ಮಲೈಕಾ ಅರೋರಾ ಜಿಮ್‌ಗೆ ತೆರಳುವ ವೇಳೆ, ಇತರ ಕಾರ್ಯಕ್ರಮಕ್ಕೆ ತೆರಳವು ವೇಳೆ, ಸ್ನೇಹಿತರ ಭೇಟಿ ವೇಳೆ ಪರಿಸ್ಥಿತಿಗೆ ತಕ್ಕಂತೆ ಡ್ರೆಸ್ ಧರಿಸುತ್ತಾರೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಾಗ ಡ್ರೆಸ್ ವಿಚಾರದಲ್ಲಿ ಮಲೈಕಾ ಕಾಂಪ್ರಮೈಸ್ ಆಗಲ್ಲ. ಆದರೆ ಈ ಬಾರಿ ಮಲೈಕಾ ಅರೋರಾ ಅವಸರದಲ್ಲಿ ಎದ್ದು ಹೊರಬಂದಿದ್ದಾರೆ. ಈ ವೇಳೆ ತಾವು ಮಲಗುವ ವೇಳೆ ಧರಿಸಿದ್ದ ನೈಟ್ ಡ್ರೆಸ್ ಬದಲಾಯಿಸಲು ಸಯಮ ಸಿಕ್ಕಿಲ್ಲ, ಇಷ್ಟೇ ಅಲ್ಲ ಮೇಕ್ಅಪ್ ಮಾಡದೇ ಹೊರಗಡೆ ಕಾಣಿಸಿಕೊಂಡಿದ್ದಾರೆ.