ಬಾಲಿವುಡ್ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಡಿಪ್ಪಿ ಏರ್ಪೋರ್ಟ್ ಲುಕ್ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ಏರ್ಪೋರ್ಟ್ ಅಂದ್ರೆ ಬಿಡು ಟ್ರ್ಯಾವೆಲ್ ಮಾಡಬೇಕು ಅಂದುಕೊಂಡು ಹೆಂಗಂದ್ರೆ ಹಂಗೆ ಬರುತ್ತಾರೆ ಆದರೆ ದೀಪಿಕಾ ಮಾತ್ರ ಟ್ರೆಂಡ್ ಮೀರಿದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಪ್ರತಿ ಸಲ ಡಿಫರೆಂಟ್ ಆಗಿ ಕಾಣಿಸಿಕೊಂಡು ಸೆನ್ಸೇಷನ್ ಕ್ರಿಯೇಟ್ ಮಾಡುವ ದೀಪಿಕಾ ಈ ಸಲ ಟ್ರೋಲ್ ಆಗಿದ್ದಾರೆ. ಅದು ಮಾಸ್ಕ್ ಹಾಕ್ಕಿಲ್ಲ ಬ್ಯಾಗ್ ಇಟ್ಕೊಂಡಿಲ್ಲ ಅಂತ.
ಹೌದು! ದೀಪಿಕಾ ಪಡುಕೋಣೆ ಕಾರಿಂದ ಇಳಿದು ಮಾಸ್ಕ್ ಹಾಕದೇ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪಾಸ್‌ಪೋರ್ಟ್ ಚೆಕ್ ಮಾಡುವ ವ್ಯಕ್ತಿ ಕೂಡ ಇದನ್ನು ಪ್ರಶ್ನೆ ಮಾಡಿಲ್ಲ.
ಪ್ರಯಾಣ ಮಾಡುವ ದೀಪಿಕಾ ಕೈಯಲ್ಲಿ ಸದಾ ಒಂದು ಐಷಾರಾಮಿ ಬ್ಯಾಗ್ ಇರುತ್ತದೆ. ಕೆಲವೊಮ್ಮೆ ಬೇಡ ಅಂದ್ರು ಅದನ್ನು ಕೈಯಲ್ಲಿ ಹಿಡಿದುಕೊಂಡು ಪೋಸ್ ಕೊಡುತ್ತಾರೆ ಆದರೆ ಈ ಸಲ ಅದನ್ನು ತಮ್ಮ ಬಾಡಿಗಾರ್ಡ್‌ಗೆ ಕೊಟ್ಟು ಪೋಸ್ ಕೊಟ್ಟಿದ್ದಾರೆ.
ನಿಮ್ಮ ಗಾರ್ಡ್ ಮೇಲೆ ಅಷ್ಟೊಂದು ನಂಬಿಕೆ ನಾ? ಅಥವಾ ನಿಮ್ಮ ಬ್ಯಾಗಲ್ಲಿ ಈ ಸಲ ಬೆಲೆ ಬಾಳುವ ವಸ್ತು ಇಲ್ಲ ಎಂದು ಅವರಿಗೆ ಕೊಟ್ಟಿದ್ದೀರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.