ಹಾರ್ಮೋನ್ ಬದಲಾವಣೆಯಿಂದ ಹೆಣ್ಣುತನ ಎಂಜಾಯ್ ಮಾಡಲಿಲ್ಲ, ಗೇಲಿ ಮಾಡ್ಬೇಡಿ; ವಿದ್ಯಾ ಬಾಲನ್ ಹೇಳಿಕೆ ವೈರಲ್

First Published | Mar 29, 2024, 1:48 PM IST

ದೇಹದಲ್ಲಿ ಆಗುತ್ತಿರುವ ಹಾರ್ಮೋನ್ ಬದಲಾವಣೆಗಳ ಬಗ್ಗೆ ಧ್ವನಿ ಎತ್ತಿದೆ ವಿದ್ಯಾ. 12 ವರ್ಷಗಳಿಂದ ಹೀಲರ್‌ಗಳ ಜೊತೆ ಇರುವ ನಟಿ.....

ಬಾಲಿವುಡ್‌ ಬ್ಯೂಟಿ ವಿದ್ಯಾ ಬಾಲನ್ ಮೊದಲ ಸಲ ಹಾರ್ಮೋನ್ ಬದಲಾವಣೆಗಳು ಎಷ್ಟು ಪರಿಣಾಮ ಬೀರುತ್ತದೆ ಎಂದು ಧ್ವನಿ ಎತ್ತಿ ಮಾತನಾಡಿದ್ದಾರೆ. ಇದಕ್ಕೆ ಅನೇಕ ಹೆಣ್ಣು ಮಕ್ಕಳು ಕನೆಕ್ಟ್ ಆಗಿದ್ದಾರೆ.

ನನಗೆ ಹಲವು ವರ್ಷಗಳಿಂದ ಹಾಮೂನ್‌ ಸಮಸ್ಯೆಗಳಿದೆ ಅದರಲ್ಲಿ PCOD ಕೂಡ ಒಂದು. ಕಳೆದ 12 ವರ್ಷಗಳಿಂದ ಹೀಲರ್‌ಗಳ ಜೊತೆ ಕೆಲಸ ಮಾಡುತ್ತಿರುವೆ ಆದರೂ ಯಾವ ನೇರ ಉತ್ತರವಿಲ್ಲ. 

Latest Videos


ಪಿಸಿಒಡಿ,ಪಿಸಿಒಎಸ್‌ ಅಥವಾ ಹಾಮೋನಲ್ ಸಮಸ್ಯೆ ಬರುವುದು ಫೆಮಿನೆನ್‌ ಡೀಪ್‌ ರಿಜೆಕ್ಷನ್‌ನಿಂದ. ನನಗೆ ಸದಾ ಹುಡುಗನಾಗಿ ಹುಟ್ಟಬೇಕು ಅನಿಸುತ್ತಿತ್ತು ನನ್ನ ತಾಯಿಗೆ ಗಂಡು ಮಗು ಬೇಕಿತ್ತು ಎಂದು ಹೇಳುತ್ತಿದ್ದರು.

ಈ ಕಾರಣ ಮನಸ್ಸಿನಲ್ಲಿ ನಾನು ಹುಡುಗರಷ್ಟು ಸ್ಟ್ರಾಂಗ್ ಅನಿಸುತ್ತಿತ್ತು. ಈ ಹಾರ್ಮೂನ್ ಬದಲಾವಣೆ ಆಗುವುದು ನಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆಗಳಿಂದ. 

ಸದಾ ಹುಡುಗರಿಗೆ ಕಾಂಪಿಟೇಷನ್‌ ಕೊಡುವ ಹುಡುಗಿ ನಾನಾಗಿದ್ದ ಕಾರಣ ನನ್ನಲ್ಲಿದ್ದ ಹೆಣ್ಣುತನವನ್ನು ಎಂಜಾಯ್ ಮಾಡಲಿಲ್ಲ ಹೀಗಾಗಿ ಹಾರ್ಮೂನ್ ಬದಲಾಗಲು ಶುರುವಾಗಿತ್ತು. 

ಒಂದೆರಡು ಸಲ ಅಲ್ಲ ನನಗೆ ಹಾಮೋನ್‌ ಬದಲಾವಣೆ ಹಿಸ್ಟರ್ ಇದೆ ಹೀಗಾಗಿ ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ನನಗೆ ವರ್ಕೌಟ್ ಮಾಡುವುದು ತುಂಬಾನೇ ಇಷ್ಟ.
 

ಇದನ್ನು ಹೇಳಿದಾಗ ಯಾರೂ ನಂಬುವುದಿಲ್ಲ ದಿನ ವರ್ಕೌಟ್ ಮಾಡುತ್ತಿದ್ದರೂ ನೀವು ವರ್ಕೌಟ್ ಮಾಡುತ್ತಿಲ್ಲ ಅದಿಕ್ಕೆ ತೂಕ ಇಳಿದಿಲ್ಲ ಎಂದು ಗೇಲಿ ಮಾಡುತ್ತಿದ್ದರು.

ಈಗ ಜನರು ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಆದರೆ ಆಗ ಜನರು ಜಡ್ಜ್‌ ಮಾಡಿದಾಗ ಮನಸ್ಸಿನ ಮೇಲೆ ಪರಿಣಾಮ ಬೀರಿ ಹಾರ್ಮೊನ್ ಬದಲಾಗಿ ಪಿಸಿಒಡಿ ಆಗುತ್ತದೆ. 

ನಾವು ನಮ್ಮ ದೇಹ ಮತ್ತು ಅದರ ಆರೋಗ್ಯ ಹೇಗೆ ನೋಡುತ್ತೀವಿ ಮತ್ತು ಜನರು ನಮ್ಮ ದೇಹ ನೋಡು ರೀತಿಯಲ್ಲಿ ತುಂಬಾ ಬದಲಾವಣೆಗಳಿದೆ' ಎಂದು ದಿ ರಣವೀರ್ ಶೋನಲ್ಲಿ ಮಾತನಾಡಿದ್ದಾರೆ. 

click me!