ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್‌ ಆಗಿದ್ದೇಕೆ?

Published : May 27, 2024, 05:44 PM ISTUpdated : May 28, 2024, 07:50 PM IST

ನಟಿ ಮಾಧುರಿ ದೀಕ್ಷಿತ್ ಬೇಟಾ, ಖಳನಾಯಕ್, ಸಾಜನ್ ಸೇರಿದಂತೆ ಬಾಲಿವುಡ್‌ನ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ದಕ್ಷಿಣ ಭಾರತದ ಸಿನಿಮಾಗಳಿಗೆ ಮಾಧುರಿಯನ್ನು ಕರೆತರುವ ಯಾವ ಪ್ರಯತ್ನವೂ ಇಲ್ಲಿಯವರೆಗೂ ಫಲಿಸಿಲ್ಲ. 

PREV
112
ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್‌ ಆಗಿದ್ದೇಕೆ?

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit Nene) ಹೆಸರು ಕೇಳದವರು ತುಂಬಾ ಕಡಿಮೆ. ಶ್ರೀದೇವಿ ಬಿಟ್ಟರೆ ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಹೆಸರು ಮಾಡಿದವರಲ್ಲಿ ನಟಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. 
 

212

80-90ರ ದಶಕದಲ್ಲಿ ಮಾಧುರಿ ನಟನೆಯ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಶ್ರೀದೇವಿ ಯುಗ ಮುಗಿಯುತ್ತಿದ್ದಂತೆ ಆ ಜಾಗಕ್ಕೆ ಬಂದು ಕುಳಿತವರೇ ನಟಿ ಮಾಧುರಿ ದೀಕ್ಷಿತ್ ಎನ್ನಬಹುದು. ಹೊಸ ನೀರು ಬಂದು ಹಳೆ ನೀರು ಹರಿದು ಹೋಗಲೇಬೇಕು ಎಂಬುದು ಪ್ರಕೃತಿ ನಿಯಮ. 

312

ಅದರಂತೆ ನಟಿ ಮಾಧುರಿ ಶ್ರೀದೇವಿ ಬಳಿಕ ಹೆಚ್ಚು ಮಿಂಚಿರುವ ನಟಿ. ಇಂಥ ಮಾಧುರಿಯದು ಒಂದು ಲವ್ ಸ್ಟೋರಿಯಿದೆ. ನಟಿ ಮಾಧುರಿ ದೀಕ್ಷಿತ್ ಅವರು ಉದ್ಯಮಿ ಶ್ರೀರಾಮ್ ನೆನೆ ಎಂಬವರನ್ನು ಮದುವೆಯಾಗಿ ಒಂದು ಮಗನನ್ನೂ ಪಡೆದು ಸುಖ ದಾಂಪತ್ಯದಲ್ಲಿ ಜೀವನ ನಡೆಸುತ್ತಿರುವುದು ಗೊತ್ತೇ ಇದೆ. 

412

ಆದರೆ ಅದಕ್ಕೂ ಮೊದಲು ಮಾಧುರಿ ದೀಕ್ಷಿತ್ ಭಾರತದ ಕ್ರಿಕೆಟ್ ಆಟಗಾರ ಅಜಯ್ ಜಡೇಜಾ ಅವರನ್ನು ಪ್ರೀತಿಸಿದ್ದರು. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅಜಯ್ ಜಡೇಜಾ ಫ್ಯಾಮಿಲಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಿ ಈ ಮದುವೆಯನ್ನು ಮುರಿದುಕೊಂಡಿತು. 

512

ಹಾಗಿದ್ದರೆ, ಜಡೇಜಾ ಫ್ಯಾಮಿಲಿ ಈ ಮದುವೆ ನಡೆಯುವುದು ಬೇಡ ಎನ್ನಲು ಕಾರಣವೇನು ಗೊತ್ತೇ? ಅದು ಬೇರೇನೂ ಅಲ್ಲ, ಶ್ರೀಮಂತಿಕೆ. ಅಜಯ್ ಜಡೇಜಾ ಕುಟುಂಬ ರಾಜಮನೆತನಕ್ಕೆ ಸೇರಿದ್ದು. ಅವರ ಬಳಿ ಅದೆಷ್ಟು ಆಸ್ತಿಯಿದೆ ಎಂದರೆ ಲೆಕ್ಕ ಅವರಿಗೇ ಸಿಗುವುದು ಕಷ್ಟ. 

612

ಆದರೆ ನಟಿ ಮಾಧುರಿ ಕುಟುಂಬ ಅಂಥಹ ಶ್ರೀಮಂತರೇನೂ ಅಲ್ಲ. ಮಾಧುರಿ ದೀಕ್ಷಿತ್ ನಟಿ ಎಂಬುದನ್ನು ಬಿಟ್ಟರೆ ಶ್ರೀಮಂತಿಕೆಯಲ್ಲಿ ಅವರಿಬ್ಬರ ಕುಟುಂಬಗಳನ್ನು ಹೋಲಿಸಲೂ ಸಾಧ್ಯವಿಲ್ಲ. 

712

ಹೆಸರುವಾಸಿ ಜಡೇಜಾ ಕುಟುಂಬದ ಅಜಯ್ ಜಡೇಜಾ ಯಾವುದೇ ಕಾರಣಕ್ಕೂ ಸಾಮಾನ್ಯ ಕುಟುಂಬದ ನಟಿ ಮಾಧುರಿ ಅವರನ್ನು ಮದುವೆಯಾಗುವುದು ಬೇಡ ಎಂದು ಜಡೇಜಾ ಕುಟುಂಬ ಕಡ್ಡಿ ಮುರಿದಂತೆ ಹೇಳಿತು. 

812

ಅದನ್ನು ಕೇಳಿದ ಮಾಧುರಿ ಕುಟುಂಬ ಬಾಯಿಮುಚ್ಚಿಕೊಂಡು ಸುಮ್ಮನಾಯಿತು. ಅಜಯ್ ಜಡೇಜಾ ಸಲುವಾಗಿ ಪೀಕ್‌ನಲ್ಲಿದ್ದ ತನ್ನ ಕೆರಿಯರ್‌ ಅನ್ನು ಸಹ ಪಣಕ್ಕಿಡಲು ಮಾಧುರಿ ದೀಕ್ಷಿತ್ ನಿರ್ಧಾರ ಮಾಡಿದ್ದರು. 

912

ಆದರೆ ಅವರಿಗೆ ಜಡೇಜಾ ಕುಟುಂಬದ ಸೊಸೆಯಾಗಲು ಸಾಧ್ಯವಾಗಲೇ ಇಲ್ಲ. ಬಳಿಕ, ಅಜಯ್ ಜಡೇಜಾ ಹಾಗು ಮಾಧುರಿ ದೀಕ್ಷಿತ್ ಲವ್ ಬ್ರೇಕಪ್ ಆಯ್ತು. ನಟಿ ಮಾಧುರಿ ಶ್ರೀರಾಮ್ ನೆನೆ ಎಂಬ ಮುಂಬೈ ಮೂಲದ ಅಮೆರಿಕಾ ಉದ್ಯಮಿಯನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 
 

1012

ಅತ್ತ ಅಜಯ್ ಜಡೇಜಾ ಅದಿತಿ ಜೇಟ್ಲೆ ಎನ್ನುವ ಸಂಗಾತಿಯನ್ನು ಪಡೆದರು. ಮಾಧುರಿಗೆ ಈಗ ಮಗನಿದ್ದಾನೆ. ಒಂದು ಕಾಲದಲ್ಲಿ ತಮ್ಮ ಅಮೋಘ ಡಾನ್ಸ್ ಹಾಗೂ ನಟನೆಯಿಂದ ಸಿನಿರಸಿಕರನ್ನು ಮಿಂಚಿನಂತೆ ಸೆಳೆದಿದ್ದ ನಟಿ ಮಾಧುರಿ ಇಂದು ಅಪ್ಪಟ ಗೃಹಿಣಿಯಾಗಿ ಬಾಳು ನಡೆಸುತ್ತಿದ್ದಾರೆ. 

1112

ಜಡೇಜಾ ಕುಟುಂಬದ ಅಜಯ್ ಜಡೇಜಾ ಯಾವುದೇ ಕಾರಣಕ್ಕೂ ಸಾಮಾನ್ಯ ಕುಟುಂಬದ ನಟಿ ಮಾಧುರಿ ಅವರನ್ನು ಮದುವೆಯಾಗುವುದು ಬೇಡ ಎಂದು ಜಡೇಜಾ ಕುಟುಂಬ ಕಡ್ಡಿ ಮುರಿದಂತೆ ಹೇಳಿತು. 

1212

ಅಂದಹಾಗೆ, ನಟಿ ಮಾಧುರಿ ದೀಕ್ಷಿತ್ ಬೇಟಾ, ಖಳನಾಯಕ್, ಸಾಜನ್ ಸೇರಿದಂತೆ ಬಾಲಿವುಡ್‌ನ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ದಕ್ಷಿಣ ಭಾರತದ ಸಿನಿಮಾಗಳಿಗೆ ಮಾಧುರಿಯನ್ನು ಕರೆತರುವ ಯಾವ ಪ್ರಯತ್ನವೂ ಇಲ್ಲಿಯವರೆಗೂ ಫಲಿಸಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories