ಲವ್​ ಜಿಹಾದ್​ಗೆ ಸಿಲುಕಿ ಕ್ರಿಕೆಟಿಗನ ಮದುವೆಯಾದ ಬಾಲಿವುಡ್​ ಬ್ಯೂಟಿ ರೀನಾ? ದುರಂತದ ಕಥೆ ರಿವೀಲ್​!

Published : Feb 25, 2026, 06:12 PM IST

70-80ರ ದಶಕದ ನಟಿ ರೀನಾ ರಾಯ್, ಶತ್ರುಘ್ನ ಸಿನ್ಹಾ ಜೊತೆಗಿನ ಪ್ರೀತಿ ಮುರಿದುಬಿದ್ದ ನಂತರ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ವಿವಾಹವಾದರು. ಆದರೆ, ಸಾಂಸಾರಿಕ ಭಿನ್ನಾಭಿಪ್ರಾಯದಿಂದ ಈ ಮದುವೆ ಮುರಿದುಬಿದ್ದು, ಮಗಳ ಪಾಲನೆಗಾಗಿ ಅವರು ಹೋರಾಡಬೇಕಾಯಿತು.

PREV
16
ಬಾಲಿವುಡ್​ ಆಳಿದ್ದ ಬ್ಯೂಟಿ

70 ಮತ್ತು 80 ರ ದಶಕದಲ್ಲಿ ಬಾಲಿವುಡ್​ ಆಳಿದ್ದ ಬ್ಯೂಟಿಗಳ ಪೈಕಿ ನಟಿ ರೀನಾ ರಾಯ್​ (Reena Roy) ಒಬ್ಬರು. ಶ್ರೀದೇವಿ, ಜಯಪ್ರದಾ ಅವರಂಥ ಘಟಾನುಘಟಿ ತಾರೆಯರಿಗೆ ಪೈಪೋಟಿ ನೀಡುತ್ತಲೇ ತಮ್ಮ ಸ್ಥಾನವನ್ನು ಭದ್ರವಾಗಿಸಿರಿಸಿಕೊಂಡವರು ನಟಿ. ಅವರಿಗೆ ಈಗ 69 ವರ್ಷ ವಯಸ್ಸು. ಆದರೆ ಅವರ ಯೌವನದಲ್ಲಿ ಆದ ಘಟನೆಯ ಬಗ್ಗೆ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. ಬಾಲಿವುಡ್​ನಲ್ಲಿ ಟಾಪ್​ ಸ್ಥಾನದಲ್ಲಿ ಇರುವಾಗಲೇ ಪಾಕಿಸ್ತಾನದ ಕ್ರಿಕೆಟಿಗ ಮೊಹ್ಸಿನ್ ಖಾನ್ (Monsin Khan) ಅವರನ್ನು ಮದುವೆಯಾದಾಗ ಇಂಡಸ್ಟ್ರಿಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ನಟಿ ಲವ್​ ಜಿಹಾದ್​ಗೆ ಬಲಿಯಾಗಿರುವ ಬಗ್ಗೆ ಸುದ್ದಿಯಾಗಿತ್ತು.

26
ಹಿಟ್​ ಚಿತ್ರಗಳಲ್ಲಿ ನಟನೆ

ಅಷ್ಟಕ್ಕೂ, ನಟಿ ರೀನಾ ರಾಯ್​ ಅತ್ಯಂತ ಕಡಿಮೆ ಸಮಯದಲ್ಲಿ, ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ರೀನಾ ಅವರು ಬಹಳ ಪ್ರಸಿದ್ಧರಾದದ್ದು ಆ ಕಾಲದ ಖ್ಯಾತ ನಾಯಕ ನಟ, ಶತ್ರುಘ್ನ ಸಿನ್ಹಾ ಅವರ ಜೊತೆ ಲವ್‌ ಸ್ಟೋರಿಯಿಂದಲೇ. ಶತ್ರುಘ್ನ ಸಿನ್ಹಾ (Shatrughna Sinha) ಮತ್ತು ರೀನಾ ಹನ್ನೆರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಕುತೂಹಲದ ಸಂಗತಿ ಎಂದರೆ ಅವುಗಳಲ್ಲಿ ಬಹುತೇಕ ಎಲ್ಲವೂ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳೇ.

36
ಶತ್ರುಘ್ನ ಸಿನ್ಹಾ ಜೊತೆ ಲವ್​

ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಭಾರಿ ಸುದ್ದಿ ಚಿತ್ರವಲಯದಲ್ಲಿ ಹರಡಿತ್ತು. ಶತ್ರುಘ್ನ ಸಿನ್ಹಾ ಅವರ ಆಪ್ತರಲ್ಲಿ ಒಬ್ಬರಾದ ಪಹ್ಲಾಜ್ ಅವರು 1982 ರಲ್ಲಿ ಅವರು ಇವರಿಬ್ಬರ ಜೋಡಿಯಲ್ಲಿ 'ಹತ್​ಕಡಿ' (Hatkadi) ಚಿತ್ರವನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾಕ್ಕೂ ಮುಂಚೆಯೇ ಇಬ್ಬರ ನಡುವಿನ ಪ್ರೀತಿ ಬೆಳಕಿಗೆ ಬಂದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು. 1980 ರಲ್ಲಿ ಪೂನಂ ಸಿನ್ಹಾ ಅವರನ್ನು ಶತ್ರುಘ್ನ ಸಿನ್ಹಾ ವಿವಾಹವಾದರು. ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್​ ಅವರ ರೋಚಕ ಪ್ರೇಮ್​ ಕಹಾನಿ ಕುರಿತು 2016 ರಲ್ಲಿ ಪ್ರಕಟವಾದ ಶತ್ರುಘ್ನ ಸಿನ್ಹಾ ಅವರ ಜೀವನಚರಿತ್ರೆ 'ಎನಿಥಿಂಗ್ ಬಟ್ ಖಾಮೋಶ್' ಪುಸ್ತಕದಲ್ಲಿ ಲೇಖಕಿ ಭಾರತಿ ಎಸ್ ಪ್ರಧಾನ್ ಬರೆದಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಮದುವೆಯ ಬಳಿಕ ಇಬ್ಬರು ಕೆಲ ಕಾಲ ಒಟ್ಟಿಗೆ ಇದ್ದರು ಎಂದು ಹೇಳಲಾಗುತ್ತಿದ್ದರೂ ನಂತರ ಸಂಬಂಧ ದೂರವಾಯಿತು.

46
ಪಾಕ್​ ಕ್ರಿಕೆಟಿಗನ ಜೊತೆ ಮದುವೆ

ಶತ್ರುಘ್ನ ಸಿನ್ಹಾ ಅವರ ಜೊತೆಯ ಸಂಬಂಧ ಕಡಿದ ನಂತರ ರೀನಾ ರಾಯ್ ಅವರು ಮೊಹ್ಸಿನ್ ಖಾನ್ ಅವರನ್ನು ಮದುವೆಯಾದರು. ಮದುವೆಯಾಗುತ್ತಿದ್ದಂತೆಯೇ ಸಿನಿಮಾ ಇಂಡಸ್ಟ್ರಿಗೆ ಗುಡ್​ಬೈ ಹೇಳಿದರು. ಆದರೆ ನಟಿಯ ಬಾಳಲ್ಲಿ ಮುಂದೆ ಆದದ್ದೆಲ್ಲವೂ ದುರಂತವೇ. ಈ ಬಗ್ಗೆ ಖುದ್ದು ರೀನಾ ಇ ಟೈಮ್ಸ್​ ಜೊತೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದರು. ಈಚೆಗಷ್ಟೇ ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ, ಈ ಬಗ್ಗೆ ಮಾತನಾಡಿರುವುದು ವೈರಲ್​ ಆಗಿದೆ.

56
ಇಂಡಸ್ಟ್ರಿಯಿಂದ ದೂರ

1983 ರಲ್ಲಿ ಮೊಯ್ಸನ್​ ಅವರನ್ನು ಮದುವೆಯಾದ ಮೇಲೆ ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಹೋಗಬೇಕಾಯಿತು. ಆದರೆ ಗಂಡನ ಮನೆಯ ಜೀವನ ಶೈಲಿ ಹೊಂದಿಕೊಳ್ಳಲು ಆಗಲೇ ಇಲ್ಲ. ಆದ್ದರಿಂದ 1992 ರಲ್ಲಿ ಅವರು ಭಾರತಕ್ಕೆ ಮರಳಿದರು. ಸಾಲದು ಎಂಬುದಕ್ಕೆ ಮೊಹ್ಸಿನ್ ಲಂಡನ್‌ಗೆ (London) ತೆರಳಲು ಮತ್ತು ಬ್ರಿಟಿಷ್ ಪೌರತ್ವವನ್ನು ತೆಗೆದುಕೊಳ್ಳಲು ಬಯಸಿದ್ದರು. ಇದಕ್ಕೆ ಕೂಡ ರೀನಾ ಅವರ ಒಪ್ಪಿಗೆ ಇರಲಿಲ್ಲ. ಹೀಗೆ ಒಂದೆಡೆ ಮುಸ್ಲಿಂ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಆಗದೇ, ಬ್ರಿಟಿಷ್​ ಪೌರತ್ವಕ್ಕೆ (British citizenship) ಒಗ್ಗಿಕೊಳ್ಳಲು ಆಗದೇ ದಂಪತಿ ನಡುವೆ ಬಿರುಕು ಮೂಡಿತು. ಇದು ದೊಡ್ಡದಾಗುತ್ತಾ ಸಾಗಿತು. ಈ ನಡುವೆಯೆ ಅವರಿಗೆ ಹೆಣ್ಣು ಮಗು ಹುಟ್ಟಿತು. ದಂಪತಿಯ ನಡುವೆ ಬಿರುಕು ಹೆಚ್ಚಿದಂತೆ ಮೊಹ್ಸಿನ್ ಮಗಳನ್ನು ಕರೆದುಕೊಂಡು ಲಂಡನ್​ಗೆ ಹೋಗಿಯೇ ಬಿಟ್ಟರು. ಮಗಳನ್ನು ಬಿಡಲು ಸಾಧ್ಯವಾಗದ ರೀನಾ, ಅನ್ಯ ಮಾರ್ಗ ಕಾಣದೇ ಲಂಡನ್​ಗೆ ಹೋದರು.

66
ಸಂಸಾರದಲ್ಲಿ ಬಿರುಕು

ಆದರೆ ಅಲ್ಲಿಯೂ ಎಲ್ಲ ಸುಲಭವಾಗಲಿಲ್ಲ. ಮಗಳ ಹೆಸರನ್ನು ಜನ್ನತ್​ನಿಂದ ಸನಮ್​ (Sanam) ಎಂದು ಬದಲಾಯಿಸಲಾಯಿತು. ತಮ್ಮ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸುತ್ತಿದ್ದ ಗಂಡನಿಂದ ಮಾನಸಿಕ ಹಿಂಸೆ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿರುವ ರೀನಾ ರಾಯ್​, ಭಾರತಕ್ಕೆ ವಾಪಸಾಗಿಬಿಟ್ಟರು. ಆದರೆ ಗಂಡ ಮಗಳನ್ನು ಬಿಟ್ಟುಕೊಡಲಿಲ್ಲ. ನಂತರ ತಾವು ಮಗಳ ಕಸ್ಟಡಿ (Custody) ಪಡೆಯಲು ಹೋರಾಟ ಹೈರಾಣಾಗಿ ಹೋದರು. ಕೊನೆಗೂ ಅವರಿಗೆ ಮಗಳ ಕಸ್ಟಡಿ ಸಿಕ್ಕಿತು ಎಂದು ರೀನಾ ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories