ನಗ್ನ ಫೋಟೋಶೂಟ್ ಮೂಲಕ ಹಲ್ ಚಲ್ ಸೃಷ್ಟಿಸಿ, ವೈರಲ್ ಆಗ್ತಿದ್ದಂಗೆ ಡಿಲಿಟ್ ಮಾಡಿದ ಬಾಲಿವುಡ್ ನಟಿ

First Published | Aug 10, 2024, 6:08 PM IST

ಬಾಲಿವುಡ್ ನಟಿ ನಿಕಿತಾ ಘಾಗ್ ತಮ್ಮ ನಗ್ನ ಫೋಟೋ ಶೂಟ್ ಮೂಲಕ ಭಾರಿ ಸದ್ದು ಮಾಡ್ತಿದ್ದಾರೆ. ಇವರ ಬೋಲ್ಡ್ ಫೋಟೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. 
 

ಬಾಲಿವುಡ್ ಸೆಲೆಬ್ರಿಟಿಗಳ ಬೋಲ್ಡ್ ಫೋಟೋ ಶೂಟ್ ಹೊಸದೇನಲ್ಲ,  ನ್ಯೂಡ್ ಫೋಟೋ ಶೂಟ್ (nide photoshoot) ಮಾಡೋದ್ರಲ್ಲೂ ಹಿಂದೆ ಬಿದ್ದಿಲ್ಲ, ಸ್ವಲ್ಪ ಸಮಯದ ಹಿಂದೆ ರಣ್ವೀರ್ ಸಿಂಗ್ ಪೂರ್ತಿಯಾಗಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ನಟಿಯ ಫೋಟೋ ವೈರಲ್ ಆಗುತ್ತಿದೆ. 
 

ಬಾಲಿವುಡ್ ನಟಿ ನಿಖಿತಾ ಘಾಗ್ (Bollywood actress Nikkita Ghag) ತಮ್ಮ ನಗ್ನ ಫೋಟೋ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ. ಅರ್ಧ ದೇಹವನ್ನ ಪೂರ್ತಿಯಾಗಿ ತೆರೆದಿಟ್ಟು, ಕೈಗಳಿಂದ ಖಾಸಗಿ ಅಂಗಗಳನ್ನ ಮುಚ್ಚಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅದು ಭಾರಿ ವೈರಲ್ ಆಗಿತ್ತು. 
 

Tap to resize

ತಮ್ಮ ನಗ್ನ ಫೋಟೋ ಶೂಟ್‌ನಿಂದ ನನಗೆ ಖುಷಿಯಾಗಿದೆ ಎಂದು ಹೇಳಿಕೊಂಡಿರುವ ನಟಿಯ ಫೋಟೊ ಎಲ್ಲಾ ಕಡೆ  ವೈರಲ್ ಆಗಿ, ಟೀಕೆಗಳು ಕೇಳಿ ಬರುತ್ತಿದ್ದಂತೆ ನಟಿ ತಮ್ಮ ಸೋಶಿಯಲ್ ಮೀಡಿಯಾದಿಂದ (social media) ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ. 
 

ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ಮತ್ತು ವೆಬ್ ಸೀರೀಸ್ ಗಳಲ್ಲಿ (web series) ನಟಿಸಿರುವ ನಿಖಿತಾ, ತಮ್ಮ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಿದ್ದರು. ಇದೀಗ ಒಂದು ಹೆಜ್ಜೆ ಹೆಚ್ಚೇ ಎನ್ನುವಷ್ಟು ನಗ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. 
 

ನಿಖಿತಾ ಅರ್ಧ ದೇಹಕ್ಕೆ ಬೀಜ್ ಟ್ರೆಂಜ್ ಕೋಟ್‌ ಧರಿಸಿ ನಗ್ನವಾಗಿ ಪೋಸ್ ಕೊಟ್ಟಿದ್ದಾರೆ. ದೇಹದ ಬಲಭಾಗ ಮೇಲಿಂದ ಕೆಳಕ್ಕೆ ಪೂರ್ತಿ ನಗ್ನವಾಗಿದೆ. ಒಂದು ಕೈಯಿಂದ ಅವರು ತಮ್ಮ ಎದೆ ಭಾಗ ಮುಚ್ಚಿಕೊಂಡಿದ್ದು, ಮತ್ತೊಂದು ಕೈಯಿಂದ ಕೆಳ ಭಾಗವನ್ನ ಮುಚ್ಚಿಕೊಂಡಿದ್ದಾರೆ. 
 

ನಿಖಿತಾ ಫೋಟೊ ಸಖತ್ ಟ್ರೋಲ್ ಆಗುತ್ತಿದ್ದು, ಇಷ್ಟೊಂದು ಬೋಲ್ಡ್ ಆಗಿ ಫೋಟೋ ತೆಗೆಸಿಕೊಳ್ಳೋದು ಬೇಕಿತ್ತಾ? ಇನ್ನು ಏನೇನು ಅವತಾರವನ್ನ ನೋಡಬೇಕು. ಎಂದೆಲ್ಲಾ ಕಾಮೆಂಟ್ ಮೂಲಕ ಟೀಕಿಸಿದ್ದಾರೆ ಮಂದಿ. 
 

ನಿಖಿತಾ ಇಲ್ಲಿವರೆಗೆ 'ಬೆಕಾಬೂ 3, ಫುಹ್ ಸೆ ಫ್ಯಾಂಟಸಿ, ನಶಿಲಾ ಹುಸ್ನೆ ಸೇರಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೆಬ್ ಸಿರೀಸ್‌ ಗಳಲ್ಲೂ ನಟಿಸಿದ್ದಾರೆ.  ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಸುಮಾರು 1 ಮಿಲಿಯನ್ ಫಾಲೋವರ್ಸ್ ಕೂಡ ಇದ್ದಾರೆ. 
 

Latest Videos

click me!