Actress Bhagyashree: ಅಮ್ರಾವ್ರ ಗಂಡ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಇನ್‌ಸ್ಟಾಗ್ರಾಮ್ ರೀಲ್ಸ್‌ಗೋಸ್ಕರ ಲಸ್ಸಿ ತಿಂದ ಹಾಗೆ ನಾಟಕ ಮಾಡಿ, ಆಮೇಲೆ ಸಿಕ್ಕಾಪಟ್ಟೆ ಸಕ್ಕರೆ ಎಂದು ರಿಜೆಕ್ಟ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಾರಣಾಸಿಯಲ್ಲಿ ಭಾಗ್ಯಶ್ರೀ ಅವರು ಲಸ್ಸಿಯನ್ನು ಕುಡಿಯುತ್ತಿರುವ ಪೋಸ್ ನೀಡಿದ್ದಾರೆ. ಈ ಲಸ್ಸಿ ಕುಡಿದರೆ ಪೈಲ್ವಾನ್ ತರ ಆಗ್ತೀರಿ ಎಂದು ಅವರು ಹೇಳಿದ್ದಾರೆ. ಇದನ್ನು ಓರ್ವ ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಾರಣಾಸಿಯಲ್ಲಿ ಲಸ್ಸಿ ತುಂಬ ಫೇಮಸ್. ಕೆಲವು ಸೆಲೆಬ್ರಿಟಿಗಳು ದೇಶ-ವಿದೇಶದಲ್ಲಿ ಟ್ರಾವೆಲ್ ಮಾಡುತ್ತ, ಫುಡ್ ಪ್ರಮೋಶನ್ ಮಾಡ್ತಾರೆ. ಅಷ್ಟೇ ಅಲ್ಲದೆ ಲೋಕಲ್ ಏರಿಯಾಗಳಲ್ಲಿ ಕೂಡ ತಿರುಗಾಡಿ ಪೋಸ್ ಕೊಟ್ಟು, ತಾವು ಸಿಂಪಲ್ ಎಂದು ಬಿಂಬಿಸ್ತಾರೆ.
24
ವ್ಯಾಪಾರಿ ಮುಖಕ್ಕೆ ಹೊಡೆದಂತೆ ರಿಜೆಕ್ಟ್ ಮಾಡಿದ ನಟಿ
ಭಾಗ್ಯಶ್ರೀ ಕೂಡ ಶೂಟ್ ಆಗುವವರೆಗೆ ಲಸ್ಸಿಯನ್ನು ಹೊಗಳಿ, ಆಮೇಲೆ ಸಕ್ಕರೆ, ಕೊಬ್ಬಿದೆ ಎಂದು ಹೇಳಿ ರಿಜೆಕ್ಟ್ ಮಾಡಿದ್ದಾರೆ. ಜನರನ್ನು ನಂಬಿಸಲು ಅಥವಾ ಅವರ ಗಮನಸೆಳೆಯಲು ಪ್ರಮೋಟ್ ಮಾಡುವ ನಾಟಕ ಮಾಡಿದ ಭಾಗ್ಯಶ್ರೀ, ಆಮೇಲೆ ಇದನ್ನು ತಿನ್ನಲೇ ಇಲ್ಲ. ವ್ಯಾಪಾರಿಯ ಮುಖಕ್ಕೆ ಹೊಡೆದಂತೆ ಹೇಳಿ ಬಂದಿದ್ದಾರೆ.
34
ಪ್ರಮೋಟ್ ಮಾಡ್ತಾರೆ!
ಭಾಗ್ಯಶ್ರೀ ರೀತಿಯೇ ಆಲಿಯಾ ಭಟ್ ಸೇರಿದಂತೆ ಇನ್ನೂ ಅನೇಕರು ಕೂಲ್ ಡ್ರಿಂಕ್ಸ್, ತಿಂಡಿಗಳನ್ನು ಪ್ರಮೋಟ್ ಮಾಡ್ತಾರೆ. ಆದರೆ ಅವರು ನಿಜ ಜೀವನದಲ್ಲಿ ತಿನ್ನುವುದೇ ಇಲ್ಲ. ಸುಮ್ಮನೆ ಪ್ರಮೋಶನ್‌ನಲ್ಲಿ ಯಾವುದ್ಯಾವುದೋ ಆಹಾರವನ್ನು ಪ್ರಮೋಟ್ ಮಾಡಿ ಹಣ ಮಾಡುತ್ತಾರೆ. ಈ ವಿಡಿಯೋಗಳು ಕೂಡ ವೈರಲ್ ಆಗುತ್ತಿರುತ್ತವೆ.
ಇನ್ನೂ ಕೆಲ ಸೆಲೆಬ್ರಿಟಿಗಳು ತಾವು ಬಳಕೆ ಮಾಡದ ವಸ್ತುಗಳನ್ನು ಅಥವಾ ಆಹಾರವನ್ನು ಪ್ರಮೋಟ್ ಮಾಡೋದಿಲ್ಲ. ತಂಬಾಕು, ಗುಟ್ಕಾಗಳನ್ನು ಅನೇಕ ಸೆಲೆಬ್ರಿಟಿಗಳು ಪ್ರಮೋಟ್ ಮಾಡೋದಿಲ್ಲ. ನಟ ಅಕ್ಷಯ್ ಕುಮಾರ್ ಅವರಂತೆ ಕೆಲವರು ಪ್ರಮೋಟ್ ಮಾಡಿ, ಜನರಿಂದ ನಿಂದನೆ ಮಾತು ಕೇಳಿದ್ಮೇಲೆ ಕ್ಷಮೆ ಕೇಳಿದ್ದೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.