ಮೆರೂನ್‌ ಡ್ರೆಸ್‌ನಲ್ಲಿ ಶಿಲಾಬಾಲಿಕೆ ರೀತಿ ಮಿಂಚಿದ ಕೃತಿ ಸನೋನ್: ಕೋಲ್ಮಿಂಚಿನ ಗ್ಲಾಮರಸ್‌ ಗೊಂಬೆ ಎಂದ ಫ್ಯಾನ್ಸ್‌!

First Published | Jan 28, 2024, 3:00 AM IST

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್‌ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಸದ್ಯ ಕಡುಗೆಂಪು ವರ್ಣದ ದಿರಿಸಿನಲ್ಲಿ ಎದುರಾಗಿ ಮಾದಕ ನೋಟ ಬೀರಿದ್ದಾರೆ.

ಬಾಲಿವುಡ್‌ ನಟಿ ಕೃತಿ ಸನೋನ್ ಬಾಲಿವುಡ್ ಸ್ಟಾರ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಫೋಟೋಶೂಟ್ ನೋಡಿ ನೆಟ್ಟಿಗರು ನೆಟ್ಟಿಗರು ಕಾಮೆಂಟ್‌ ರೂಪದಲ್ಲಿ ಹಾರ್ಟ್‌ ಎಮೋಜಿಯನ್ನು ರವಾನಿಸುತ್ತಿದ್ದಾರೆ.

ಬಾಲಿವುಡ್‌ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ. ನಟಿಯ ಮೆರೂನ್‌ ಬಣ್ಣದ ಉಡುಪಿನ ಫೋಟೋ ನೋಡಿದ ಅವರ ಫ್ಯಾನ್ಸ್‌ ಬಗೆಬಗೆಯ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Tap to resize

ನಟಿಯ ಹೊಸ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ನಟಿಯ ಈ ಫೋಟೋಗಳನ್ನು ಕಂಡು ಅವರ ಫ್ಯಾನ್ಸ್‌ ಹಾರ್ಟ್‌ ಎಮೋಜಿ ಹಾಕಿ ಗ್ಲಾಮರಸ್‌ ಗೊಂಬೆ ಎಂದೂ ವರ್ಣಿಸುತ್ತಿದ್ದಾರೆ.

ಜಾಲತಾಣಗಳಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್‌ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಟ್ರೆಡಿಷನಲ್‌ ಲುಕ್‌ಗಳಿಗಿಂತ ಮಾಡರ್ನ್‌ ಲುಕ್‌ನಲ್ಲಿಯೇ ಕೃತಿ ಎದುರಾಗುತ್ತಿರುತ್ತಾರೆ. ಇದೀಗ ಹೊಸ ಬಗೆಯ ಲುಕ್‌ ಮೂಲಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ಬ್ಯೂಟಿಫುಲ್ ನಟಿ ಕೃತಿ ಸನೋನ್ ಅವರು ಮಹೇಶ್ ಬಾಬು ಅಭಿನಯದ 'ಒಂದು.. ನೆನೊಕ್ಕಡಿನೆ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ದೆಹಲಿಯಲ್ಲಿ ಜನಿಸಿದ ಈ ಯುವತಿ ಬಾಲಿವುಡ್ ಬದಲಿಗೆ ಟಾಲಿವುಡ್ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 'ತೇರಿ ಬಾಥೋಮ್ ಐಸಾ ಉಲ್ಜಾ ಜಿಯಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಫೆಬ್ರವರಿ 9 ರಂದು ರಿಲೀಸ್‌ ಆಗಲಿದೆ. ಇದರ ಜತೆಗೆ ದಿ ಕ್ರೂವ್‌ ಮತ್ತು ದೋ ಪಟ್ಟಿ ಸಿನಿಮಾಗಳಲ್ಲೂ ಕೃತಿ ನಟಿಸುತ್ತಿದ್ದಾರೆ. 

Latest Videos

click me!