ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ಸಂಸದ್ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ದಂಪತಿಗಳ ಬ್ಯೂಟಿಫುಲ್ ಫೋಟೋಗಳು ಇಲ್ಲಿವೆ.
ಸ್ವತಃ ನಟಿ ಪರಿಣಿತಿ ಚೋಪ್ರಾ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ದಿನಕ್ಕಾಗಿ ಕಾಯುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ
ಊಟದ ಟೇಬಲ್ ಬಳಿ ಆರಂಭವಾದ ಮೊದಲ ಹರಟೆಯಿಂದಲೇ ನಮ್ಮಿಬ್ಬರ ಹೃದಯಗಳ ಪರಸ್ಪರ ಪರಿಚಯವಾಗಿತ್ತು. ಬಹಳ ಸಮಯದಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ.
ಕೊನೆಗೂ ಮಿಸ್ಟರ್ & ಮಿಸಸ್ ಆಗಲು ಪುಣ್ಯ ಮಾಡಿದ್ದೇವೆ. ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವಿಲ್ಲ, ನಮ್ಮ ಶಾಶ್ವತವಾದ ಈ ಪ್ರಯಾಣ ಈಗ ಆರಂಭವಾಗುತ್ತಿದೆ ಎಂದು ಪರಿಣಿತಿ ಚೋಪ್ರಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪರಿಣಿತಿ ಸೋದರ ಸಂಬಂಧಿ ಬಾಲಿವುಡ್ ಹಾಲಿವುಡ್‌ನಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದು, ನವ ಜೋಡಿಗೆ ಶುಭ ಹಾರೈಸಿದ್ದಾರೆ. ನನ್ನ ಆಶೀರ್ವಾದ ಸದಾ ಇರುತ್ತದೆ ಎಂದು ಪಿಗ್ಗಿ ಕಾಮೆಂಟ್ ಮಾಡಿದ್ದಾರೆ
ಪ್ರಿಯಾಂಕಾ ಚೋಪ್ರಾ ಸೋದರಿಯ ಈ ಮದುವೆಗೆ ಪುತ್ರಿ ಮಾಲ್ತಿ ಜೊತೆ ಬಂದೇ ಬರುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಅವರು ಮದುವೆಗೆ ಗೈರಾಗಿದ್ದಾರೆ.
ಈ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ, ನಟ ಆಯುಷ್ಮಾನ್ ಖುರಾನಾ, ವರುಣ್ ಧವನ್ ಹರ್ಭಜನ್ ಸಿಂಗ್ ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶುಭಹಾರೈಸಿದ್ದಾರೆ. ರಾಜಸ್ಥಾನದ ಉದಯ್‌ಪುರ್‌ನಲ್ಲಿರುವ ಲೀಲಾ ಪ್ಯಾಲೇಸ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನಡೆಯುತ್ತಿದೆ.