ಬಾಲಿವುಡ್ ಎವರ್ ಗ್ರೀನ್ ಡೀವಾ ಶ್ರೀದೇವಿ ಪುತ್ರಿ ತಾಯಿಯ ಲೆಗೆಸಿ ಕಾಪಾಡಿಕೊಳ್ಳಲು ಚಿತ್ರರಂಗಕ್ಕೆ ಕಾಲಿಟ್ಟು ಕೈ ತುಂಬಾ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ.
ನಿರ್ದೇಶಕ ಕರಣ್ ಜೋಹಾರ್ ಆಕೆಯನ್ನು 'ದಡಕ್' ಚಿತ್ರದ ಮೂಲಕ ಲಾಂಚ್ ಮಾಡಿದ್ದರು. ಸಿನಿಮಾ ರಿಲೀಸ್ ಆಗುವ ಮುನ್ನವೇ ಶ್ರೀದೇವಿ ಅಗಲಿದರು. ಹೀಗಾಗಿ ಜಾಹ್ನವಿ ಮತ್ತೆ ಮಗುವಾದಳು.
ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಮಾನ ಗಳಿಸಿರುವ ಜಾಹ್ನವಿ ಈಗಲೂ ತಾಯಿ ಹೇಳಿಕೊಟ್ಟಿರುವ ಕೆಲವೊಂದು ರೂಲ್ಸ್‌ನ ತಪ್ಪದೆ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಆಕೆಯ ಸ್ಟೈಲ್ ತುಂಬಾನೇ ಡಿಫರೆಂಟ್.
ಕೆಲವು ದಿನಗಳ ಹಿಂದೆ ಜಾಹ್ನವಿ ಕಪೂರ್ ಕನ್ನಡಿಯ ಮುಂದೆ ಹಾಟ್ ಸಿಂಗಲ್ ಪೀಸ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿರುವ ಫೋಟೋ ಅಪ್ಲೋಡ್ ಮಾಡಿದ್ದರು.
ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಸೆಲೆಬ್ರಿಟಿಗಳು ಕೂಡ ಫೋಟೋಗೆ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ. ಜಾಹ್ನವಿ ಇದೇ ಮೊದಲ ಬಾರಿ ಈ ರೀತಿ ಫೋಟೋ ಅಪ್ಲೋಡ್ ಮಾಡಿರುವುದು.
ಫೋಟೋದಲ್ಲಿ ಜಾಹ್ನವಿ ಕಪೂರ್ ಆದರೆ ಆಕೆ ಹಿಂದಿರುವ ವಸ್ತುಗಳು? ತಮ್ಮ ಡ್ರೆಸಿಂಗ್ ರೂಮ್‌ನಲ್ಲಿ ಫೋಟೋ ಕ್ಲಿಕ್ ಮಾಡಲಾಗಿದೆ. ಹೀಗಾಗಿ ರಾಶಿ ರಾಶಿ ಚಪ್ಪಲಿಗಳು ನೆಟ್ಟಿಗರ ಗಮನ ಸೆಳೆದಿದೆ.
ಸೆಲಬ್ರಿಟಿಗಳು ಆ ಕ್ಷಣಕ್ಕೆ ಅಥವಾ ಚಿತ್ರೀಕರಣಕ್ಕೆ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಂಡು ಆನಂತರ ಹಿಂತಿರುಗಿಸುತ್ತಾರೆಂಬುದು ಬಹುತೇಕರ ಭಾವನೆ, ಆದರೆ ಜಾಹ್ನವಿ ಸ್ವಂತ ಹಣದಿಂದ ಇಷ್ಟೊಂದು ಖರೀದಿಸಿದ್ದಾರೆ.
ಜಾಹ್ನವಿ ಕಬೋರ್ಡ್‌ನಲ್ಲಿರುವ ಚಪ್ಪಲಿ, ಹೀಲ್ಸ್ ಮತ್ತು ಶೂಗಳು ಅದೆಷ್ಟೋ ಹೆಣ್ಣು ಮಕ್ಕಳ ಕಲೆಕ್ಷನ್ ಕನಸು. ಇಷ್ಟು ಬಳಸುತ್ತೀರಾ? ಎಲ್ಲಿ ಖರೀದಿಸಿರುವುದು? ನಿಮ್ಮ ನೆಚ್ಚಿನ ಬ್ರ್ಯಾಂಡ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.