ಬಾಲಿವುಡ್‌ ನಟಿ ಮದುವೆಯಾಗುವ ಮುಂಚೆ ಈ ಕಂಡೀಷನ್‌ ಹಾಕಿದ್ದರು ಮಹೇಶ್‌ಬಾಬು!

First Published Feb 13, 2021, 11:46 AM IST

ದಕ್ಷಿಣದ ಸೂಪರ್‌ಸ್ಟಾರ್‌ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಮ್ಯಾರೀಡ್‌ ಲೈಫ್‌ಗೆ 16 ವರ್ಷ. ಫೆಬ್ರವರಿ 10, 2005ರಂದು ಈ ಕಪಲ್‌ ರಹಸ್ಯವಾಗಿ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ್ಯನಿವರ್ಸರಿಯ ಸಮಯದಲ್ಲಿ, ಮಹೇಶ್ ಬಾಬು ರೊಮ್ಯಾಂಟಿಕ್ ಫೋಟೋ ಜೊತೆ ಹಂಚಿಕೊಂಡು ಅವರ ಭಾವನೆಗಳನ್ನು ಹಂಚಿಕೊಂಡಿದ್ದಾರೆ  ಮತ್ತು ಶಾಶ್ವತವಾಗಿ ಒಟ್ಟಿಗೆ ಇರುವುದಾಗಿ ಭರವಸೆ ನೀಡಿದರು. ಅದೇ ಸಮಯದಲ್ಲಿ, ನಮ್ರತಾ ಇನ್ಸ್ಟಾಗ್ರಾಮ್‌ನ‌ಲ್ಲಿ ಪೋಸ್ಟ್ ಮಹೇಶ್‌ಗೆ ಚುಂಬಿಸುತ್ತಿರುವ ಪೋಟೋವನ್ನು ಶೇರ್‌ ಮಾಡಿದ್ದಾರೆ. ಸಿನಿಮಾಕ್ಕೆ ಸೇರಿದ ಈ ಇಬ್ಬರ ಲವ್‌ಸ್ಟೋರಿ ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ದಂಪತಿ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಇಲ್ಲಿದೆ ನೋಡಿ. 

ನಮ್ರತಾ ಮಹೇಶ್‌ಗಿಂತ 3 ವರ್ಷ ದೊಡ್ಡವರು. ಆದರೆ ವಯಸ್ಸು ಅವರ ಪ್ರೀತಿಗೆ ಅಡ್ಡಿಯಾಗಿಲ್ಲ.
undefined
ನಮ್ರತಾ ಸಲ್ಮಾನ್‌ ಖಾನ್‌ ಸಿನಿಮಾ ಜಬ್‌ ಪ್ಯಾರ್‌ ಕಿಸಿಸೇ ಹೋತಾ ಹೈ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ನಂತರ ತೆಲಗು ಸಿನಿಮಾದಲ್ಲಿ ನಮ್ರತಾ ಮಹೇಶ್‌ ಬಾಬು ಜೊತೆ ಕೆಲಸ ಮಾಡಿದರು.
undefined
2000ರಲ್ಲಿ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಮಹೇಶ್‌ ಬಾಬು ಮತ್ತು ನಮ್ರತಾರ ಮೊದಲ ಭೇಟಿ ಆಯಿತು. ಮೊದಲ ಬಾರಿಗೆ ಪರಸ್ಪರ ಇಷ್ಷಪಟ್ಟ ಈ ಜೋಡಿ ಸಿನಿಮಾ ಶೂಟಿಂಗ್‌ ಮುಗಿಯುವ ವೇಳೆಗೆ ಪ್ರೀತಿಸಲು ತೊಡಗಿದ್ದರು.
undefined
ತಮ್ಮ ರಿಲೆಷನ್‌ಶಿಪ್‌ ಅನ್ನು ಮೀಡಿಯಾದ ಕಣ್ಣಿನಿಂದ ದೂರ ಇಡಲು ಬಯಸಿದ್ದರುಮಹೇಶ್‌ ಹಾಗೂ ನಮ್ರತಾ. ಇದರ ಬಗ್ಗೆ ಮಹೇಶ್‌ ಬಾಬು ಮನೆಯವರಿಗೆ ಸಹ ತಿಳಿಸಿರಲಿಲ್ಲ.
undefined
5 ವರ್ಷಗಳ ಕಾಲ ಡೇಟ್ ಮಾಡಿದ ಇವರು ಮದುವೆಯಾಗಲು ನಿರ್ಧರಿಸಿದರು. ಆದರೆ ಮದುವೆಯ ನಂತರ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟು, ಫ್ಯಾಮಿಲಿಗೆ ಸಮಯ ನೀಡಬೇಕಾಗಿ ಮಹೇಶ್‌ ನಮ್ರತಾಗೆ ಕಂಡಿ‍ಷನ್‌ ಹಾಕಿದ್ದರು. ಇದಕ್ಕೆ ಒಪ್ಪಿದ ನಮ್ರತಾ ಪ್ರೀತಿಗಾಗಿ ತಮ್ಮ ಫಿಲ್ಮ್‌ ಕೆರಿಯರ್‌ ಅನ್ನು ತೊರೆದರು.
undefined
ಮದುವೆಯ ನಂತರ ನಮ್ರತಾ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾದರೆ, ಮಹೇಶ್‌ ಬಾಬು ಇನ್ನೂ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಗೌತಮ್‌ ಮತ್ತು ಸೀತಾರಾ ಎಂಬ 2 ಮಕ್ಕಳನ್ನು ಹೊಂದಿದ್ದಾರೆ ಈ ಕಪಲ್‌.
undefined
1993ರಲ್ಲಿ ಮಿಸ್‌ ಇಂಡಿಯಾ ಕೀರಿಟ ಗೆದ್ದ ನಮ್ರತಾ ಶಿರೋಡ್ಕರ್‌ ಮಿಸ್‌ ಯೂನಿವರ್ಸ್‌ ಸ್ವರ್ಧೆಯ ಫೈನಲ್‌ 5 ತಲುಪಿದ್ದರು. ಹಲವು ಬ್ಯೂಟಿ ಪೇಜೆಂಟ್‌ ಗೆದ್ದ ನಮ್ರತಾ ಹಲವು ವರ್ಷಗಳ ಕಾಲ ಮಾಡೆಲಿಂಗ್‌ನ ನಂತರ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದರು.
undefined
ನಮ್ರತಾ ಅವರ ವೃತ್ತಿ ಜೀವನದ ಚಿತ್ರಗಳಲ್ಲಿ ಮೇರೆ ದೋ ಅನ್ಮೋಲ್‌ ರತನ್, ಹೀರೋ ಹಿಂದೂಸ್ತಾನಿ, ಕಚ್ಚೆ ಧಾಗೆ, ಪುಕರ್, ವಾಸ್ತವ್ ಅಲ್ಬೆಲಾ, ತೇರಾ ಮೇರಾ ಸಾಥ್ ರಹೇ, ಮೆಸ್ಸಿಹ್, ಪ್ರನ್ ಜಾನೆ ಪರ್ ಶಾನ್ ಜಾಯೆ, ತಹಜೀಬ್, ಚರಸ್, ಇನ್ಸಾಫ್ ಮತ್ತು ಎಲ್ಒಸಿ ಕಾರ್ಗಿಲ್' ನಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
undefined
ಮಹೇಶ್ ಬಾಬು ದಕ್ಷಿಣದ ಸೂಪರ್ ಸ್ಟಾರ್. 1999 ರಲ್ಲಿ 'ರಾಜ ಕುಮರುಡು' ಆಗಿ ಪಾದಾರ್ಪಣೆ ಮಾಡಿದರು. ನಂತರ ಅವರು 'ಮುರಾರಿ' (2001), 'ಬಾಬಿ' (2002), 'ಒಕ್ಕಾಡು' (2003), 'ಅರ್ಜುನ್' (2004), 'ಪೊಕಿರಿ' (2006), 'ಅಗಾಡು' '(2014)),' ಬ್ರಹ್ಮೋತ್ಸವಂ '(2016), ಸ್ಪೈಡರ್, ಭಾರತ್ ಆನೆ ನೇನು, ಮಹರ್ಷಿ, ಸರಿಲೇರು ನಿಕೆವೇರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
undefined
click me!