ಕೊರೋನಾ ವೈರಸ್ ಇಡೀ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಈ ಅಪಾಯಕಾರಿ ವೈರಸ್‌ನಿಂದಾಗಿ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಬಾಲಿವುಡ್ ನಟನಟಿಯರು ಕೂಡ ತಮ್ಮನ್ನು ಮನೆಗಳಿಗೆ ಕೂಡಿ ಹಾಕಿಕೊಂಡು ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಂಚೆ ರವೀನಾ, ಆಮೇಲೆ ಕರೀನಾ, ನಂತರ ಕತ್ರೀನಾ ಅಂತಾನೆ ಈ ಬಾಲಿವುಡ್ ನಟಿಯರು ಟ್ರಾಲ್ ಆಗುತ್ತಿರುವ ಈ ಟೈಮಲ್ಲಿ ರವೀನಾ ಟಂಡನ್‌ರ ಮೊಮ್ಮಗನೊಂದಿಗೆ ಆಟವಾಡುತ್ತಿರುವ ಒಂದು ವೀಡಿಯೊ ಹೊರಬಂದಿದೆ. ರವೀನಾ ದತ್ತು ಪುತ್ರಿ ಛಾಯಾ ಸೆಪ್ಟೆಂಬರ್ 2019ರಲ್ಲಿ ಮಗನಿಗೆ ಜನ್ಮ ನೀಡಿದರು.