ಕರೀನಾ ಮಾತ್ರವಲ್ಲ, ಗರ್ಭಿಣಿಯಾದರೂ ಶೂಟಿಂಗ್ ಮಾಡಿದ ನಟಿಯರಿವರು!
First Published | Aug 25, 2020, 8:22 PM ISTಕರೀನಾ ಕಪೂರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆದರೆ, ಅವರ ಪ್ರೆಗ್ನೆಸಿ ಕಾರಣದಿಂದ, 'ಲಾಲ್ ಸಿಂಗ್ ಚಾಡ್ದಾ' ಚಿತ್ರದ ನಿರ್ಮಾಪಕರು ಆತಂಕಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ಈ ಚಿತ್ರದಲ್ಲಿ ಕರೀನಾರದ್ದು ಲೀಡ್ ರೋಲ್. ಚಿತ್ರದ ಹೆಚ್ಚಿನ ಭಾಗವಿನ್ನೂ ಶೂಟ್ ಆಗಿಲ್ಲ. ಆದರೆ ನಟಿಯ ಬೇಬಿ ಬಂಪ್‌ನಿಂದಾಗಿ, ತಯಾರಕರು ಈಗ ಚಿತ್ರದ ಶೂಟಿಂಗ್‌ನಲ್ಲಿ ಸಮಸ್ಯೆಗಳನ್ನುಎದುರಿಸಬಹುದು. ಬೇಬಿ ಬಂಪ್ ಅನ್ನು ಮರೆಮಾಚಲು, ತಯಾರಕರು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಆಶ್ರಯಿಸಬಹುದು ಎನ್ನಲಾಗುತ್ತಿದೆ. ಈ ಪ್ರೆಗ್ನೆನ್ಸಿಯಿಂದ ಸಮಸ್ಯೆ ಎದುರಿಸಿದ ನಟಿಯರಿವರು.