ಅಮ್ಮನಿಗೆ ಮಾತ್ರವಲ್ಲ, ನನಗೂ ಪುನರ್ಜನ್ಮವೇ; ಶಿಲ್ಪಾ ಶೆಟ್ಟಿ ತಾಯಿಗೆ ಗರ್ಭಪಾತ ಮಾಡಲು ಹೇಳಿದ್ದ ವೈದ್ಯರು

Published : Apr 23, 2024, 12:07 PM ISTUpdated : Apr 23, 2024, 12:36 PM IST

ಅಂದು ತಾಯಿ ಗರ್ಭಪಾತ ಮಾಡಿಸಿದ್ದರೆ ಶಿಲ್ಪಾ ಶೆಟ್ಟಿ ಅನ್ನೋ ವ್ಯಕ್ತಿ ಇರ್ತಾನೆ ಇರಲಿಲ್ಲ....ನನ್ನ ಹುಟ್ಟಿಗೆ ಬಲವಾದ ಕಾರಣವಿದೆ ಎಂದ ನಟಿ... 

PREV
16
ಅಮ್ಮನಿಗೆ ಮಾತ್ರವಲ್ಲ, ನನಗೂ ಪುನರ್ಜನ್ಮವೇ; ಶಿಲ್ಪಾ ಶೆಟ್ಟಿ ತಾಯಿಗೆ ಗರ್ಭಪಾತ ಮಾಡಲು ಹೇಳಿದ್ದ ವೈದ್ಯರು

ಬಾಲಿವುಡ್‌ ಎವರ್‌ಗ್ರೀನ್ ಫಿಟ್ ಆಂಡ್ ಫೈನ್ ಬ್ಯೂಟಿ ಶಿಲ್ಪಾ ಶೆಟ್ಟಿ ಹಲವಾರು ಸಲ ತಾವು ಪ್ರೆಗ್ನೆನ್ಸಿ ಸಮಯದಲ್ಲಿ ಎದುರಿಸಿದ ಚಾಲೆಂಜ್‌ಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ ಆದರೆ ತಾಯಿ ಎದುರಿಸಿದ ಸವಾಲಿನ ಬಗ್ಗೆ ಇದೇ ಮೊದಲು ರಿವೀಲ್ ಮಾಡಿರುವುದು. 

26

ಶಿಲ್ಪಾ ಶೆಟ್ಟಿ ಅಮ್ಮನ ಗರ್ಭದಲ್ಲಿ ಇರುವಾಗಲೇ ಅಮ್ಮನಿಗೂ ಗರ್ಭಪಾತ ಮಾಡಿಕೊಳ್ಳಲು ಹೇಳಿದ್ದರೂ, ತಾವು ಹೇಗೆ ಹುಟ್ಟಿದೆ ಎಂಬ ಕುರಿತು ಇದೇ ಮೊದಲ ಬಾರಿಗೆ ನಟಿ ನೋವು ತೋಡಿಕೊಂಡಿದ್ದಾರೆ

36

ನಾನು ಅಮ್ಮನ ಗರ್ಭದಲ್ಲಿದ್ದಾಗ, ತಾಯಿಯ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ರಕ್ತಸ್ರಾವವಾಗುತ್ತಿತ್ತು. ನಾನು ಹುಟ್ಟಿದರೆ ಅವರ ಜೀವಕ್ಕೇ ಅಪಾಯ ಎಂದೂ ವೈದ್ಯರು ಹೇಳಿದ್ದರು.  

46

ಗರ್ಭಪಾತ ಅನಿವಾರ್ಯವಾಗಿತ್ತು. ಆದ್ದರಿಂದ ನಾನು ಹುಟ್ಟುವುದೇ ಇಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೂ ಅಮ್ಮ ನನಗೆ ಜನ್ಮ ನೀಡಿದಳು.

56

ನನ್ನ ಹುಟ್ಟು ಅಮ್ಮನಿಗೆ ಮಾತ್ರವಲ್ಲದೇ, ನನಗೂ ಪುನರ್ಜನ್ಮವೇ. ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು ಎಂದಿದ್ದಾರೆ ಶಿಲ್ಪಾ. 

66

ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಇದ್ದೇ ಇರುತ್ತವೆ. ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ತಮ್ಮ ಹುಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 

Read more Photos on
click me!

Recommended Stories