ಸುಶಾಂತ್‌ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ

First Published | Jul 18, 2020, 4:47 PM IST

ನಟ ಸುಶಾಂತ್ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದಾರೆಂಬ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ವಿರುದ್ಧ ದೂರು ದಾಖಲಾಗಿದೆ.. ಸಾಕ್ಷಿ ಆಧಾರಗಳನ್ನು ದಾಖಲಿಸಿ ಸಾಬೀತು ಮಾಡದಿದ್ದರೆ, ಪದ್ಮಿಶ್ರೀ ಪ್ರಶಸ್ತಿ ಹಂದಿರುಗಿಸುತ್ತಾರಂತೆ!
 

ಜುಲೈ 14ರಂತ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆ ಮಾಡಕೊಂಡ ನಟ ಸುಶಾಂತ್.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಹೌದಾದರೂ, ಅಂಥದ್ದೊಂದು ಪರಿಸ್ಥಿತಿಗೆ ತಳ್ಳಿ, ಪ್ರತಿಭಾನ್ವಿತನನ್ನು ಪ್ಲ್ಯಾನ್ಡ್‌ ಮರ್ಡರ್‌ ಮಾಡಲಾಗಿದೆ ಎಂಬ ಆರೋಪವಿದೆ.
Tap to resize

ಸುಶಾಂತ್‌ ಸಿಂಗ್‌ ಸಾವಿಗೆ , ನ್ಯಾಯ ಸಿಗಬೇಕೆಂದು ಪ್ರತಿಕ್ಷಣವೂ ಹೋರಾಡುತ್ತಿರುವ ಕಂಗನಾ ವಿರುದ್ಧ ದೂರು ದಾಖಲಾಗಿದೆ.
ಸುಶಾಂತ್ ಸಾವಿನ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಂಗನಾ ವಿರುದ್ಧ ಪೊಲೀಸರು ಸಮನ್ಸ್‌ ಕೇಸ್‌ ದಾಖಲಿಸಿದ್ದಾರೆ.
ಬಾಲಿವುಡ್‌ನಲ್ಲಿ ನಡೆದ ಗುಂಪುಗಾರಿಕೆ, ನೆಪೋಟಿಸಮ್ ಮತ್ತು ಆವಕಾಶಗಳ ಮಾಫಿಯಾ ಬಗ್ಗೆ ಆರೋಪಿದ್ದಾರೆ.
ವಿಡಿಯೋದಲ್ಲಿ ಅನೇಕ ಸಿನಿಮಾ ನಟ-ನಟಿಯರ ಹೆಸರು ಬಳಸಿರುವ ಕಾರಣ ದೂರು ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕಿದೆ.
'ಮುಂಬೈ ಪೊಲೀಸರು ನನ್ನ ವಿರುದ್ಧ ಸಮನ್ಸ್‌ ಹಾಕಿದ್ದಾರೆ, ನಾನು ಮನಾಲಿಯವ್ವಿಪುವ ಇರುವ ಕಾರಣ ಯಾರನಾದ್ದರೂ ನನ್ನ ಬಳಿ ಕಳುಹಿಸಿ, ಹೇಳಿಕೆ ಪಡೆಯ ಬಹುದು ಎಂದಿದ್ರಾರೆ ಕ್ವೀನ್ ನಟಿ.
ಅಂದು ಕರೆ ಬಂದ ನಂತರ ನನಗೆ ಯಾವುದೇ ಮುಂದಿನ ಮಾಹಿತಿ ಸಿಕ್ಕಿಲ್ಲ'
'ದೂರು ದಾಖಲಾಗಿರುವ ಪ್ರತಿ ವಾಕ್ಯವನ್ನು ನಾನು ಸ್ಪಷ್ಟತೆ ನೀಡುತ್ತೇನೆ. ಸುಳ್ಳು ಎಂದಾದರೆ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವೆ' ಎಂದು ಸವಾಲು ಹಾಕಿದ್ದಾರೆ.
ಈ ವಿಚಾರದಲ್ಲಿ ನೆಟ್ಟಿಗರು ನಾವು ಕಂಗನಾ ಪರ ಇದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Latest Videos

click me!