ಸದಾ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಲ್ಲಿರೋ ಕಂಗನಾಳ ಹಾಟ್ ಲುಕ್!

First Published | Aug 25, 2020, 7:28 PM IST

ಬಾಲಿವುಡ್‌ ಕ್ವೀನ್‌ ಕಂಗನಾ ರಣಾವತ್‌ ನೇರ ಹಾಗೂ ಬೋಲ್ಡ್‌ ಮಾತುಗಳಿಂದ ಸದಾ ಚರ್ಚೆಯಲ್ಲಿರುವುದು ತಿಳಿದೆ ಇದೆ. ಎಲ್ಲರ ಮೇಲೆ ವಾಗ್ದಳಿ ನಡೆಸುವ ಕಂಗನಾ ಈ ಬಾರಿ ಬೇರೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕಂಗನಾ ಹಾಟ್‌ ಬಿಕಿನಿ ಪೋಟೋಗಳೊಂದಿಗೆ ಸಖತ್‌ ವೈರಲ್‌ ಆಗಿದ್ದು, ಇಂಟರ್‌ನೆಟ್‌ನ ಟೆಂಪರೇಚರ್ ಹೆಚ್ಚಿಸಿದ್ದಾರೆ. ಇಲ್ಲಿವೆ ನಟಿಯ ಹಾಟ್‌ ಫೋಟೋಗಳು. 

2006ರಲ್ಲಿ ಕಂಗನಾ ರಣಾವತ್‌ ಅನುರಾಗ್ ಬಸು ಗ್ಯಾಂಗ್‌ಸ್ಟರ್‌ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿನಿಮಾ ಯಶಸ್ಸು ಗಳಿಸಿತ್ತು.
ಕಂಗನಾ ಅವರ ನೇರ ವರ್ತನೆ ಮತ್ತು ಆ್ಯಟಿಟ್ಯೂಡ್ ಬಾಲಿವುಡ್‌ನಲ್ಲಿ ಯಶಸ್ವಿ ನಟಿಯಾಗಿ ಬೆಳೆಯುವಂತೆ ಮಾಡಿದೆ.ಮೂರು ಬಾರಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Tap to resize

ಅನೇಕ ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು.
2008 ರಲ್ಲಿ, ಮಾಧುರ್ ಭಂಡಾರ್ಕರ್ಫ್ಯಾಷನ್ ಸಿನಿಮಾದಲ್ಲಿ ಸೂಪರ್ ಮಾಡೆಲ್ ಆಗಿ ನಟಿಸಿ ಪ್ರೇಕ್ಷಕರ ಮನ ಗೆದ್ದ ಕಂಗನಾ.
2008ರಲ್ಲಿ, ಮಾಧುರ್ ಭಂಡಾರ್ಕರ್ಫ್ಯಾಷನ್ ಸಿನಿಮಾದಲ್ಲಿ ಸೂಪರ್ ಮಾಡೆಲ್ ಆಗಿ ನಟಿಸಿ ಪ್ರೇಕ್ಷಕರನ್ನು ಗೆದ್ದ ಕಂಗನಾ.
ಈ ಸಿನಿಮಾದಲ್ಲಿನ ಕಂಗನಾಳ ಅಭಿನಯವು ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಎರಡನ್ನೂ ಗಳಿಸಿತು.
2011 ರಲ್ಲಿ, ತನು ವೆಡ್ಸ್ ಮನು ಚಿತ್ರದ ಮೂಲಕ ಇನ್ನೂ ಹೆಚ್ಚು ಫೇಮಸ್‌ ಆದರು. ನಂತರ 2015ರಲ್ಲಿ ತನು ವೆಡ್ಸ್ ಮನು ರಿಟರ್ನ್ಸ್ ಸಿನಿಮಾವೂ ಹಿಟ್‌ ಆಯಿತು.
ಕ್ವೀನ್‌ ಸಿನಿಮಾದಲ್ಲಿ ರಾಣಿ ಮೆಹ್ರಾಪಾತ್ರದಲ್ಲಿ ಕಾಣಿಸಿಕೊಂಡ ನಂತರ ಬಾಲಿವುಡ್‌ನ 'ಕ್ವೀನ್‌' ಎಂಬ ಟ್ಯಾಗ್ ಪಡೆದರು ಕಂಗನಾ ರಣಾವತ್‌.
ಯಾವಾಗಲೂ ತುಂಬಾ ಬೋಲ್ಡ್‌ ಆಗಿ ಮಾತನಾಡುವ ನಟಿ ಅನೇಕ ವಿವಾದಗಳನ್ನು ಹುಟ್ಟು ಹಾಕಿದ್ದಾಳೆ.
ನೆಪೋಟಿಸಂ, ಇನ್‌ಸೈಡರ್‌ ಔಟ್‌ ಸೈಡರ್‌, ಹೀಗೆ ಹಲವು ವಿಷಯಗಳ ಬಗ್ಗೆ ವಾಗ್ದಾಳಿ ನಡೆಸುತ್ತಾ ಸದಾ ನ್ಯೂಸ್‌ನಲ್ಲಿರುವ ನಟಿ ಈಕೆ.
ಕಂಗನಾಳ ರಿಲೆಷನ್‌ಶಿಪ್‌ಗಳಿಗೇನೂ ಕಡಿಮೆ ಇಲ್ಲ. 20 ವರ್ಷದ ಯುವಕ ಆದಿತ್ಯ ಪಾಂಚೋಲಿಯೊಂದಿಗೆ ಡೇಟಿಂಗ್ ಮಾಡುವುದರಿಂದ ಹಿಡಿದು, ವಿವಾಹಿತ ಪುರುಷ ಹೃತಿಕ್ ರೋಷನ್ ಜೊತೆ ಸಂಬಂಧ ಹೊಂದುವವರೆಗೆ ಅವಳಕಥೆಗಳಿವೆ.
ಸೋಷಿಯಲ್ ಮೀಡಿಯಾದಲ್ಲಿ ಕಂಗನಾಳ ಅಭಿಪ್ರಾಯಮತ್ತು ಆಲೋಚನೆಗಳನ್ನು ಬೆಂಬಲಿಸುವ ದೊಡ್ಡ ಫಾಲೋಯರ್ಸ್ ಜೊತೆ ತುಂಬಾ ನಿಷ್ಠಾವಂತ ಫ್ಯಾನ್ಸ್‌ ಹೊಂದಿದ್ದಾಳೆ ಮಣೀಕರ್ಣಿಕಾ ನಟಿ.ಅದರ ಜೊತೆಗೆ ಅನೇಕ ದ್ವೇಷಿಗಳೂ ಏನೂ ಕಡಿಮೆ ಇಲ್ಲ. ನಟಿ ಮಾಡುವುದೆಲ್ಲಾ ಪ್ರಚಾರಕ್ಕಾಗಿ ಹಾಗೂ ಬಾಲಿವುಡ್‌ನಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ಎಂದು ಆರೋಪಿಸುತ್ತಾರೆ ಹಲವರು.

Latest Videos

click me!