ಬಾಲಿವುಡ್ ಸುಂದರಿ ನೋರಾ ಫತೇಹಿ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು. ಅವರಿಗೆ 37.6 ಮಿಲಿಯನ್ ಫಾಲೋವರ್ಸ್ ಇದ್ದರು.
ಸಖತ್ ಹಾಟ್ ಫೋಟೋ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚೆಲುವೆ ಖಾತೆ ಕಾಣಿಸುತ್ತಿಲ್ಲ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು.
ನೋರಾ ಖಾತೆ ಡಿಲೀಟ್ ಮಾಡಿರಬೇಕು ಎಂದುಕೊಂಡ ಅಭಿಮಾನಿಗಳಿಗೆ ಆಕೆಯ ಹ್ಯಾಕಿಂಗ್ ಮೆಸೇಜ್ (Hack Message) ನೋಡಿ ಶಾಕ್ ಆಗಿದ್ದಾರೆ.
'ದಯವಿಟ್ಟು ಕ್ಷಮಿಸಿ. ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಯಾರೋ ಹ್ಯಾಕ್ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಇವತ್ತು ಬೆಳಗ್ಗೆಯಿಂದ ಲಾಗ್‌ಇನ್ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂ ತಂಡದವರೇ ಇದನ್ನು ಸರಿ ಮಾಡಲು ನನಗೆ ಸಹಾಯ ಮಾಡುತ್ತಿದ್ದಾರೆ' ಎಂದು ನೋರಾ ಬರೆದುಕೊಂಡಿದ್ದರು.
ಖಾತೆಯನ್ನು ಹಿಂಪಡೆಯುತ್ತಿದ್ದಂತೆ ನೋರಾ ದುಬೈನಲ್ಲಿರುವ ಮೃಗಾಲಯಕ್ಕೆ (Dubai Zoo) ಭೇಟಿ ಕೊಟ್ಟಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಮೃಗಾಲಯದಲ್ಲಿರುವ ಬಿಳಿ ಸಿಂಹಗೆ ಮಾಂಸ ತಿನ್ನಿಸಿದ್ದಾರೆ. ಮಾಂಸ ತಿನ್ನಿಸುವ ವಿಧಾನವನ್ನು ಜನರಿಗೆ ಹೇಳಿಕೊಡಬೇಕೆಂದು ವಿಡಿಯೋ ಮಾಡಲಾಗಿತ್ತು.