ಈ ಬಾಲಿವುಡ್ ತಾರೆಯರಿಗೆ ದುಬೈನಲ್ಲೂ ಇದೆ ಕೋಟಿ ಕೋಟಿ ಬೆಲೆಯ ಐಷಾರಾಮಿ ಬಂಗಲೆ!

First Published Oct 8, 2023, 12:37 PM IST

ಬಾಲಿವುಡ್ ತಾರೆಯರು ಬಟ್ಟೆ ಮತ್ತು ಐಷಾರಾಮಿ ವಾಹನಗಳಲ್ಲಿ ಹೂಡಿಕೆ ಮಾಡುವುದಲ್ಲದೆ, ವಿದೇಶದಲ್ಲಿ ಆಸ್ತಿಯಲ್ಲಿಯೂ ಹೂಡಿಕೆ ಮಾಡುತ್ತಾರೆ. ವಿದೇಶದಲ್ಲಿ , ಅದರಲ್ಲೂ ಶ್ರೀಮಂತ ದೇಶವಾದ ದುಬೈನಲ್ಲಿ ಮನೆಗಳನ್ನು ಖರೀದಿಸಿದ ತಾರೆಗಳ ಬಗ್ಗೆ ತಿಳಿದುಕೊಳ್ಳೋಣ.

ಬಾಲಿವುಡ್ ಸೆಲೆಬ್ರಿಟಿಗಳು (Bollywood celebreties) ಆಗಾಗ್ಗೆ ತಮ್ಮ ಐಷಾರಾಮಿ ಜೀವನಶೈಲಿಯಿಂದಾಗಿ ಚರ್ಚೆಯಲ್ಲಿರುತ್ತಾರೆ. ದುಬಾರಿ ಮನೆಗಳು, ದುಬಾರಿ ಕಾರುಗಳು, ದುಬಾರಿ ಉಡುಪುಗಳು ಎಲ್ಲವೂ ದುಬಾರಿಯಾಗಿರುತ್ತೆ. ಅದರ ಜೊತೆಗೆ ವಿದೇಶದಲ್ಲಿ ಐಷಾರಾಮಿ ವಿಲ್ಲಾಗಳನ್ನು ಹೊಂದಿರುವ ಅನೇಕ ತಾರೆಯರು ಇದ್ದಾರೆ. ವಿದೇಶದಲ್ಲಿ ಬಂಗಲೆಗಳನ್ನು ಖರೀದಿಸಿದ ಬಾಲಿವುಡ್ ಸೆಲೆಬ್ರಿಟಿಗಳು ಯಾರ್ಯಾರು ಇದ್ದಾರೆ ಅನ್ನೋದನ್ನು ತಿಳಿಯೋಣ.

ಶಾರುಖ್ ಖಾನ್ (Shahrukh Khan)
ಈ ಪಟ್ಟಿಯಲ್ಲಿ ಮೊದಲ ಹೆಸರು ಬಾಲಿವುಡ್ ಕಿಂಗ್ ಶಾರುಖ್ ಖಾನ್. ಶಾರುಖ್ ದುಬೈನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಶಾರುಖ್ ಖಾನ್ ಅವರ ದುಬೈ ಮನೆಯ ಹೆಸರು ಜನ್ನತ್. ಅವರು ದುಬೈನ ಪಾಮ್ ಜುಮೇರಾದಲ್ಲಿ ಬಹಳ ಐಷಾರಾಮಿ ವಿಲ್ಲಾವನ್ನು ಹೊಂದಿದ್ದಾರೆ, ಅದರ ಮೌಲ್ಯ ಸುಮಾರು 100 ಕೋಟಿ ರೂ. ಶಾರುಖ್ ಅವರ ದುಬೈ ಮನೆ ಕೂಡ ಅದರ ಸೌಂದರ್ಯಕ್ಕಾಗಿ ಚರ್ಚೆಯಲ್ಲಿದೆ.

Latest Videos


ಶಿಲ್ಪಾ ಶೆಟ್ಟಿ (Shilpa Shetty): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಶಿಲ್ಪಾ ಅವರ ಬಂಗಲೆ ಪಾಮ್ ಜುಮೇರಾದಲ್ಲಿದೆ, ಇದನ್ನು ದುಬೈನ ಅತ್ಯಂತ ಐಷಾರಾಮಿ ಪ್ರದೇಶ ಎಂದು ಕರೆಯಲಾಗುತ್ತದೆ. ಶಿಲ್ಪಾ ಅವರ ಬಂಗಲೆ ಸಾಕಷ್ಟು ಐಷಾರಾಮಿ ಮತ್ತು ಸುಂದರವಾಗಿದೆ. ಶಿಲ್ಪಾ ಆಗಾಗ್ಗೆ ಇಲ್ಲಿ ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯುತ್ತಾರೆ, ಈ ಬಂಗಲೆಯ ಬೆಲೆಯೂ ಕೋಟಿಗಳಲ್ಲಿದೆ ಎಂದು ಹೇಳಲಾಗುತ್ತದೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ (Aishwarya Rai and Abhishek Bacchan): ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಗಳ್ಯ್ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಮಾಹಿತಿಯ ಪ್ರಕಾರ, ಐಶ್ವರ್ಯಾ ಅವರ ಐಷಾರಾಮಿ ಮತ್ತು ಸುಂದರವಾದ ಬಂಗಲೆ ಸ್ಯಾಂಕ್ಚುರಿ ಫಾಲ್ಸ್ ನಲ್ಲಿದೆ. ಐಶ್ವರ್ಯಾ ಆಗಾಗ್ಗೆ ಕುಟುಂಬದೊಂದಿಗೆ ದುಬೈನಲ್ಲಿ ರಜಾದಿನಗಳಿಗೆ ಹೋಗುತ್ತಾರೆ.
 

ಅನಿಲ್ ಕಪೂರ್ (Anil Kapoor): ಅನಿಲ್ ಕಪೂರ್ ಕೂಡ ದುಬೈಗೆ ಹೋಗುತ್ತಲೇ ಇರುತ್ತಾರೆ. ಅವರು ದುಬೈನಲ್ಲಿ ತಮ್ಮ ಮನೆಯನ್ನು ಸಹ ಖರೀದಿಸಿದ್ದಾರೆ. ಮಾಹಿತಿಯ ಪ್ರಕಾರ, ಅನಿಲ್ ಕಪೂರ್ ಅವರು ದಿ ರೈಟ್ಸ್ ಬೈ ಡೆಬ್ಯೂ ಹೌಸಿಂಗ್ ಪ್ರಾಜೆಕ್ಟ್ನಲ್ಲಿ 2 ಬಿಎಚ್ಕೆ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾರೆ.
 

ಸಲ್ಮಾನ್ ಖಾನ್ (Salman Khan): ಸೂಪರ್ಸ್ಟಾರ್ ಸಲ್ಮಾನ್ ಖಾನ್ ದುಬೈನ ಬುರ್ಜ್ ಖಲೀಫಾ ಬಳಿಯ ದಿ ಅಡ್ರೆಸ್ ಡೌನ್ಟೌನ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ನ ಮಾಲೀಕರಾಗಿದ್ದಾರೆ ಎಂದು ವರದಿಯಾಗಿದೆ. ನಟ ಆಗಾಗ್ಗೆ ಸುಂದರ ನಗರಕ್ಕೆ ಭೇಟಿ ನೀಡಿ, ಎಂಜಾಯ್ ಮಾಡುತ್ತಿರುತ್ತಾರೆ. 
 

Image: Karan Kundrra Instagram

ತೇಜಸ್ವಿ ಪ್ರಕಾಶ್ ಮತ್ತು ಕರಣ ಕುಂದ್ರಾ (Tejaswi Prakash and Karan Kundra): ಬಾಲಿವುಡ್ ನ ಲವ್ ಬರ್ಡ್ಸ್ ಎಂದೇ ಖ್ಯಾತರಾಗಿರುವ ತೇಜಸ್ವಿನಿ ಪ್ರಕಾಶ್ ಮತ್ತು ಕರಣ ಕುಂದ್ರಾ ಕಳೆದ ವರ್ಷ ಡಿಸೆಂಬರ್ನಲ್ಲಿ ಪಾಮ್ ಜುಮೇರಾ ಬೀಚ್ ಬಳಿ ಐಷಾರಾಮಿ 1 ಬಿಎಚ್ಕೆ ಫ್ಲ್ಯಾಟ್ ಖರೀದಿಸಿದ್ದರು. ಇನ್ಸ್ಟಾಗ್ರಾಮ್ನಲ್ಲಿ, ತೇಜಸ್ವಿ ಪ್ರಕಾಶ್ ತಮ್ಮ ಮನೆಯ ಒಳಾಂಗಣ ವೀಡಿಯೊವನ್ನು ಹಂಚಿಕೊಂಡಿದ್ದರು..
 

ರಾಖಿ ಸಾವಂತ್ (Rakshi Sawant): ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಸಹ ದುಬೈನಲ್ಲಿ ಮನೆ ಮತ್ತು ಕಾರು ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ದುಬೈನಲ್ಲಿ ಅವರ ಎರಡನೇ ಆಸ್ತಿಯಾಗಿದೆ. ಅದಕ್ಕೂ ಮೊದಲು ಅವರು ಅಲ್ಲೊಂದು ಮನೆ ಖರೀದಿಸಿರೋದಾಗಿ ಹೇಳಿದ್ದರು. ತನ್ನ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ರಾಖಿ ತನ್ನ ಸುಂದರವಾದ ಮನೆಯ ವಿಡಿಯೋಗಳನ್ನು ಸಹ ಹರಿಬಿಟ್ಟಿದ್ದರು. 

click me!