ನನ್ನ ನಾಯಿ ಹೆಸರು ಶಾರುಖ್… ಹೀಗೆ ಶಾಕಿಂಗ್ ಸ್ಟೇಟ್ ಮೆಂಟ್ ಮೂಲಕವೇ ಕಾಂಟ್ರವರ್ಸಿ ಸೃಷ್ಟಿಸಿದ ಸೆಲೆಬ್ರಿಟಿಗಳಿವರು

Published : Apr 14, 2025, 01:27 PM ISTUpdated : Apr 14, 2025, 02:19 PM IST

ಬಾಲಿವುಡ್ ತಾರೆಯರು ತಮ್ಮ ದಿಟ್ಟ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.  ಕಾಫಿ ವಿತ್ ಕರಣ್ ನಿಂದ ಸಂದರ್ಶನಗಳವರೆಗೆ, ಬಿ ಟೌನ್ ಸೆಲೆಬ್ರಿಟಿಗಳು ನೀಡಿದ ವಿವಾದಾತ್ಮಕ ಹೇಳಿಕೆಗಳು ಇಲ್ಲಿವೆ.   

PREV
18
ನನ್ನ ನಾಯಿ ಹೆಸರು ಶಾರುಖ್… ಹೀಗೆ ಶಾಕಿಂಗ್ ಸ್ಟೇಟ್ ಮೆಂಟ್ ಮೂಲಕವೇ ಕಾಂಟ್ರವರ್ಸಿ ಸೃಷ್ಟಿಸಿದ ಸೆಲೆಬ್ರಿಟಿಗಳಿವರು

ಬಾಲಿವುಡ್ ಸೆಲೆಬ್ರಿಟಿಗಳು (bollywood celebrities) ಎಂದಿಗೂ ಆಘಾತಕಾರಿ ಹೇಳಿಕೆಗಳಿಂದ ಹಿಂದೆ ಸರಿಯುವುದಿಲ್ಲ! ಹಾಸ್ಯಾಸ್ಪದ ಹೇಳಿಕೆಗಳಿಂದ ಹಿಡಿದು ದಿಟ್ಟ ಕಾಂಟ್ರವರ್ಸಿ ಸೃಷ್ಟಿಸುವ ಸ್ಟೇಟ್ ಮೆಂಟ್ ಗಳಿಂದಲೇ ,  ಸೆಲೆಬ್ರಿಟಿಗಳು ಶಾಕ್ ನೀಡಿದ ಒಂದಷ್ಟು ಕ್ಷಣಗಳ ವಿವರ ಇಲ್ಲಿದೆ. 
 

28

ಕರೀನಾ ಕಪೂರ್ ಖಾನ್
ಒಂದು ಸಲ ಕರೀನಾ ಕಪೂರ್ (Kareena Kapoor Khan) ನನ್ನ ಸಿನಿಮಾ ‘ಹೀರೋಯಿನ್’ ಪ್ರಿಯಾಂಕಾ ಚೋಪ್ರಾ ಹಾಗೂ ಕಂಗನಾ ರಣಾವತ್ ಅವರ ‘ಫ್ಯಾಷನ್’ ಸಿನಿಮಾಗಿಂತ ಚೆನ್ನಾಗಿದೆ ಎಂದಿದ್ದರು. ಇದಕ್ಕೆ ಖಡಕ್ ಆಗಿ ಉತ್ತರ ಕೊಟ್ಟಿದ್ದ ಪ್ರಿಯಾಂಕ, ನಿಮ್ಮ ಬಳಿ ನ್ಯಾಷನಲ್ ಅವಾರ್ಡ್ ಇರದೇ ಇದ್ದರೆ, ದ್ರಾಕ್ಷೆ ಹುಳಿನೆ ಆಗಿರುತ್ತೆ ಎಂದಿದ್ದರು. 
 

38

ಸೋನಮ್ ಕಪೂರ್ 
ಸೋನಮ್ ಕಪೂರ್ (Sonam Kapoor) ಒಂದು ಸಲ ಐಶ್ವರ್ಯ ರೈ ಅವರನ್ನು ಆಂಟಿ ಎಂದು ಕರೆದಿದ್ದರು. ಯಾಕಂದ್ರೆ ಐಶ್ವರ್ಯ ಈ ಹಿಂದೆ ಸೋನಮ್ ತಂದೆ ಅನಿಲ್ ಕಪೂರ್ ಜೊತೆ ಕೆಲಸ ಮಾಡಿದ್ದರಿಂದ, ನನಗೆ ಆಕೆಯನ್ನುಆಂಟಿ ಎಂದು ಕರೆಯುವ ಹಕ್ಕು ಇದೆ ಎಂದಿದ್ದರು. 

48

ಕಂಗನಾ ರಣಾವತ್
ನೇರ ನುಡಿಯ ಬೆಡಗಿ ಕಂಗನಾ ರಣಾವತ್ ಕಾಫಿ ವಿತ್ ಕರಣ್ ಟಿವಿ (Coffee with Karan) ಶೋನಲ್ಲಿ ಕರಣ್ ಜೋಹರ್ ಜೊತೆ ಮಾತನಾಡುತ್ತಾ, ನನ್ನ ಸಿನಿಮಾ ಬಯೋಪಿಕ್ ಮಾಡೋದಾದರೆ, ನೀವು ಹೊರಗಿನಿಂದ ಬಂದವರನ್ನು ಕಡೆಗಣಿಸುವ, ನೆಪೋ ಕಿಡ್ಸ್ ಗಳ ಜೊತೆ ಸದಾ ನಿಲ್ಲುವ ಬಾಲಿವುಡ್ ಬ್ಯಾಗಿಯಾಗಿ ನಟಿಸಿ ಎಂದಿದ್ದರು. ಇದು ಭಾರಿ ಕಾಂಟ್ರವರ್ಸಿ ಸೃಷ್ಟಿಸಿತ್ತು. 
 

58

ಅಮೀರ್ ಖಾನ್ 
ಒಂದು ಬಾರಿ ಅಮೀರ್ ಖಾನ್ (Aamir Khan) ಮಾತನಾಡುತ್ತಾ, ನನ್ನ ನಾಯಿಯ ಹೆಸರು ಶಾರುಖ್, ಅದು ನಾನು ಹಾಕಿದ ಬಿಸ್ಕೆಟ್ ತಿನ್ನುತ್ತೆ, ನನ್ನ ಶೂ ನೆಕ್ಕುತ್ತೆ, ಇದಕ್ಕಿಂತ ಇನ್ನೇನು ಬೇಕು ಎಂದಿದ್ದರು. 

68

ಅನುಷ್ಕಾ ಶರ್ಮಾ
ದೀಪಿಕಾ ಪಡುಕೋಣೆಗೆ ಹೋಲಿಕೆ ಮಾಡುತ್ತಾ, ಅನುಷ್ಕಾ ಶರ್ಮಾ (Anushka Sharma), ನಾನು ಕಷ್ಯಪ್ ಮತ್ತು ಇರಾನಿಯವರ ಆಯ್ಕೆ, ಆದರೆ ದೀಪಿಕಾ ಆಯಾನ ಮತ್ತಿತರರ ಆಯ್ಕೆ. ನಾನು ಯಾರನ್ನು ಕೆಳಕ್ಕೆ ಬೀಳಿಸಿ ಮೇಲೆ ಬಂದಿಲ್ಲ, ಅದೇ ನನ್ನ ಒಳ್ಳೆತನ ಎಂದಿದ್ದರು. 

78

ಸಲ್ಮಾನ್ ಖಾನ್
ಹೃತಿಕ್ ರೋಷನ್ ಅಭಿನಯದ ಗುಝಾರಿಶ್ ಸಿನಿಮಾ ಕುರಿತು ಮಾತನಾಡುತ್ತಾ, ಸಲ್ಮಾನ್ ಖಾನ್ ಆ ಸಿನಿಮಾ ನೋಡಲು ಥಿಯೇಟರ್ ಗೆ ಯಾವ ನಾಯಿಯೂ ಹೋಗಿಲ್ಲ ಎಂದಿದ್ದರು. 
 

88

ದೀಪಿಕಾ ಪಡುಕೋಣೆ
ದೀಪಿಕಾ (Deepika Padukone) ಹಿಂದೊಮ್ಮೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾನು ರಣಬೀರ್ ಕಪೂರ್ ಗೆ ಪ್ಯಾಕ್ ಕಾಂಡೋಮ್ ಕೊಡೋದಕ್ಕೆ ಇಷ್ಟ ಪಡ್ತೀನಿ, ಆತ ಅದನ್ನ ಹೆಚ್ಚಾಗಿ ಬಳಕೆ ಮಾಡ್ತಾನೆ ಎಂದಿದ್ದರು. 
 

Read more Photos on
click me!

Recommended Stories