ಲಂಡನ್‌ನಲ್ಲಿ ಸೋನಮ್ ಕಪೂರ್ ರಾಕಿಂಗ್ ಬೇಬಿ ಶವರ್; ಫೋಟೋ ವೈರಲ್

First Published | Jun 16, 2022, 12:35 PM IST

ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಸೋನಮ್ ಕಪೂರ್ ಬೇಬಿ ಬಂಪ್ ಫೋಟೋಗಳು ಆಗಾಗಾ ವೈರಲ್ ಆಗುತ್ತಿರುತ್ತವೆ. ಲಂಡನ್‌ನಲ್ಲಿರುವ ಸೋನಮ್ ಅಲ್ಲಿಂದನೆ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಸೋನಮ್ ಕಪೂರ್ ಬೇಬಿ ಬಂಪ್ ಫೋಟೋಗಳು ಆಗಾಗಾ ವೈರಲ್ ಆಗುತ್ತಿರುತ್ತವೆ. ಲಂಡನ್‌ನಲ್ಲಿರುವ ಸೋನಮ್ ಅಲ್ಲಿಂದನೆ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

ಇತ್ತೀಚಿಗೆ ಸೋನಮ್ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲಂಡನ್‌ನಲ್ಲಿ ಬೇಬಿ ಶವರ್ ಮಾಡಿರುವ ಸೋನಮ್ ಸ್ನೇಹಿತರು ಭಾಗಿಯಾಗಿದ್ದರು. ಬೇಬಿ ಶವರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

Tap to resize

ಪಿಂಕ್ ಬಣ್ಣದ ಲಾಂಗ್ ಗೌನ್‌ನಲ್ಲಿ ಸೋನಮ್ ಮಿಂಚಿದ್ದರು. ಸೋನಮ್ ಬೇಬಿ ಶವರ್‌ನಲ್ಲಿ ಗಾಯಕ ಲಿಯೋ ಕಲ್ಯಾಣ್ ಕೂಡ ಭಾಗಿಯಾಗಿದ್ದರು. ಸೋನಮ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸೇರ್ ಮಾಡಿದ್ದಾರೆ. ಬಾಲಿವುಡ್‌ನ ಸ್ಪೈಸಿ ಗರ್ಲ್, ಸೋನಮ್ ಕಪೂರ್ ಬೇಬಿ ಶವರ್‌ನಲ್ಲಿ ನಾನು ಪರ್ಫಾಮ್  ಮಾಡಿದೆ ಎಂದು' ಹೇಳಿದ್ದಾರೆ.

ಲಿಯೋ ಕಲ್ಯಾಣ್ ಹಾಡುತ್ತಿರುವ ವಿಡಿಯೋವನ್ನು ಸೋನಮ್ ಶೇರ್ ಮಾಡಿದ್ದಾರೆ. ಪಾರ್ಟಿಯನ್ನು ಸುಂದರವಾಗಿ ಆಯೋಜಿಸಲಾಗಿತ್ತು. ಪಾರ್ಟಿಯ ಒಂದಿಷ್ಟು ಫೋಟೋಗಳನ್ನು ಸೋನಮ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಸೋನಮ್ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ

ಸೋನಮ್ ಕಪೂರ್ ಸಹೋದರಿ ರಿಯಾ ಕಪೂರ್ ಕೂಡ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಿಯಾ ಕೂಡ  ಲಂಡನ್‌ನಲ್ಲಿದ್ದಾರೆ. ಸಹೋದರಿಯ ಜೊತೆ ಇರುವ ಫೋಟೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. 

ನಟಿ ಸೋನಮ್ ಕಪೂರ್ 2018ರಲ್ಲಿ ಉದ್ಯಮಿ ಆನಂದ್ ಅಹುಜ ಜೊತೆ ಹಸಮಣೆ ಏರಿದರು. ಸೋನಮ್ ಮತ್ತು ಆನಂದ್ ಇಬ್ಬರುಅನೇಕ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಮದುವೆಯಾದರು. ಸದ್ಯ ಸೋನಮ್ ಜೋಡಿ ಲಂಡನ್‌ನಲ್ಲಿ ನೆಲೆಸಿದ್ದಾರೆ.          

Latest Videos

click me!