ಲವ್, ದೋಖಾ ಎನ್ನೋರ ಮಧ್ಯೆ ಪ್ರೀತಿಸಿದವಳ ಕೈ ಹಿಡಿದು, ಅವಳ ನೆನಪಲ್ಲೇ ಕೊನೆಯುಸಿರೆಳೆದ ಬಾಲಿವುಡ್ ಸ್ಟಾರ್ ನಟ!

First Published | Aug 10, 2024, 2:08 PM IST

ಬಾಲಿವುಡ್ ಸ್ಟಾರ್ ನಟರಾದ ಶಶಿ ಕಪೂರ್ ಲವ್ ಸ್ಟೋರಿ ಯಾವುದೋ ಬಾಲಿವುಡ್ ಸಿನಿಮಾ ಕಥೆಗೆ ಕಮ್ಮಿ ಇಲ್ಲ. ಒಬ್ಬಳನ್ನ ಪ್ರೀತಿಸಿ, ಆಕೆಯನ್ನೇ ಮದ್ವೆಯಾಗಿ, ಆಕೆಯ ನೆನಪಲ್ಲಿ ಜೀವನ ಕಳೆದ ನಟ ಶಶಿ ಕಪೂರ್. 
 

ಬಾಲಿವುಡ್ ಸ್ಟಾರ್ಸ್ ಬಗ್ಗೆ ಹೇಳೋದಾದ್ರೆ, ಎಲ್ಲರ ಜೀವನದಲ್ಲೂ ಎರಡು, ಮೂರು ರಿಲೇಶನ್‌ಶಿಪ್ ಬಗ್ಗೆ ನಾವು ಕೇಳಿದ್ದೀವಿ. ಒಬ್ರ ಜೊತೆ ಲವ್, ಮತ್ತೊಬ್ಬರ ಜೊತೆ ಮದುವೆಯಾಗೋ ಅದೆಷ್ಟೋ ಸೆಲೆಬ್ರಿಟಿಗಳಿದ್ದಾರೆ. ಆದ್ರೆ ಒಬ್ಬಳನ್ನೇ ಪ್ರೀತಿ, ಅವಳನ್ನೆ ಮದುವೆಯಾಗಿ, ಆಕೆ ಸಾವನ್ನಪ್ಪಿದ ನಂತರವೂ ಬೇರೆ ಮದುವೆ ಬಗ್ಗೆ ಯೋಚಿಸದೇ ಆಕೆಯ ನೆನಪಲ್ಲೇ ಕೊನೆಯ ಉಸಿರಿನವರೆಗೂ ಇದ್ದ ಬಾಲಿವುಡ್ ನ ಸ್ಟಾರ್ (bollywood actor)  ನಟ ಯಾರು ಗೊತ್ತಾ? 
 

ಬೇರೆ ಯಾರೂ ಅಲ್ಲ ಶಶಿ ಕಪೂರ್ (Shashi Kapoor). ಬಾಲಿವುಡ್ ನ ಖ್ಯಾತ ನಟ ಪೃಥ್ವಿರಾಜ್ ಕಪೂರ್ ಅವರ ಪುತ್ರ. ಇವರ ಲವ್ ಸ್ಟೋರಿ ಬೆಸ್ಟ್ ಲವ್ ಸ್ಟೋರಿಗೆ ಉದಾಹರಣೆ. ಯಾವ ಹುಡುಗಿಯನ್ನು ಮೊದಲ ನೋಟದಲ್ಲೇ ಇಷ್ಟಪಟ್ಟರೋ, ಅವರನ್ನೇ ಮದುವೆಯಾಗಿ ಅವರ ಜೊತೆಗೆ ಸಂಸಾರ ನಟಿಸಿ, ಆಕೆ ಸಾವನ್ನಪ್ಪಿದ ನಂತರವೂ ಅವರ ನೆನಪಲ್ಲೇ ಉಳಿದ ನಟ ಶಶಿ ಕಪೂರ್.
 

Tap to resize

ಶಶಿ ಕಪೂರ್ ಮತ್ತು ಜೆನ್ನಿಫರ್ ಕೆಂಡಾಲ್ (Jennifer Kendal) ಅವರ ಪ್ರೇಮಕಥೆ 1956 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರು ರಂಗಭೂಮಿಯಲ್ಲಿ ಕೆಲಸ ಮಾಡುವಾಗ ಒಬ್ಬರನ್ನೊಬ್ಬರು ಭೇಟಿಯಾದರು. ಆವಾಗ ಶಶಿ ಕಪೂರ್ ಗೆ ಕೇವಲ 18 ವರ್ಷ. ಜೆನ್ನಿಫರ್ ತಮ್ಮ ತಂದೆಯ ರಂಗಭೂಮಿ ಗುಂಪಿನಲ್ಲಿ ಆಗಲೇ ಒಳ್ಳೆಯ ಹೆಸರು ಮಾಡಿದ್ದರು. 22 ವರ್ಷ ವಯಸ್ಸಾಗಿತ್ತು. ಅವರ ವಯಸ್ಸಿನ ಅಂತರ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊರತಾಗಿಯೂ, ಶಶಿ ತಕ್ಷಣ ಜೆನ್ನಿಫರ್ ಕಡೆಗೆ ಆಕರ್ಷಿತರಾಗಿ. ಮದುವೆಯಾಗಲು ಬಯಸಿದ್ದರು. 
 

ಜೆನ್ನಿಫರ್ ಲಂಡನ್ ನವರಾಗಿರೋದ್ರಿಂದ ಎರಡೂ ಕಡೆಯ ಕುಟುಂಬಗಳು ಇವರ ಪ್ರೀತಿಯನ್ನು ಬೆಂಬಲಿಸಲಿಲ್ಲ. ಶಶಿಯ ಪೋಷಕರಿಗೆ ಅವರು ವಿದೇಶಿ ಮಹಿಳೆಯನ್ನು ಮದುವೆಯಾಗೋದು ಇಷ್ಟವಿರಲಿಲ್ಲ, ಜೆನ್ನಿಫರ್ ತಂದೆಯೂ ಈ ಸಂಬಂಧವನ್ನು ಒಪ್ಪಲಿಲ್ಲ. ಆದರೆ ದಂಪತಿ ಒಟ್ಟಿಗಿರಲು ನಿರ್ಧರಿಸಿ, ಹೊಸ ಜೀವನ ಪ್ರಾರಂಭಿಸಿದರು. ಜೆನ್ನಿಫರ್ ಅವರ ತಂದೆಯ ನಾಟಕ ಕಂಪನಿಯನ್ನೂ  ತೊರೆದರು. ಜೊತೆಯಾಗಿಯೇ ಬಾಳಲು ನಿರ್ಧರಿಸಿದಾಗ ಎದುರಾದ ಆರ್ಥಿಕ ಸಮಸ್ಯೆ ಒಂದೆರಡಲ್ಲ. 

ಜೆನ್ನಿಫರ್ ತಂದೆ ಈ ಮದುವೆಯನ್ನು ವಿರೋಧಿಸಿದಾಗ, ಈ ಜೋಡಿಗೆ ಸಹಕರಿಸಿದ್ದು ಅವರ ಸಹೋದರಿ. ಶಶಿ ಕುಟುಂಬದಲ್ಲಿ, ಅವರ ಅತ್ತಿಗೆ ಗೀತಾ ಬಾಲಿ ಮತ್ತು ಸಹೋದರ ಶಮ್ಮಿ ಕಪೂರ್ (Shammi Kapoor), ಇವರ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದರು. ತಮ್ಮ ಪ್ರೀತಿಗೆ ತಾವೆಷ್ಟು ಕಮಿಟ್ ಆಗಿದ್ದೇವೆ ಅನ್ನೋದನ್ನ ಸಾಬೀತುಪಡಿಸಿದ ಎರಡು ವರ್ಷಗಳ ನಂತರ, ಶಶಿ ಮತ್ತು ಜೆನ್ನಿಫರ್ 1958 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಾಲಿವುಡ್‌ನಲ್ಲಿ ತಮ್ಮ ನಟನಾ ವೃತ್ತಿಜೀವನವನ್ನು ಕಂಡುಕೊಳ್ಳಾಲು ಶಶಿ ಹೆಣಗಾಡುತ್ತಿದ್ದರಿಂದ ಅವರ ವಿವಾಹದ ಆರಂಭಿಕ ವರ್ಷಗಳು ತುಂಬಾನೇ ಸವಾಲು ಎದುರಿಸಬೇಕಾಗಿ ಬಂತು. ಅವರು ಆರ್ಥಿಕ ತೊಂದರೆಗಳನ್ನು ಎದುರಿಸಿದರು, ತಮ್ಮ ಕಾರು ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಮಾರ ಬೇಕಾಯಿತು. ಆದರೆ ಪರಸ್ಪರರ ಮೇಲಿನ ಪ್ರೀತಿ ಮಾತ್ರ ಬಲವಾಗಿ ಉಳಿಯಿತು. 

1965ರಲ್ಲಿ ತೆರೆಕಂಡ 'ಜಬ್ ಜಬ್ ಫೂಲ್ ಖಿಲೆ' ಚಿತ್ರದ ಮೂಲಕ ಶಶಿ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತು. ಅವರ ಯಶಸ್ಸು ಬೆಳೆದಂತೆ, ಶಶಿ ಅವರ ತಂದೆ ಪೃಥ್ವಿರಾಜ್ ಕಪೂರ್ ಅವರನ್ನು ಗೌರವಿಸಲು ಮತ್ತು ಅವರ ರಂಗಭೂಮಿ ಪರಂಪರೆಯನ್ನು ಉಳಿಸಿಕೊಳ್ಳಲು ಶಶಿ ಮತ್ತು ಜೆನ್ನಿಫರ್ ದಂಪತಿ 1978 ರಲ್ಲಿ ಪೃಥ್ವಿ ಥಿಯೇಟರ್ ಸ್ಥಾಪಿಸಿದರು.
 

ದುರದೃಷ್ಟವಶಾತ್, ಇವರ ಪ್ರೀತಿಗೆ ಹೆಚ್ಚು ಬಾಳ್ವಿಕೆ ಇರಲಿಲ್ಲ. ಜೆನ್ನಿಫರ್ 1980 ರ ದಶಕದ ಆರಂಭದಲ್ಲಿಯೇ ಕರುಳಿನ ಕ್ಯಾನ್ಸರ್‌ನಿಂದ ಶುರುವಾಗಿ, 1984 ರಲ್ಲಿ ನಿಧನರಾದರು. ಜೆನ್ನಿಫರ್ ಸಾವು ಶಶಿ ಕಪೂರ್‌ಗೆ ದೊಡ್ಡ ಹೊಡೆತವಾಗಿತ್ತು, ತಮ್ಮ ಪ್ರೀತಿಯನ್ನು ಕಳೆದುಕೊಂಡ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡರು.
 

ನಂತರ ಶಶಿ ತನ್ನನ್ನು ತಾನು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ, ನೋವನ್ನು ಮರೆಯಲು ಪ್ರಯತ್ನಿಸಿದರು. ಆದರೆ ಕೊನೆಗೆ ಜೆನ್ನಿಫರ್ ಅನುಪಸ್ಥಿತಿಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದ ಶಶಿ ಕಪೂರ್ ಸಾರ್ವಜನಿಕ ಜೀವನದಿಂದ ಹಿಂದೆ ಸರಿದರು. ಜೆನ್ನಿಫರ್‌ನ ನೆನಪಲ್ಲೇ ಜೀವನ ಕಳೆಯೋದಾಗಿ ನಿರ್ಧರಿಸಿ, ಮರು ಮದುವೆಯಾಗದಿರಲು ಶಶಿ ನಿರ್ಧರಿಸಿದನು. ಅವರು ಎಲ್ಲಿಗೆ ಹೋಗುತ್ತಿದ್ದರೂ ಜೆನ್ನಿಫರ್ ಛಾಯಾಚಿತ್ರವನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದ್ದರು. ಸಂತೋಷ ಮತ್ತು ದುಃಖ ಎರಡರಿಂದಲೂ ತುಂಬಿರುವ ಅವರ ಪ್ರೇಮಕಥೆ (lovestory) ಬಾಲಿವುಡ್‌ನ ಅತ್ಯಂತ ಹೃದಯಸ್ಪರ್ಶಿ ಪ್ರೇಮಕಥೆಗಳಲ್ಲಿ ಒಂದಾಗಿದೆ.

Latest Videos

click me!