ಇನ್ನೂರು ಜನರ ಮುಂದೆ ಮೊದಲ ಕಿಸ್ ಮಾಡಿದ್ದ ರಶ್ಮಿಕಾ.. ಆ 'Kiss' ವೈರಲ್ ಆಗಿತ್ತು; ಈಗ ವಿಜಯ್ ಜೊತೆ ಮದುವೆ!

Published : Feb 25, 2026, 04:40 PM IST

"ನನಗೆ ಕಿಸ್ ಎನ್ನುವುದು ಅತ್ಯಂತ ವೈಯಕ್ತಿಕ ಮತ್ತು ಭಾವನಾತ್ಮಕ ವಿಷಯ. ಆದರೆ ಆ ದೃಶ್ಯವನ್ನು ಚಿತ್ರೀಕರಿಸುವಾಗ ಅಲ್ಲಿ ಸುಮಾರು 200 ಜನರು ನಮ್ಮನ್ನೇ ನೋಡುತ್ತಿದ್ದರು! ಅಷ್ಟು ಜನರ ಮುಂದೆ ಅಂತಹ ದೃಶ್ಯ ಮಾಡುವುದು ನನಗೆ ತುಂಬಾ ಕಷ್ಟವಾಗಿತ್ತು ಮತ್ತು ಸಂಕೋಚ ತಂದಿತ್ತು" 

PREV
18

ರಾಜಸ್ಥಾನದ ಉದಯಪುರದ ಅರಾವಳಿ ಬೆಟ್ಟಗಳ ಮಡಲಲ್ಲಿ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ (Rashmika Mandanna) ಮತ್ತು 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Devearakonda) ಅವರ ವಿವಾಹ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಫೆಬ್ರವರಿ 26, 2026 ರಂದು ಈ ಜೋಡಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

28

ಅಭಿಮಾನಿಗಳು ಪ್ರೀತಿಯಿಂದ 'ವಿರೋಶ್' (Virosh) ಎಂದು ಕರೆಯುವ ಈ ಜೋಡಿಯ ಮದುವೆಯ ಸಂಭ್ರಮದ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಹಳೆಯ ಸಂದರ್ಶನವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ರಶ್ಮಿಕಾ ತಮ್ಮ ಮೊದಲ 'ಆನ್-ಸ್ಕ್ರೀನ್ ಕಿಸ್' ಅನುಭವವನ್ನು ಹಂಚಿಕೊಂಡಿದ್ದಾರೆ!

38

200 ಜನರ ಮುಂದೆ ಆ ದೃಶ್ಯ ಮಾಡುವುದು ಸುಲಭವಲ್ಲ!

2018ರಲ್ಲಿ ತೆರೆಕಂಡ 'ಗೀತಾ ಗೋವಿಂದಂ' ಸಿನಿಮಾ ಈ ಜೋಡಿಯ ಕೆಮಿಸ್ಟ್ರಿಗೆ ನಾಂದಿ ಹಾಡಿತ್ತು. ಆ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ನಡುವೆ ಒಂದು ಚುಂಬನದ ದೃಶ್ಯವಿತ್ತು.

48

ಈ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ, "ನನಗೆ ಕಿಸ್ ಎನ್ನುವುದು ಅತ್ಯಂತ ವೈಯಕ್ತಿಕ ಮತ್ತು ಭಾವನಾತ್ಮಕ ವಿಷಯ. ಆದರೆ ಆ ದೃಶ್ಯವನ್ನು ಚಿತ್ರೀಕರಿಸುವಾಗ ಅಲ್ಲಿ ಸುಮಾರು 200 ಜನರು ನಮ್ಮನ್ನೇ ನೋಡುತ್ತಿದ್ದರು! ಅಷ್ಟು ಜನರ ಮುಂದೆ ಅಂತಹ ದೃಶ್ಯ ಮಾಡುವುದು ನನಗೆ ತುಂಬಾ ಕಷ್ಟವಾಗಿತ್ತು ಮತ್ತು ಸಂಕೋಚ ತಂದಿತ್ತು" ಎಂದು ಹೇಳಿಕೊಂಡಿದ್ದರು.

58

ವಿಶೇಷವೆಂದರೆ, ಆ ಸಮಯದಲ್ಲಿ ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅನುಭವಿಸುತ್ತಿದ್ದ ಅದೇ ಮುಜುಗರವನ್ನು ಅನುಭವಿಸುತ್ತಿದ್ದರಂತೆ. ಆದರೆ ಇಬ್ಬರೂ ವೃತ್ತಿಪರ ನಟರಾಗಿ ಕಥೆಯ ಬೇಡಿಕೆಗೆ ತಕ್ಕಂತೆ ಆ ದೃಶ್ಯವನ್ನು ಪೂರೈಸಿದ್ದರು.

68

ಆ ಒಂದು ದೃಶ್ಯವೇ ಇಂದು ಅವರಿಬ್ಬರನ್ನೂ ರಿಯಲ್ ಲೈಫ್ ಜೋಡಿಯನ್ನಾಗಿ ಮಾಡಿದೆ ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ 3 ರಂದು ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.

78

ಐಷಾರಾಮಿ ಕೋಟೆಯಲ್ಲಿ ಅದ್ಧೂರಿ ವಿವಾಹ

ಈ ಜೋಡಿಯ ಮದುವೆಗಾಗಿ ಉದಯಪುರದಿಂದ 25 ಕಿ.ಮೀ ದೂರದಲ್ಲಿರುವ ಅತ್ಯಂತ ಐಷಾರಾಮಿ 'ಐಟಿಸಿ ಮೆಮೆಂಟೋಸ್' (ITC Mementos) ಹೋಟೆಲ್ ಅನ್ನು ಆಯ್ದುಕೊಳ್ಳಲಾಗಿದೆ. ಈ ಹೋಟೆಲ್‌ನಲ್ಲಿ 117 ಖಾಸಗಿ ವಿಲ್ಲಾಗಳಿದ್ದು, ಇಲ್ಲಿ ನದಿ ಮತ್ತು ಸಣ್ಣ ಕೆರೆ ಕೂಡ ಇದೆ. ಪಾಪರಾಜಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಇಲ್ಲಿ ಖಾಸಗಿ ಹೆಲಿಪ್ಯಾಡ್ ವ್ಯವಸ್ಥೆ ಕೂಡ ಇದೆ.

88

ಈ ಮದುವೆಗೆ ಕೇವಲ 100 ಜನ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಚಿತ್ರರಂಗದ ಕೆಲವೇ ಕೆಲವು ನಿರ್ದೇಶಕರು ಮತ್ತು ತೆಲಂಗಾಣದ ಪ್ರಮುಖ ರಾಜಕಾರಣಿಗಳು ಈ ಶುಭ ಕಾರ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ತಮ್ಮ ಮದುವೆಯನ್ನು 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಸಿರುವ ಈ ಜೋಡಿ, ಅಭಿಮಾನಿಗಳ ಪ್ರೀತಿಯಿಂದಲೇ ನಾವು ಒಂದಾಗಿದ್ದೇವೆ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ಈಗ ನಿಜ ಜೀವನದಲ್ಲಿ ಒಂದಾಗುತ್ತಿರುವುದು ದಕ್ಷಿಣ ಭಾರತದ ಚಿತ್ರರಂಗದ ಈ ವರ್ಷದ ಅತಿದೊಡ್ಡ ಸುದ್ದಿಯಾಗಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಇವರ ರಿಸೆಪ್ಷನ್‌ಗೆ ಇಡೀ ಚಿತ್ರರಂಗವೇ ಹರಿದುಬರುವ ನಿರೀಕ್ಷೆಯಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories