Farhan Akhtar-ಶಿಬಾನಿ ಮದುವೆ ಅಪ್‌ಡೇಟ್; ಇಂಟರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ ವರನ ತಾಯಿ ಹನಿ ಇರಾನಿ!
First Published | Feb 12, 2022, 10:30 AM ISTಈ ವಾರದ ಆರಂಭದಲ್ಲಿ, ಬಾಲಿವುಡ್ ನಟ, ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಮತ್ತು ಶಿಬಾನಿ ದಾಂಡೇಕರ್ (Shibani Dandekar) ಅವರ ವಿವಾಹ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಮುಂಬೈ, ಲೋನಾವಾಲಾ ಮತ್ತು ಮಾರಿಷಸ್ ಮೂರು ಸ್ಥಳಗಳಲ್ಲಿ ಮದುವೆಯ ಕಾರ್ಯಕ್ರಮಗಳು ನಡೆಯಲಿದೆ ಎಂಬ ಸುದ್ದಿ ದೊರೆತಿದೆ. ಫೆಬ್ರವರಿ 21 ರಂದು ಮದುವೆ ನಡೆಯಲಿದೆ ಎಂದು ವರದಿಯಾಗಿದೆ ಮತ್ತು ಸಿದ್ಧತೆಗಳು ಭರದಿಂದ ಸಾಗಿವೆ.