ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಪದೇ ಪದೇ ಬೇಬಿ ಬಂಪ್ ಪ್ರದರ್ಶಿಸುತ್ತಿದ್ದಾರೆ. ಬಿಳಿ ಉಡುಪಿನಲ್ಲಿ ಹೊಟ್ಟೆ ತೋರಿಸಿಕೊಂಡು ತಿರುಗುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು 'ಇಷ್ಟಕ್ಕೆ ಮುಗಿಸು ತಾಯಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಈಗ ಬೇಬಿ ಬಂಪ್ ಷೋ ಹೆಸರಿನಲ್ಲಿ ಅಸಭ್ಯ ಎನ್ನುವಂಥ ವಿಡಿಯೋಶೂಟ್ಗಳನ್ನು ಕೆಲವರು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವು ಸಿನಿಮಾ ತಾರೆಯರಂತೂ ಮುಕ್ಕಾಲು ಪಾಲು ನಗ್ನರಾಗಿ ಫೋಟೋಶೂಟ್ ಹೆಸರಿನಲ್ಲಿ ಎಲ್ಲವನ್ನೂ ಪ್ರದರ್ಶನ ಮಾಡ್ತಿರೋದು ಟ್ರೆಂಡ್ ಆಗಿ ಬಿಟ್ಟಿದೆ. ಅವರನ್ನೇ ಅನುಸರಿಸುವ ಅವರ ಅಭಿಮಾನಿಗಳು ಕೂಡ ವಿಭಿನ್ನ ರೀತಿಯಲ್ಲಿ ಹೊಟ್ಟೆಯ ಪ್ರದರ್ಶನ ಮಾಡಿಕೊಂಡು ಫೋಟೋ, ವಿಡಿಯೋಶೂಟ್ ಮಾಡಿಸಿಕೊಳ್ಳೋದು ಇದೆ.
26
ಹೊಟ್ಟೆ ಬಿಟ್ಟು ತಿರುಗ್ತಿರೋ ಸೋನಂ ಕಪೂರ್
ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಪದೇ ಪದೇ ತಾವು ಗರ್ಭಿಣಿ ಎನ್ನೋದನ್ನು ಸಾಬೀತು ಮಾಡಲು ಹೊಟ್ಟೆಯ ಭಾಗವನ್ನಷ್ಟೇ ಬಿಟ್ಟುಕೊಂಡು ತಿರುಗುತ್ತಿದ್ದಾರೆ. ನಟ-ನಟಿಯರ ಒಂದು ಝಲಕ್ ಸಿಕ್ಕರೆ ಸಾಕು ಎಂದು, ಹಸಿದ ಪ್ರಾಣಿಗಳಂತೆ ಕಾದು ಕುಳಿತುಕೊಳ್ಳುವ ಪಾಪರಾಜಿಗಳಿಗೆ ಇದು ಹಬ್ಬ ಉಂಟು ಮಾಡುತ್ತಿದೆ.
36
ಹೊಟ್ಟೆ ಬಿಡುವ ಕಾರಣ ಸಿಕ್ಕೇಬಿಡ್ತು!
ಇದಾಗಲೇ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಪುತ್ರಿ, ಸೋನಂ ಕಪೂರ್ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಳಿಯ ಉಡುಪಿನಲ್ಲಿ, ಹೊಟ್ಟೆಯನ್ನು ಬಿಟ್ಟುಕೊಂಡು ತಿರುಗುತ್ತಿರುವ ವಿಡಿಯೋ ವೈರಲ್ ಆಗುತ್ತಲೇ, ಹೊಟ್ಟೆ ಮಾತ್ರ ಕಾಣಿಸ್ತಿರೋ ನಟಿಗೆ ಸಲಾಂ ಹೇಳಿದ್ದಾರೆ. ಸದ್ಯ ಇಷ್ಟಕ್ಕೆ ಮುಗಿಸು ತಾಯೀ, ಮತ್ತಿನ್ನೇನೂ ತೋರಿಸಬೇಡ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಹಲವು ನಟಿಯರು ಇದೀಗ ಬಾಡಿಗೆ ತಾಯ್ತನದ ಮೂಲಕವೋ, ಇನ್ನಾವುದೋ ಮೂಲಕವೋ ಮಗುವನ್ನು ಮಾಡಿಕೊಳ್ತಿರೋ ಕಾರಣದಿಂದ ತಮ್ಮ ಮಗು ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದೆ ಎಂದು ತೋರಿಸಲು ಹೀಗೆ ಹೊಟ್ಟೆ ಬಿಟ್ಟುಕೊಂಡು ತಿರುಗುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
ಅಂದಹಾಗೆ, ಸೋನಂ ಕಪೂರ್ ಎರಡನೆಯ ಬಾರಿ ಗರ್ಭಿಣಿ ಆಗಿದ್ದಾರೆ. ಸೋನಂ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಳೆದ ನವೆಂಬರ್ನಲ್ಲಿ ಈ ಬಗ್ಗೆ ಜಾಲತಾಣದಲ್ಲಿ ತಿಳಿಸಿದ್ದರು. ಹಾಟ್ ಪಿಂಕ್ ಬಣ್ಣದ ಉಡುಪಿನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಮಾ ಎಂಬ ಶೀರ್ಷಿಕೆ ನೀಡಿದ್ದರು.
56
2018ರಲ್ಲಿ ಮದುವೆ
ಆನಂದ್ ಅಹುಜಾರನ್ನ ಸೋನಂ 2018ರಲ್ಲಿ ಮದುವೆಯಾಗಿದ್ದರು. ಈಗಾಗ್ಲೇ ದಂಪತಿಗೆ `ವಾಯು’ ಹೆಸರಿನ ಓರ್ವ ಗಂಡು ಮಗು ಇದೆ. ತಮ್ಮ 40ನೇ ವಯಸ್ಸಿನಲ್ಲಿ ಸೋನಂ ಕಪೂರ್ 2ನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇನ್‌ಸ್ಟಾದಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಸೋನಂ ಕಡು ಗುಲಾಬಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ ಇವರು.
66
ಅಭಿಮಾನಿಗಳ ಹಾರೈಕೆ
ಸೋನಂ ಕಪೂರ್ ಅವರಿಗೆ ಈಗ 41 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಎರಡನೆಯ ಬಾರಿ ಗರ್ಭ ಧರಿಸುತ್ತಿದ್ದಾರೆ. ಇದು ಸಂತೋಷದ ವಿಷಯವೇ. ಆದರೆ, ಈ ರೀತಿ ಪದೇಪದೇ ಹೊಟ್ಟೆ ಬಿಟ್ಟು ತಿರುಗುತ್ತಿರುವುದು ಸರಿಯಲ್ಲ ಎನ್ನುವುದು ಅವರ ಅಭಿಮಾನಿಗಳ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.