ಸ್ವೆಟರ್ ಹಾಕಿದ ನಟಿ ಸೌಂದರ್ಯ ಶರ್ಮಾ ಟ್ರೋಲ್, ಕಾರಣವೇನು?

ನಟಿ ಸೌಂದರ್ಯ ಶರ್ಮಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾನೇ ಇರ್ತವೆ. ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ ಅವರನ್ನು ನೋಡಿ ಜನ ಟ್ರೋಲ್ ಮಾಡ್ತಿದ್ದಾರೆ.

Bollywood Actress Soundarya Sharma Trolled for Winter Outfit in Mumbai Heat

ಬಾಲಿವುಡ್ ನಟಿ ಸೌಂದರ್ಯ ಶರ್ಮಾ ರಾಂಚಿ ಡೈರೀಸ್ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಭಾರಿ ಸದ್ದು ಮಾಡಿದ್ದಾರೆ. ಹೌಸ್‌ಫುಲ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಸೌಂದರ್ಯ ಶರ್ಮಾ ಗಮನಸೆಳೆದಿದ್ದಾರೆ. ಇದರ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸೌಂದರ್ಯ ಶರ್ಮಾ ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ಸೌಂದರ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆಧರೆ ಇದೀಗ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ಸೌಂದರ್ಯ ಶರ್ಮಾ ಟ್ರೋಲ್ ಆಗಿದ್ದಾರೆ. 

ಸೌಂದರ್ಯ ಶರ್ಮಾ ಇತ್ತೀಚೆಗೆ ಬಾಂದ್ರಾದಲ್ಲಿ ಪ್ರತ್ಯಕ್ಷಗೊಂಡಿದ್ದರು. ಸೌಂದರ್ಯ ಕಪ್ಪು ಉಡುಪಿನ ಜೊತೆ ಸ್ವೆಟರ್ ಹಾಕಿಕೊಂಡು ಪ್ರತ್ಯಕ್ಷರಾಗಿದ್ದರು. ನಟಿ ಸೌಂದರ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಟ್ರೋಲ್ ಆಗಿದ್ದಾರೆ. ಪ್ರಮುಖವಾಗಿ ಮುಂಬೈನಲ್ಲಿನ ಸಿನಿ ರಸಿಕರು ಸೌಂದರ್ಯ ಶರ್ಮಾರನ್ನು ಟ್ರೋಲ್ ಮಾಡಿದ್ದಾರೆ. 


ಬಳಿ ಸ್ವೆಟರ್ ಹಾಕಿ ಸೌಂದರ್ಯ ಶರ್ಮಾ ಪ್ರತ್ಯಕ್ಷರಾಗಿದ್ದಾರೆ. ಆದರೆ ಮುಂಬೈನ ಬಿಸಿಲಲ್ಲಿ ಸೌಂದರ್ಯರ ಈ ಉಡುಗೆ ನೋಡಿ ಜನ ಟ್ರೋಲ್ ಮಾಡಿದ್ದಾರೆ. ಸೌಂದರ್ಯ ಚಳಿ ಹೋದ ಮೇಲೆ ಸ್ವೆಟರ್ ಹಾಕಿದ್ದಾರೆ. ಮುಂಬೈನಲ್ಲಿ ಎಲ್ಲಿದೆ ಚಳಿ, ಈ ಬಿಸಿಲಿಗೆ ಸ್ವೆಟರ್ ಯಾಕೆ ಎಂದು ಪ್ರಶ್ನಿಸಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಸೌಂದರ್ಯ ಶರ್ಮಾ ಡ್ರೆಸ್ ಹಾಕಲು ಗೊತ್ತಿಲ್ಲ ಎಂದು ಹಲವರು ಕಾಲೆಳೆದಿದ್ದಾರೆ. 

ಸೌಂದರ್ಯರಿಗೆ ಇಷ್ಟೊಂದು ಚಳಿ ಯಾಕೆ ಅಂತ ಜನ ಪ್ರಶ್ನಿಸುತ್ತಿದ್ದಾರೆ. ಇದೇನು ಫ್ಯಾಷನ್ ಅಂತೆಲ್ಲಾ ಕೇಳ್ತಿದ್ದಾರೆ. ಮುಂಬೈನ ಉರಿಬಿಸಿಲು ತಡೆಯಲು ಸಾಧ್ಯವಾಗುತ್ತಿಲ್ಲ. ಆದರ ಸೌಂದರ್ಯ ಶರ್ಮಾಗೆ ತೀವ್ರ ಚಳಿಯಾಗುತ್ತಿದೆ ಎಂದು ಟ್ರೋಲ್ ಮಾಡಿದ್ದಾರೆ. 

ಗ್ಲಾಮರಸ್ ಸೌಂದರ್ಯ ಶರ್ಮಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾನೇ ಇರ್ತವೆ. ಹಲವು ವೆಬ್ ಸೀರಿಸ್, ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡ ಸೌಂದರ್ಯ ಆರಂಭಿಕ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಹೀಗಾಗಿ ಭಾರತೀಯ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. 

Latest Videos

click me!