ಸಲ್ಲೂ ಭಾಯ್ ಮಾಜಿ ಗರ್ಲ್’ಫ್ರೆಂಡ್, ಸ್ಟಾರ್ ಕ್ರಿಕೆಟಿಗನ ಮಾಜಿ ಪತ್ನಿಯಾಗಿದ್ದ ಈ ನಟಿ ವಯಸ್ಸು 64 ಆದ್ರೂ ಹೇಗಿದ್ದಾರೆ ನೋಡಿ

First Published | Sep 18, 2024, 6:02 PM IST

ಬಾಲಿವುಡ್ ನ ಸುರಸುಂದರಿ, 80ರ ದಶಕದ ಮಿಸ್ ಇಂಡಿಯಾ ವಿಜೇತೆ, ಸಲ್ಮಾನ್ ಖಾನ್ ಮೊದಲ ಗರ್ಲ್ ಫ್ರೆಂಡ್ ಸಂಗೀತ ಬಿಜಲಾನಿ ಈ ವಯಸಲ್ಲೂ ಹೇಗಿದ್ದಾರೆ ನೋಡಿ. 
 

ಈಕೆ ಬಾಲಿವುಡ್ ನಲ್ಲಿ (bollywood beauty) ಒಂದಾನೊಂದು ಕಾಲದಲ್ಲಿ ಮಿಂಚಿದಂತಹ ಸುರಸುಂದರಿ. ಈಕೆಯ ಅಂದಕ್ಕೆ ಮಾರು ಹೋಗದವರೇ ಇಲ್ಲ. ಆ ಕಾಲದಲ್ಲಿ ಕನಸಿನ ರಾಣಿಯಾಗಿದ್ದ ನಟಿ, ರೂಪದರ್ಶಿಯೂ ಹೌದು, ಇವತ್ತು 64 ವರ್ಷ ವಯಸ್ಸಾಗಿದ್ದರೂ ನಟಿಯ ಅಂದ ಚಂದ ಅವತ್ತು ಹೇಗಿತ್ತೋ ಹಾಗೆಯೇ ಇದೆ. 
 

ಯಾರಪ್ಪ ಈ ನಟಿ ಅಂತ ಯೋಚ್ನೆ ಮಾಡ್ತಿದ್ದೀರಿರಾ ಅವರು ಬೇರಾರು ಅಲ್ಲ, ಸಂಗೀತಾ ಬಿಜಲಾನಿ (Sangeeta Bijlani). 1980ರಲ್ಲಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸುಂದರಿ, ಮಾಡೆಲಿಂಗ್ ನಲ್ಲಿರುವಾಗಲೇ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ ಮಾಡ್ತಿದ್ದರು ಸಂಗೀತಾ. 
 

Tap to resize

1986ರ ಸಮಯದಲ್ಲಿ ಸಲ್ಮಾನ್ ಖಾನ್ (Salman Khan) ಬಾಲಿವುಡ್ ನಲ್ಲಿ ಯಶಸ್ವಿ ನಾಯಕನಾಗಿದ್ದು, ಸಂಗೀತಾ ಸಕ್ರಿಯ ನಟಿಯಾಗಿದ್ದರು. ಈ ಸಮಯದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಭಾರಿ ಸುದ್ದಿಯಾಗಿತ್ತು, ಇಬ್ಬರು ಮದುವೆಯಾಗುವುದಾಗಿ ಸಹ ಸುದ್ದಿಯಾಗಿತ್ತು. ಸಲ್ಲೂ ಮತ್ತು ಸಂಗೀತಾ ಮದುವೆ ಆಮಂತ್ರಣ ಪತ್ರಿಕೆ ಸಹ ಸಿದ್ಧವಾಗಿತ್ತು. ಆದರೆ ಕೊನೆಗೆ ಆಗಿದ್ದೇ ಬೇರೆ. 
 

ಇನ್ನೇನು ಮದುವೆ ನಡೆಯುತ್ತೆ ಎನ್ನುವಾಗಲೇ ಸಂಗೀತಾ, ಸಲ್ಮಾನ್ ಖಾನ್ ಅವರನ್ನು ಮತ್ತೊಬ್ಬ ನಟಿ ಸೋಮಿ ಆಲಿ ಜೊತೆ ಇರೋದನ್ನು ನೋಡಿದ್ದರು. ಆವಾಗ್ಲೇ ತಮ್ಮ ಸಂಬಂಧವನ್ನು ಮುರಿದು, ಮದುವೆಯನ್ನು ಸಹ ಸಂಗೀತಾ ಮುರಿದಿದ್ದರು. ನಂತರ ಸಂಗೀತಾ ಬಾಳಲ್ಲಿ ಬಂದದ್ದು ಕ್ರಿಕೆಟರ್ ಮಹಮ್ಮದ್ ಅಜರುದ್ದೀನ್. 
 

ಜಾಹೀರಾತು ಶೂಟಿಂಗ್ ಸಂದರ್ಭದಲ್ಲಿ ಅಜರುದ್ಧೀನ್ (Mohammad Azaruddhin) ಮತ್ತು ಸಂಗೀತಾ ಭೇಟಿಯಾದರು. ಖ್ಯಾತ ಕ್ರಿಕೆಟಿಗನಿಗೆ ಮೊದಲ ನೋಟದಲ್ಲಿ ಸಂಗೀತಾ ಮೇಲೆ ಲವ್ ಆಗಿತ್ತು. ಆದರೆ ಅದಾಗಲೇ ಅಜರುದ್ದೀನ್ ಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಸಂಗೀತಾ ಮೇಲಿನ ಪ್ರೀತಿಯಿಂದ ಮೊದಲ ಪತ್ನಿಗೆ ಡಿವೋರ್ಸ್ ನೀಡಿ, 1996ರಲ್ಲಿ ಸಂಗೀತಾ ಜೊತೆ ಮದುವೆಯಾಗಿದ್ದರು. 
 

ಸುದ್ದಿಗಳ ಪ್ರಕಾರ ಸಂಗೀತಾ ತಮ್ಮ ಪ್ರೀತಿಗಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರಂತೆ. ಸಂಗೀತಾ ಮದುವೆಯ ನಂತರ ಆಯೇಷಾ ಬೇಗಂ ಆಗಿ ಗುರುತಿಸಿಕೊಂಡಿದ್ದರು. ಆದರೆ ಈ ಸಂಬಂಧ ಕೂಡ ಹೆಚ್ಚು ಸಮಯ ಉಳಿಯಲಿಲ್ಲ, 14 ವರ್ಷಗಳ ನಂತರ ಮುರಿದುಬಿತ್ತು. 2010ರಲ್ಲಿ ಇಬ್ಬರೂ ಬೇರೆಯಾದರು. 
 

ಬಾಲಿವುಡ್ ಬ್ಯೂಟಿಯಾಗಿದ್ದರೂ, ಮಿಸ್ ಇಂಡಿಯಾ ವಿಜೇತೆಯಾಗಿದ್ದರೂ, ಪ್ರೀತಿಯ ವಿಷಯದಲ್ಲಿ ಮಾತ್ರ ಸಂಗೀತಾ ಬಿಜಲಾನಿ ಗೆಲ್ಲಲೇ ಇಲ್ಲ. ಸದ್ಯ 64ರ ಹರೆಯದಲ್ಲಿ ಇನ್ನೂ ಸಿಂಗಲ್ ಆಗಿದ್ದಾರೆ ನಟಿ. ಆದರೆ ಈ ವಯಸಲ್ಲೂ ನಟಿಯ ಸೌಂದರ್ಯ, ಬ್ಯೂಟಿ, ಫಿಟ್ನೆಸ್ ನೋಡಿ ಜನರು ಶಾಕ್ ಆಗುತ್ತಿದ್ದಾರೆ. ನಿಜಕ್ಕೂ ಈಕೆಗೆ 64 ವರ್ಷ ವಯಸ್ಸಾಗಿದ್ಯಾ? ಅಥವಾ 46 ಅಷ್ಟೇನಾ ಅಂತ ಕೇಳ್ತಿದ್ದಾರೆ. 
 

Latest Videos

click me!