ಗೋಲ್ಡನ್ ಕಲರ್ ರೇಶ್ಮೆ ಸೀರೆ, ಒಳ್ಳೇ ಫ್ಯಾಷನ್ ಸೆನ್ಸ್, ಭಾಷಾ ಪ್ರೌಢಿಮೆ ಆ್ಯಂಕರ್ ಅಂದ್ರೆ ಹೀಗೇ ಇರ್ಬೇಕು ಅಂತಾರೆ ನೆಟ್ಟಿಗರು!

First Published | Nov 21, 2023, 10:32 AM IST

ಆ್ಯಂಕರ್ ಅನಸೂಯಾ ಅಂದ್ರೆ ತೆಲಗು ಮಂದಿ ಸಾಯುತ್ತಾರೆ. ಅವರ ಭಾಷೆಗೆ ಲುಕ್‌ಗೆ ಹಾಗೂ ಫ್ಯಾಷನ್ ಸೆನ್ಸ್‌ಗೆ ಫಿದಾ ಆಗದವರೇ ಇಲ್ಲ. ಇತ್ತೀಚೆಗೆ ಚೆನ್ನೈವೊಂದರ ಚಿನ್ನದಂಗಡಿ ಉದ್ಘಾಟನಾ ಸಮಾರಂಭಕ್ಕೆ ತೆರಳಿದ ಅನಸೂಯ ಲುಕ್‌ಗಂತೂ  ಎಲ್ಲರೂ ಫಿದಾ ಆಗಿದ್ದಾರೆ. ಸೀರೆಯ ಕಲರ್, ಧರಿಸಿರುವ ಆ್ಯಕ್ಸಸರೀಸ್ ನೋಡಿ ನೆಟ್ಟಿಗರು ಆಸಮ್, ಬ್ಯೂಟಿಫುಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ವಿಭಿನ್ನ ಶೈಲಿ, ಭಾಷಾ ಹಿಡಿತ, ಫ್ಯಾಷನ್ ಸೆನ್ಸ್‌ನಿಂದ ತೆಲಗು ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಆ್ಯಂಕರ್ ಅನಸೂಯಾ. ಕಳೆದ ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಾ, ಆ್ಯಂಕರಿಂಗ್ ಮಾಡುತ್ತಾ ಹೆಸರು ಮಾಡಿದವರು ಇವರು.

ಇತ್ತೀಚೆಗೆ ಚೆನ್ನೈನ ಎಂಜಿಆರ್ ಮಾಲ್‌ನ ಹೊಸ ಸ್ಟೋರಿ ಲಾಂಚ್‌ಗೆ ತೆರಲಿದ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ ಅನಸೂಯಾ. ಗೋಲ್ಡನ್ ಕಲರ್ ಸಿಲ್ಕ್ ಸೀರೆಗೆ ಪರ್ಪಲ್ ಬಾರ್ಡ್ ಇದ್ದು, ವಿಭಿನ್ನವಾದ ಬ್ಲೌಸ್ ಶೈಲಿ  ಎಂಥವರದಾರೂ Lookin Like a Waw ಅಂತ ಹೇಳುವಂತಿದೆ. 

Tap to resize

ವಿಭಿನ್ನ ಶೈಲಿ ಬ್ಲೌಸ್ ಒಂದೆಡೆ ಅಟ್ರ್ಯಾಕ್ಟಿವ್ ಆಗಿದ್ದರೆ, ದೊಡ್ಡ ದೊಡ್ಡ ಕಿವಿಯೋಲೆಯೂ ವಿಭಿನ್ನವಾಗಿದೆ. ಚೆಂದದ ಸಿಂಪಲ್ ಆದ ಹೇರ್‌ಸ್ಟೈಲಿಗೆ ಹೂವು ಮುಡಿದಿರುವುದು ಅನಸೂಯಾ ಅವರಿಗೆ ಪರ್ಫೆಕ್ಟ್ Indian Traditional Ladyಯ ಲುಕ್ ತರುವಂತೆ ಮಾಡಿದೆ. 

ಇಷ್ಟೆಲ್ಲಾ ಮಾಡಿದ ಮೇಲೆ ಮೂಗೂತಿ ಇಲ್ಲದಿದ್ದರೆ ಹೇಗೆ? ದೊಡ್ಡದಾದ ನತ್ತು ಹಾಕ್ಕೊಂಡಿರುವ ಅನಸೂಯಾ ಲುಕ್ ನೇರಳ ಬಣ್ಣದ ಸಣ್ಣ ಬೊಟ್ಟಿನೊಂದಿಗೆ ಕಂಪ್ಲೀಟ್ ಆಗುವಂತೆ ಕಾಣಿಸುತ್ತಿದೆ. 

ಜಡೆಗೆ ಹೂವು, ಕೈಗೆ ದೊಡ್ಡ ದೊಡ್ಡ ಬಳೆಗಳು ಜೊತೆಗೆ ಕೈಗೆ ದೊಡ್ಡದಾದ ಉಂಗುರ ತೊಟ್ಟು ಕೊಟ್ಟಿರುವ ಫೋಸ್‌ನಲ್ಲಿ ಎಲ್ಲಿಯೂ ಅನುಷ್ಕಾ ಶೆಟ್ಟಿ ರೀತಿ ಅನಸೂಯಾ ಕಾಣಿಸುತ್ತಿದ್ದಾರೆ. 

ಗ್ರ್ಯಾಂಡ್ ಸೀರಿ ಉಟ್ಟಿರುವ ಅನಸುಯಾ ಲುಕ್‌ಗೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ಸ್ ಮಾಡಿದ್ದಾರೆ. Beautiful, Awsome, Sexy ಎಂದೆಲ್ಲ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ ನೆಟ್ಟಿಗರು ಕಮೆಂಟ್ ಮಾಡಿದ್ದು, ಪರ್ಫೆಕ್ಟ್ ಲುಕ್‌ಗೆ ನೆಟ್ಟಿಗರು ಮನ ಸೋತಿದ್ದು ಮಾತ್ರ ಸುಳ್ಳಲ್ಲ. 

ಅಬ್ಬಾ, ಇಷ್ಟು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅನಸೂಯಾ ಭಾರದ್ವಾಜ್, ಒಂದು ಫೋಟೋದಲ್ಲಿ ಕಣ್ಣು ಹೊಡೆದಿದ್ದು, ಪಡ್ಡೆ ಹುಡುಗರೂ ಮಧ್ಯ ವಯಸ್ಸಿನ ಈ ಲುಕ್‌ಗೆ ಬಿದ್ದು ಹೋಗುವಂತೆ ಆಗಿದೆ. 

ಬ್ಯಾಕ್‌ಲೆಸ್ ಪೋಟೋ ಹಾಕಿಕೊಂಡಿರುವ  ಅನಸೂಯಾ ಹೇರ್ ಸ್ಟೈಲ್ ಮತ್ತು ಬ್ಲೌಸ್ ಡಿಸೈನ್ ಪರ್ಫೆಕ್ಟ್ ಆಗಿ ಕಾಣಿಸುತ್ತಿದೆ. ಮುಂದಿನಿಂದ ಪೂರ್ತಿ ಟ್ರೆಡಿಷನಲ್ ಆಗಿ ಕಾಣಿಸುತ್ತಿರೋ ಆ್ಯಂಕರ್, ಈ ಫೋಟೋದಲ್ಲಿ ಪೂರ್ತಿ ಸೆಕ್ಸಿಯಾಗಿ ಕಾಣಿಸುತ್ತಿದ್ದಾರೆ. 

ಇತ್ತೀಚೆಗೆ ದೀಪಾವಳಿಯನ್ನು ಆಚರಿಸಿದ ಫೋಟೋವನ್ನೂ ನಟಿ, ಆ್ಯಂಕರ್ ಅನಸೂಯಾ ಶೇರ್ ಮಾಡಿ ಕೊಂಡಿದ್ದು ದೇವರಿಗೆ ಪೂಜೆ ಮಾಡಿದ ಇಮೇಜ್ ಸೇರಿ, ಮಾಡಿದ ವಿಶೇಷ ಖಾದ್ಯಗಳನ್ನೂ ಫೋಟೋಗಳನ್ನೂ ಶೇರ್ ಮಾಡಿ ಕೊಂಡಿದ್ದರು. 

ಆ ನಗು, ಸ್ಟೈಲ್, ಡ್ರೆಸ್ ಸೆನ್ಸ್, ಸ್ಟೇಜ್ ಮೇಲೆ ನಿಂತರೆ ಭಾಷಾ ಮೇಲಿನ ಹಿಡಿತ ಜೊತೆಗೆ ಆತ್ಮ ವಿಶ್ವಾಸದಿಂದ ಅನಸೂಯ ಭಾರತೀಯ ಆ್ಯಂಕರಿಂಗ ಲೋಕದಲ್ಲಿ ವಿಭಿನ್ನ ಛಾಪು ಮೂಡಿಸಿದವರು. ಎಲ್ಲರನ್ನೂ ಆಟ್ರ್ಯಾಕ್ಟ್ ಆಗುವಂತೆ ಮಾತನಾಡುವ ಶೈಲಿ ಇವರಿಗೆ ಹುಟ್ಟಿನಿಂದಲೇ ಒಲಿದಿದೆ. 

Latest Videos

click me!