ಅಂದವಾದ ಕೂದಲು ಹೊಂದಿರೋ ದಕ್ಷಿಣ ಭಾರತದ ಸಿನಿತಾರೆಯರು ಇವರು

First Published | May 27, 2024, 5:36 PM IST

ಹುಡುಗಿಯರಿಗೆ ಕೂದಲು ಎಂದರೆ ಎಲ್ಲಿಲ್ಲದ ಪ್ರೀತಿ, ಆದರೆ ಎಲ್ಲರಿಗೂ ಸುಂದರವಾದ ಕೂದಲು ಬೆಳೆಯೋದಕ್ಕೆ ಸಾಧ್ಯವಿಲ್ಲ. ಇಲ್ಲಿದೆ ಸುಂದರವಾದ, ದಟ್ಟವಾದ ಕೂದಲು ಹೊಂದಿರುವ ದಕ್ಷಿಣ ಭಾರತದ ಸಿನಿತಾರೆಯರ ಬಗ್ಗೆ ಒಂದಿಷ್ಟು ಮಾಹಿತಿ ಇದೆ. 
 

ಶ್ರೀನಿಧಿ ಶೆಟ್ಟಿ (Srinidhi Shetty): ಕೆಜಿಎಫ್ ಸಿನಿಮಾದ ಚೆಲುವೆ ಶ್ರೀನಿಧಿ ಶೆಟ್ಟಿ ಉದ್ದವಾದ ಹಾಗೂ ಸ್ಮೂತ್ ಆಗಿರುವ ಸಿಲ್ಕಿ ಕೂದಲನ್ನು ಹೊಂದಿದ್ದಾರೆ. ಕೆಲವೊಂದು ಹೇರ್ ಕೇರ್ ಬ್ರಾಂಡ್ ನ ಅಂಬಾಸೀಡರ್ ಕೂಡ ಆಗಿದ್ದಾರೆ ಈ ಬೆಡಗಿ. 

ಸಾಯಿ ಪಲ್ಲವಿ (Sai Pallavi): ದಕ್ಷಿಣ ಭಾರತದ ಜನಪ್ರಿಯ ಮತ್ತು ಸಿಂಪಲ್ ನಟಿ ಸಾಯಿ ಪಲ್ಲವಿ ಕೂಡ ಸುಂದರವಾದ ಕೂಡಲನ್ನು ಹೊಂದಿದ್ದಾರೆ. ಇವರ ಕೂದಲಿಗೆ ಹೆಚ್ಚಿನ ಅಭಿಮಾನಿಗಳು ಸಹ ಇದ್ದಾರೆ. ಆರೋಗ್ಯಕರ ಆಹಾರ ಸೇವನೆಯೇ ತಮ್ಮ ಆರೋಗ್ಯಯುತ ದಟ್ಟವಾದ ಕೂದಲಿಗೆ ಕಾರಣ ಎಂದು ನಟಿ ತಿಳಿಸಿದ್ದಾರೆ. 
 

Tap to resize

ನಿತ್ಯಾ ಮೆನನ್ (Nitya Menon): ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಮ್ಮ ಬೆಂಗಳೂರು ಹುಡುಗಿ ನಿತ್ಯಾ ಮೆನನ್ ತಮ್ಮ ಕರ್ಲಿ ಕೂದಲಿನಿಂದಾನೇ ಚಿರಪರಿಚಿತರಾಗಿದ್ದಾರೆ. ನಟಿ ಹೆಚ್ಚಾಗಿ ತಮ್ಮ ದಟ್ಟ ಗುಂಗುರು ಕೂದಲನ್ನು ಫ್ರೀ ಆಗಿ ಬಿಡೋದಕ್ಕೆ ಇಷ್ಟಪಡ್ತಾರೆ. 

ಅಹನಾ ಕೃಷ್ಣ (Ahaana Krishnan): ಮಲಯಾಳಂ ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್’ಫ್ಲೂಯನ್ಸರ್ ಆಗಿರುವ ಅಹನಾ ಕೃಷ್ಣ ಸ್ಟ್ರಾಂಗ್ ಮತ್ತು ದಟ್ಟವಾದ ಕೂದಲಿನ ಒಡತಿಯಾಗಿದ್ದಾರೆ. ಈ ನಟಿ ಹೆಚ್ಚಾಗಿ ತಮ್ಮ ಫಾಲೋವರ್ಸ್ ಗಳ ಜೊತೆಗೆ ತಮ್ಮ ಹೇರ್ ಕೇರ್ ರುಟೀನ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇದರಲ್ಲಿ ಎಣ್ಣೆ ಹಚ್ಚೋದು ಮತ್ತು ಸ್ಕಾಲ್ಪ್ ಮಸಾಜ್ ಕೂಡ ಸೇರಿವೆ. 

ಅನು ಸಿತಾರ (Anu Sitara): ಮಲಯಾಳಂ ನಟಿ ಅನು ಸಿತಾರ ಕೂಡ ಉದ್ದ ಸುಂದರವಾದ ಕೂದಲು ಹೊಂದಿರೋ ನಟಿಯರ ಲಿಸ್ಟ್ ನಲ್ಲಿ ಖಂಡಿತಾ ಜಾಗ ಪಡೆಯುತ್ತಾರೆ. ಈಕೆ ತುಂಬಾ ಕಡೆ ತಮ್ಮ ಅಮ್ಮ ಮಾಡಿದಂತಹ ಹೋಮ್ ಮೇಡ್ ಎಣ್ಣೆಯಿಂದ ಕೂಡಲು ದಟ್ಟವಾಗಿ ಉಳಿಯೋದಕ್ಕೆ ಹೇಗೆ ಸಾಧ್ಯವಾಯಿತು ಅನ್ನೋದನ್ನು ಹಂಚಿಕೊಂಡಿದ್ದಾರೆ. 

ಅನುಪಮಾ ಪರಮೇಶ್ವರ್ (Anupama Parameshwaran): ಪ್ರೇಮಂ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ನಟಿ ಅನುಪಮಾ ಪರಮೇಶ್ವರ್ ಕೂಡ ತಮ್ಮ ಉದ್ದನೆಯ ಮತ್ತು ದಟ್ಟವಾದ ಕರ್ಲಿ ಹೇರ್ ನಿಂದ ಜನಪ್ರಿಯತೆ ಪಡೆದಿದ್ದಾರೆ. ಈಕೆ ಹೆಚ್ಚಾಗಿ ತಮ್ಮ ಕೂದಲನ್ನು ಪ್ಲಾಂಟ್ ಮಾಡೋದಕ್ಕೆ ಇಷ್ಟಪಡ್ತಾರೆ. 

ಸಂಯುಕ್ತ ಮೆನನ್ (Samyukta Menon): ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬೆಡಗಿ ಸಂಯುಕ್ತ ಮೆನನ್ ತಮ್ಮ ಸುಂದರವಾದ ನೀಳ ಕೂದಲಿಗೆ ಹೆಸರುವಾಸಿಯಾಗಿದ್ದಾರೆ. 

ರುಕ್ಮಿಣಿ ವಸಂತ್ (Rukmini Vasanth): ಸಪ್ತಸಾಗರದಾಚೆ ಎಲ್ಲೋ ನಟಿ ರುಕ್ಮಿಣಿ ವಸಂತ್ ಸುಂದರವಾದ ಕೂದಲು ಹೊಂದಿದ್ದಾರೆ. ಸರಿಯಾಗಿ ಆಯಿಲಿಂಗ್ ಮಾಡೋದು, ಉತ್ತಮ ಶಾಂಪೂ ಬಳಕೆ ಮಾಡೋದು, ಆರೋಗ್ಯಯುತ ಆಹಾರ ಸೇವನೆ ತಮ್ಮ ಕೂದಲಿನ ರಹಸ್ಯ ಎಂದಿದ್ದಾರೆ ಈ ನಟಿ. 
 

ರಶ್ಮಿಕಾ ಮಂದಣ್ಣ (Rashmika Mandanna): ರಶ್ಮಿಕಾ ಮಂದಣ್ಣ ಕೂದ ಸುಂದರವಾದ ಕೂದಲು ಹೊಂದಿರುವ ಬೆಡಗಿ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲಿ ಫೇಮಸ್ ಆಗಿರುವ ರಶ್ಮಿಕಾ ದಟ್ಟವಾದ ಕೂದಲು ಹೊಂದಿದ್ದಾರೆ. 

Latest Videos

click me!