕು ಅಂದುಕೊಂಡಿದ್ದರಂತೆ. ಆದರೆ ಸಲ್ಮಾನ್ ತಂದೆ ಸಲೀಂ, ಇಷ್ಟು ದೊಡ್ಡ ಬಂಗಲೆ ತಮಗೆ ಬೇಡ ಅಂದಿದ್ದಕ್ಕೆ ನಂತರ ಅದನ್ನು ಖರೀದಿಸುವ ಯೋಚ್ನೆ ಕೈಬಿಟ್ಟರು. ಇದೀಗ ಶಾರುಖ್ ಖಾನ್ ಭವ್ಯ ಬಂಗಲೆ ದೇಶದ ಜನರ ಫೇವರಿಟ್ ಸ್ಪಾಟ್ ಆಗಿದೆ. 
 

Latest Videos

click me!