ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೊರಿಯೋಗ್ರಫರ್, ನಟ ಪುನೀತ್..!

First Published | Aug 27, 2020, 12:24 PM IST

ಡ್ಯಾನ್ಸರ್ ಮತ್ತು ನಟ ಪುನೀತ್ ಪತಕ್ ತನ್ನ ಗರ್ಲ್‌ಫ್ರೆಂಡ್ ಜೊತೆ ನಿಶ್ಚುತಾರ್ಥ ಮಾಡಿಕೊಂಡಿದ್ದಾರೆ. ಬುಧವಾರ ನಿಧಿ ಮೂನಿ ಸಿಂಗ್ ಜೊತೆ ಪುನೀತ್ ನಿಶ್ಚಿತಾರ್ಥ ನೆರವೇರಿದೆ.

ಕೊರಿಯೋಗ್ರಫರ್ ಪುನೀತ್ ಪತಕ್ ತಮ್ಮ ಲಾಂಗ್‌ಟೈಂ ಗರ್ಲ್‌ಫ್ರೆಂಡ್‌ಗೆ ಉಂಗುರ ತೊಡಿಸಿದ್ದಾರೆ. ಬುಧವಾರ ನಿಧಿ ಮೂನಿ ಸಿಂಗ್ ಜೊತೆ ಪುನೀತ್ ನಿಶ್ಚಿತಾರ್ಥ ನೆರವೇರಿದೆ.
ಬಿಗಿನಿಂಗ್ ಆಫ್ ಆಲ್ವೇಸ್ ಎಂದು ಕ್ಯಾಪ್ಶನ್ ಕೊಟ್ಟು ತಮ್ಮ ಎಂಗೇಜ್‌ಮೆಂಟ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಪುನೀತ್.
Tap to resize

ಹಸಿರು ಫ್ಲೋರಲ್ ಪ್ರಿಂಟ್‌ನ ಕುರ್ತಾ ಹಾಗೂ ಪೈಜಾಮ ಧರಿಸಿದ ಪುನೀತ್ ಹಳದಿ ಹಾಗೂ ಕೆಂಪು ಬಣ್ಣದ ಸೀರೆಯುಟ್ಟ ನಿಧಿ ಜೊತೆ ಮಿಂಚಿದ್ದಾರೆ.
ತಮ್ಮ ನಿಶ್ಚಿತಾರ್ಥ ಉಂಗುರವನ್ನು ತೋರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕಪಲ್.
ಹ್ಯಾಪಿ ಕಪಲ್‌ಗೆ ಶುಭಾಶಯಗಳ ಸುರಿಮಳೆಯಾಗಿದೆ. ಕೊರಿಯೋಗ್ರಫರ್ ಟೆರೆನ್ಸ್ ಲೂಯಿಸ್, ಕಂಗ್ರಾಟ್ಸ್ ಪುನೀತ್, ಸ್ಟೇ ಬ್ಲೆಸ್ಡ್ ಎಂದು ಕಮೆಂಟ್ ಮಾಡಿದ್ದಾರೆ.
ಎಬಿಸಿಡಿ2 ಹಾಗೂ ಸ್ಟ್ರೀಟ್ ಡ್ಯಾನ್ಸರ್‌ 3D ನಲ್ಲಿ ಪುನೀತ್ ಜೊತೆ ಕೆಲಸ ಮಾಡಿದ ನಟ ವರುಣ್ ಧವನ್ ಎಮೋಜೀಸ್ ಹಾಕಿ ಶುಭಾಶಯ ತಿಳಿಸಿದ್ದಾರೆ.
ಸಿಂಗರ್ ಆದಿತ್ಯ ನಾರಾಯಣ್ ಅರೆ ಅರೆ ಕಂಗ್ರಾಜುಲೇಷನ್ಸ್ ಎಂದಿದ್ದಾರೆ. ನಟಿ ಮೌನಿ ರಾಯ್, ಇಶಾ ಗುಪ್ತಾ, ಗೌವಾರ್ ಖಾನ್ ಸೇರಿ ಹಲವು ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋವಿನ 2ನೇ ಸೀಸನ್‌ನಲ್ಲಿ ಪುನಿತ್ ಕಂಡುಬಂದಿದ್ದರು. ಇದರಲ್ಲಿ ಪುನೀತ್ ಎರಡನೇ ರನ್ನರ್ ಅಪ್ ಆಗಿದ್ದರು.
ಝಲಕ್ ದಿಕ್‌ ಲಾಜಾದ ಹಲವು ಸೀಸನ್‌ಗಳಿಗೆ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಖತರೋಂಕಾ ಕಿಲಾಡಿ ಸೀಸನ್ 9ರಲ್ಲಿ ಕಾಣಿಸಿಕೊಂಡಿದ್ದರು.
ರೆಮೋ ಜೊತೆ 2013ರಲ್ಲಿ ಎಬಿಸಿಡಿಯಲ್ಲಿ ನಟಿಸಿದ್ದರು. ಎಬಿಸಿಡಿ2ನಲ್ಲಿಯೂ ಕಾಣಿಸಿಕೊಂಡಿದ್ದರು. ಸ್ಟ್ರೀಟ್ ಡ್ಯಾನ್ಸರ್ 3Dಯಲ್ಲಿ ಪುನೀತ್ ಗಾಯಗೊಂಡಿದ್ದರು.

Latest Videos

click me!