ಮುಂಬೈ (ಜು. 17) ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನೇ ಹೋಲುವ ಕಾಶ್ಮೀರದ ಜುನೈದ್ ಶಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವು ಟಿವಿ ಶೋಗಳಲ್ಲಿ ಭಾಗವಹಿಸಿ ಸಿನಿಮಾದಲ್ಲಿ ಮಿಂಚಬೇಕು ಎಂದಿದ್ದವರು ಕೊನೆ ಉಸಿರು ಎಳೆದಿದ್ದಾರೆ. ಗುರುವಾರ ರಾತ್ರಿ ಹೃದಯಾಘಾತದಿಂದ ಜುನೈದ್ ಶ್ರೀನಗರದ ಇಹಾಲಿ ಭಾಘ್ ನಲ್ಲಿ ನಿಧನರಾಗಿದ್ದಾರೆ. ಮಾಡೆಲ್ ಮತ್ತು ನಟನಾಗಿಯೂ ಜುನೈದ್ ಗುರುತಿಸಿಕೊಂಡಿದ್ದರು. ತಮ್ಮ ತಂದೆಯನ್ನು ನೋಡಿಕೊಳ್ಳಿವ ಸಲುವಾಗಿ ಶ್ರೀನಗರಕ್ಕೆ ವಾಪಸಾಗಿದ್ದರು. ದೆಹಲಿಯಲ್ಲಿ ವಿದ್ಯಾಭ್ಯಾಸ ಪಡೆದುಕೊಂಡಿದ್ದ ಜುನೈದ್ ನಂತರ ಬಣ್ಣದ ಲೋಕದ ಕಡೆಗೆ ಕಾಲಿಟ್ಟಿದ್ದರು. ಅಗಲಿದ ಹಿರಿಯನ ನಟ ರಿಶಿ ಕಪೂರ್ ಸಹ ಜುನೈದ್ ಪೋಟೋ ಹಿಂದೊಮ್ಮೆ ಶೇರ್ ಮಾಡಿದ್ದರು. ಜೂಮ್ ಟಿವಿ, ಎಂಟಿವಿ, ಜೀ ಟಿವಿ ಸೇರಿದಂತೆ ಹಲವು ವಾಹಿನಿಗಳ ಶೋನಲ್ಲಿ ಭಾಗವಹಿಸಿದ್ದರು. Ranbir Kapoor's doppelganger from Kashmir, Junaid Shah, passed away due to a cardiac arrest ಕಾಶ್ಮೀರ ಮೂಲದ ಜೂ. ರಣಬೀರ್ ಕಪೂರ್ ಇನ್ನು ನೆನಪು ಮಾತ್ರ