ಒಂದು ಆ್ಯಡ್ ಶೂಟಿಂಗ್‌ನಲ್ಲಿ ಶಿಲ್ಪಾ ಹಾಗೂ ಫರಾಹ್ ಖಾನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
undefined
ಖಾನ್ ಅವರಿಂದ ಶಿಲ್ವಾ ಜಾಹೀರಾತಿನ ಅವಕಾಶ ಕಸಿದು ಕೊಂಡಿರುವುದಾಗಿ ಫರಾಹ್ ಆರೋಪಿಸಿದ್ದಾರೆ. ಈ ಜಾಹೀರಾತುವಿನಲ್ಲಿ ಮೊದಲು ನಾನು ಕೆಲಸ ಮಾಡಬೇಕಿತ್ತು. ಆದರೆ ಶಿಲ್ಪಾ ತನ್ನ ಹೊಟ್ಟೆ ಮೇಲೆ ಹೊಡೆದಿದ್ದಾಳೆ, ಎಂದಿದ್ದಾರೆ ಫರಾಹ್ ಖಾನ್.
undefined
ಪಾಪಿ ಹೊಟ್ಟೆಯೇ ಕಾರಣವಾಗಿದೆ. ಈ ಆ್ಯಡ್ ನನಗೆ ಹೊಟ್ಟೆಕಾರಣದಿಂದಲೇ ಸಿಕ್ಕಿದೆ, ಎಂದು ಶಿಲ್ಪಾ ತನ್ನ ಹೊಟ್ಟೆ ಮಚ್ಚು ಸೊಂಟತೋರಿಸುತ್ತಾ ಫರಾಹ್‌ಗೆ ಉತ್ತರಿಸಿದ್ದಾರೆ.
undefined
'ಇವರ ವಯಸ್ಸು 35 ವರ್ಷದ ನಂತರ ನಿಂತು ಹೋಗಿದೆ ಎಂದು ಅನಿಸುತ್ತಿದೆ,' ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಗಾರ್ಜಿಯಸ್ ಶಿಲ್ಪಾ' ಎಂದೂ, ಮತ್ತೊಬ್ಬರು 'ನಾನು ಸತ್ತು ಹೋಗುತ್ತೇನೆ ಶಿಲ್ಪಾ' ಎಂದು ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.
undefined
8 ಜೂನ್ 1975ರಂದು ಬೆಂಗಳೂರಿನಲ್ಲಿ ಜನಿಸಿದ ಶಿಲ್ಪಾ ಶೆಟ್ಟಿ ಅವರನ್ನು ಬಾಲಿವುಡ್‌ನ ಮೋಸ್ಟ್ ಫಿಟ್ ಸ್ಟಾರ್ ಎಂದು ಪರಿಗಣಿಸಲಾಗುತ್ತದೆ. 46 ವರ್ಷದ ಈ ನಟಿ 2 ಮಕ್ಕಳ ತಾಯಿ.
undefined
ತನ್ನನ್ನು ಫಿಟ್ ಆಗಿ ಇಡಲು ಶಿಲ್ಪಾ ತರತರದ ವರ್ಕೌಟ್ ಮಾಡುತ್ತಾರೆ. ಕಾರ್ಡಿಯೋನಿಂದ ಹಿಡಿದು, ಸ್ಟ್ರೆಂತ್ ಟ್ರೈನಿಂಗ್ ಮತ್ತು ಯೋಗದವರೆಗೆ ಎಲ್ಲಾ ರೀತಿಯ ವ್ಯಾಯಾಮಗಳೂ ಸೇರಿವೆ.
undefined
ಸ್ಟ್ರೆಂತ್ ಟ್ರೈನಿಂಗ್‌ನಲ್ಲಿ ಅಪರ್ ಬಾಡಿ ಹಾಗೂ ಲೋಯರ್ ಬಾಡಿ ವರ್ಕೌಟ್ ಎಂದು ವಿಂಗಡಿಸಿಕೊಂಡಿದ್ದಾರೆ ಶಿಲ್ಪಾ. ನಟಿಯ ಮಸಲ್ಸ್ ಬಲಗೊಳಿಸಲು ಮತ್ತು ಟೋನ್ ಆಗಲು ಈ ವ್ಯಾಯಾಮಗಳು ಸಹಾಯಕಾರಿ. ಯೋಗದ ನಂತರ 10 ನಿಮಿಷಗಳ ಕಾಲ ಧ್ಯಾನ ಕೂಡ ಮಾಡುತ್ತಾರೆ ಬಾಲಿವುಡ್ ನಟಿ ಶಿಲ್ಪಾ.
undefined
ದಿನದಲ್ಲಿ 1800 ಕ್ಯಾಲೋರಿ ಅಷ್ಟು ಎನರ್ಜಿ ಸೇವಸುವ ಶಿಲ್ಪಾ ದಿನವನ್ನು ಅಮ್ಲಾ ಮತ್ತು ಅಲೋವೇರಾ ಜ್ಯೂಸ್‌ನಿಂದ ಶುರುಮಾಡುತ್ತಾರೆ. ಅಡುಗೆಗೆ ಅಲೀವ್ ಆಯಿಲ್ ಬಳಸುತ್ತಾರಂತೆ ಇವರು.
undefined
ಯೋಗ ಮತ್ತು ವರ್ಕೌಟ್ ನಂತರ ಪ್ರೋಟಿನ್ ಡ್ರಿಂಕ್ ಸೇವಿಸುತ್ತಾರೆ. ವಾರದಲ್ಲಿ ಒಂದು ದಿನ ಹೊಟೇಲ್ಫುಡ್ ಸೇವಿಸುವ ನಟಿ ಉಳಿದ 6 ದಿನ ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಾರೆ. ಕ್ಯಾಲೋರಿ ಹೆಚ್ಚಿರುವ ಕಾರಣ ಊಟದ ನಡುವೆ ಶಿಲ್ಪಾ ಯಾವುದೇ ರೀತಿಯ ಸ್ನಾಕ್ಸ್ ತಿನ್ನಲು ಇಷ್ಟ ಪಡುವುದಿಲ್ಲ.
undefined
ಬೆಳಿಗ್ಗೆ ತಿಂಡಿಗೆ ಒಂದು ಬೌಲ್ ಧಲಿಯಾ ಮತ್ತು ಟೀ ತೆಗೆದುಕೊಳ್ಳುತ್ತಾರೆ. ನಂತರ ವರ್ಕೌಟ್ ಮಾಡಿ ಪ್ರೋಟೀನ್ ಶೇಕ್, 2 ಖರ್ಜೂರ ಮತ್ತು 8 ಒಣ ದ್ರಾಕ್ಷಿ ಸೇವಿಸುತ್ತಾರೆ. ಲಂಚ್‌ಗೆ 5 ತರದ ಧಾನ್ಯಗಳ ತುಪ್ಪದಲ್ಲಿ ಮಾಡಿದ ರೊಟ್ಟಿಜೊತೆ ಚಿಕನ್, ಬೇಳೆ ಹಾಗೂ ತರಕಾರಿಗಳನ್ನು ಸೇವಿಸುತ್ತಾರೆ ಈ ಫಿಟ್ ನಟಿ.
undefined
ಮಧ್ಯಾಹ್ನ ಗ್ರೀನ್ ಟೀ, ಸಂಜೆ ಸೋಯಾ ಮಿಲ್ಕ್ ಮತ್ತು ಸೇಬು ಹಣ್ಣು ಹಾಗೂ ರಾತ್ರಿಸಲಾಡ್ ಇವರ 6 ದಿನದ ಡಯಟ್ ಮತ್ತು ಚೀಟ್ ಡೇ ದಿನ ಅವರಿಗೆ ಇಷ್ಟವಾಗಿರುವುದನ್ನು ತಿನ್ನುತ್ತಾರೆ, ಎಂದು ಶಿಲ್ವಾ ಇಂಟರ್‌ವ್ಯೂವ್‌ವೊಂದರಲ್ಲಿ ಹೇಳಿದ್ದರು.
undefined
ಫಿಟ್ನೆಸ್‌ಗಾಗಿ ಪವರ್ ಯೋಗ ಡಿವಿಡಿ ಲಾಂಚ್ ಮಾಡಿದ ಮೊದಲ ನಟಿ ಇವರು. ದೇಹ ಮತ್ತು ಮನಸ್ಸನ್ನು ಫಿಟ್ ಆಗಿಡಲು ಯೋಗ ತುಂಬಾ ಪರಿಣಾಮಕಾರಿ ಮಾರ್ಗ ಎಂದು ಶಿಲ್ಪಾ ಶೆಟ್ಟಿಯ ಅಭಿಪ್ರಾಯ.
undefined