ಪಿನ್ ತೆಗೆದರೆ ಸೀರೆ ಜಾರಬೇಕು..ನಮಗೆ ಅದೇ ಬೇಕು; ಆ ಕರಾಳ ದಿನ ನೆನಪಿಸಿಕೊಂಡ ಹೇಮಾ ಮಾಲಿನಿ

Published : Mar 29, 2024, 11:28 AM IST

ಬಾಲಿವುಡ್ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಹೇಮಾ ಮಾಲಿನಿ. ಆದರೆ ಆ ನಿರ್ದೇಶದ ಹೇಳಿದ ಮಾತಿಗೆ ಬೇಸರ.....

PREV
17
ಪಿನ್ ತೆಗೆದರೆ ಸೀರೆ ಜಾರಬೇಕು..ನಮಗೆ ಅದೇ ಬೇಕು; ಆ ಕರಾಳ ದಿನ ನೆನಪಿಸಿಕೊಂಡ ಹೇಮಾ ಮಾಲಿನಿ

ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿ ಚಿತ್ರವೊಂದರಲ್ಲಿ ನಟಿಸುವಾಗ ನಿರ್ದೇಶಕರು ಹೇಳಿದ ಮಾತಿಗೆ ಬೇಸರ ಮಾಡಿಕೊಂಡಿದ್ದರಂತೆ. ಆ ಘಟನೆಯನ್ನು ವಿವರಿಸಿದ್ದಾರೆ. 

27

ಈಗಿನ ಬಹುತೇಕ ನಟಿಯರು ಸೆರಗು ಜಾರಿಸುವುದಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚಿನ ದೃಶ್ಯಗಳನ್ನು ಲೀಲಾಜಾಲವಾಗಿ ಯಾವುದೇ ಅಳುಕು ಇಲ್ಲದೇ ಮಾಡುತ್ತಾರೆ ಹೀಗೆಂದು ಹಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

37

ಆದರೆ 70ರ  ದಶಕದ ಸನ್ನಿವೇಶವೇ ಬೇರೆ. ಯುವತಿಯೊಬ್ಬಳು ಚಿತ್ರರಂಗಕ್ಕೆ ಪ್ರವೇಶಿಸುತ್ತಾಳೆ ಎಂದರೆನೇ ಮೂಗು ಮುರಿಯುತ್ತಿದ್ದ ಆ ದಿನಗಳಲ್ಲಿ ಇಂಥ ದೃಶ್ಯಗಳನ್ನು ನೆನಪಿಸಿಕೊಳ್ಳುವುದೂ ಕಷ್ಟವಾಗಿತ್ತು. ಆದರೆ ತಾವು ಅಂಥ ಸನ್ನಿವೇಶವನ್ನು ಎದುರಿಸಿರುವುದಾಗಿ ನಟಿ ಹೇಳಿದ್ದಾರೆ. 
 

47

ಸತ್ಯಂ ಶಿವಂ ಸುಂದರಂ ಸಿನಿಮಾ ಚಿತ್ರೀಕರಣದ ವೇಳೆ ಚಿತ್ರದ ಆಫರ್‌ ಇಟ್ಟುಕೊಂಡು ರಾಜ್‌ ಕಪೂರ್‌ ತಮ್ಮ ಬಳಿ ಬಂದಿದ್ದರು ಎಂದು ಆ ಘಟನೆಯನ್ನು ಹೇಮಾ ಮಾಲಿನಿ ನೆನಪಿಸಿಕೊಂಡರು.

57

'ಅವರು ನನ್ನ ಬಳಿ ಬಂದು ನೀವು ಮಾಡದ ಚಿತ್ರವಿದೆ, ಈ ಚಿತ್ರವನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. ಆದರೆ ಆ ಚಿತ್ರದ ಕಥೆ ಕೇಳಿದ ಮೇಲೆ ನನ್ನ ತಾಯಿ ಕೂಡ ಅದನ್ನು ನಿರಾಕರಿಸಿದ್ದರು'

67

'ನಿರ್ದೇಶಕರ ಹೆಸರನ್ನು ಹೇಳದ ನಟಿ, ಆ ಚಿತ್ರದ ಶೂಟಿಂಗ್​ ವೇಳೆ  ನಾನು ಉಟ್ಟಿದ್ದ ಸೀರೆಯ ಪಿನ್  ಅನ್ನು ತೆಗೆದುಹಾಕುವಂತೆ ಹೇಳಲಾಯಿತು. ನಾನು ಸೀರೆಯ ಸೆರಗಿಗೆ ಸದಾ ಪಿನ್​ ಹಾಕಿಕೊಂಡೇ ಇರುತ್ತಿದ್ದೆ. 
 

77

ಆದರೆ 74 ವರ್ಷದ ಆ ನಿರ್ದೇಶಕ ಸೆರಗಿನ ಪಿನ್​ ತೆಗೆಯುವಂತೆ ಹೇಳಿದರು. ಆದರೆ ಹಾಗೆ ಮಾಡಿದರೆ ಸೆರಗು ಜಾರುತ್ತದೆ ಎಂದೆ. ನಮಗೂ ಅದೇ ಬೇಕು ಎಂದ ಆ ನಿರ್ದೇಶಕ ಇಂಥ ಸೀನ್​ ಇರುವ ದೃಶ್ಯ  ಚಿತ್ರೀಕರಿಸಲು ಬಯಸಿದ್ದರು ಎಂದು ನೆನಪಿಸಿಕೊಂಡರು.

Read more Photos on
click me!

Recommended Stories