ಕತ್ರಿನಾ ಕೈಫ್‌ನಂತೆ ಸುಂದರವಾಗಿ ಕಾಣಿಸಿಕೊಳ್ಬೇಕಾ? ಹಾಗಿದ್ರೆ ಈ ಬ್ಯೂಟಿ ಸೀಕ್ರೆಟ್ ತಿಳಿಯಿರಿ

First Published | Jan 8, 2024, 5:40 PM IST

ಬಾಲಿವುಡ್ ನಟಿ ಕತ್ರೀನಾ ಹೊಳೆಯುವ ಮತ್ತು ತಾಜಾ ಚರ್ಮವನ್ನು ನೋಡಿದಾಗ, ವಾವ್ ಎಂತಹಾ ಬ್ಯೂಟಿ ಎಂದು ಹೇಳದೇ ಇರಲಾಗದು ಅಲ್ವಾ?ಇವರ ಫ್ಲೋಲೆಸ್ ಬ್ಯೂಟಿಗೆ ಕಾರಣ ಅವರು ಕುಡಿಯುವ ಸೊಪ್ಪಿನ ಜ್ಯೂಸ್. ಅದೇನು ಸೊಪ್ಪು, ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ. 
 

ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು (healthy glowing skin) ಬಯಸುತ್ತಾರೆ. ಹುಡುಗಿಯರು ಅಥವಾ ಮಹಿಳೆಯರು ಇದಕ್ಕಾಗಿ ಏನೇನೋ ಮಾಡ್ತಾರೆ ಅಲ್ವಾ?. ದುಬಾರಿ ಸೌಂದರ್ಯವರ್ಧಕಗಳಿಂದ ಹಿಡಿದು ಟ್ರೀಟ್ ಮೆಂಟ್ ವರೆಗೂ ಎಲ್ಲದಕ್ಕೂ ಅವರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೂ, ಚರ್ಮವು ಹೊಳೆಯುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕಲೆಯೇ ಇಲ್ಲದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಬೆಳಿಗ್ಗೆ ಚರ್ಮದ ಆರೈಕೆ ಬಹಳ ಮುಖ್ಯ. 
 

ಬೆಳಿಗ್ಗೆ ಎದ್ದು ನಿಮ್ಮ ಚರ್ಮದ ಕಡೆಗೆ ಗಮನ ಹರಿಸಿದರೆ ಖಂಡಿತವಾಗಿಯೂ ನಿಮ್ಮ ಚರ್ಮ ಹೊಳೆಯೋದಕ್ಕೆ ಆರಂಭವಾಗುತ್ತೆ. ಅದಕ್ಕಾಗಿ ನೀವು ಬೆಳಗ್ಗೆ ಎದ್ದು, ಒಂದು ಲೋಟ ಸೊಪ್ಪಿನ ಜ್ಯೂಸ್ ಕುಡಿಯಬೇಕು. ಇದರಿಂದ ನಿಮ್ಮ ತ್ವಚೆ ಹೊಳೆಯೋದಂತೂ ಗ್ಯಾರಂಟಿ.
 

Latest Videos


ನಾವು ಹೇಳ್ತಾ ಇರೋದು ಸೆಲರಿ ಸೊಪ್ಪಿನ (celery juice) ಬಗ್ಗೆ. ಇದರ ಜ್ಯೂಸ್ ಸುಂದರ ತ್ವಚೆಗೆ ತುಂಬಾನೆ ಉತ್ತಮ. ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಇದರಿಂದ ಪ್ರೇರಿತರಾಗಿದ್ದಾರೆ ಮತ್ತು ಈ ನೈಸರ್ಗಿಕ ಜ್ಯೂಸ್ ಕುಡಿಯೋ ಮೂಲಕ ತಮ್ಮ ದಿನ ಪ್ರಾರಂಭಿಸುತ್ತಾರೆ. ಸಂದರ್ಶನವೊಂದರಲ್ಲಿ ನಟಿ ಪ್ರತಿದಿನ ಬೆಳಿಗ್ಗೆ ಎರಡು ಲೋಟ ಬಿಸಿ ನೀರನ್ನು ಕುಡಿಯುತ್ತೇನೆ ಮತ್ತು ನಂತರ ಸೆಲರಿ ಜ್ಯೂಸ್ ಕುಡಿಯುತ್ತೇನೆ ಎಂದು ಹೇಳಿದ್ದಾರೆ. ಈ ಪಾನೀಯವು ನಿಮ್ಮ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
 

ಹೊಳೆಯುವ ಚರ್ಮ
ಸೆಲರಿ ಒಂದು ಸುವಾಸನೆಯುಕ್ತ ತರಕಾರಿ. ಇದು ಅಪಿಯೇಸಿ ಕುಟುಂಬಕ್ಕೆ ಸೇರಿದೆ, ಈ ಜಾತಿಗೆ ಕ್ಯಾರೆಟ್, ಪಾರ್ಸ್ನಿಪ್ಸ್, ಫೆನ್ನೆಲ್, ಪಾರ್ಸ್ಲಿ ಮತ್ತು ಜೀರಿಗೆ ಕೂಡ ಸೇರಿದೆ. ಈ ತರಕಾರಿಯಲ್ಲಿರುವ ನೀರಿನ ಪ್ರಮಾಣವು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ಚರ್ಮವನ್ನು ಯಾವಾಗಲೂ ಹೈಡ್ರೇಟ್ (hydrate)ಆಗಿರಿಸುತ್ತದೆ. ಇದನ್ನು ಮುಂಜಾನೆ ಸೇವಿಸೋದರಿಂದ ಹೊಳೆಯುವ ಮತ್ತು ತಾಜಾ ಚರ್ಮವನ್ನು ಪಡೆಯುತ್ತೀರಿ.

ಪೋಷಕಾಂಶಗಳ ಆಗರ
ಸೆಲರಿ ವಿಟಮಿನ್ ಸಿ (VItamin C) ಯ ಅತ್ಯುತ್ತಮ ಮೂಲ. ಸೆಲರಿ ಜ್ಯೂಸ್ ಬೆಳಿಗ್ಗೆ ನಿಯಮಿತವಾಗಿ ಸೇವಿಸಿದರೆ, ಚರ್ಮದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸುತ್ತದೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಖನಿಜಗಳು ಸಹ ಈ ತರಕಾರಿಯಲ್ಲಿ ಕಂಡುಬರುತ್ತವೆ, ಇದು ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ.

ತಜ್ಞರು ಏನು ಹೇಳುತ್ತಾರೆ
ತಜ್ಞರ ಪ್ರಕಾರ ಸೆಲರಿಯಲ್ಲಿ ಉತ್ತಮ ಪ್ರಮಾಣದ ನೀರು ಇದೆ, ಇದು ನಿಮ್ಮನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಹೈಡ್ರೇಟ್ ಆಗಿರುವುದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಶುಷ್ಕತೆಯನ್ನು (dryness) ತೆಗೆದುಹಾಕುತ್ತದೆ, ಜೊತೆಗೆ ಇದು ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸುತ್ತೆ. 

ಅಕಾಲಿಕ ವಯಸ್ಸಾಗೋದನ್ನು ತಪ್ಪಿಸುತ್ತೆ
ಸೆಲರಿಯಲ್ಲಿ ಫ್ಲೇವನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಆಕ್ಸಿಡೇಟಿವ್ ಒತ್ತಡವನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ. ಆಕ್ಸಿಡೇಟಿವ್ ಒತ್ತಡದಿಂದಾಗಿ, ಮುಖದ ಮೇಲೆ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಮತ್ತು ಕಪ್ಪು ವೃತ್ತಗಳು ಕಾಣಿಸಿಕೊಳ್ಳುತ್ತವೆ, ಇದು ನಿಮಗೆ ಅಕಾಲಿಕವಾಗಿ ವಯಸ್ಸಾಗುವಿಕೆಗೆ ಕಾರಣವಾಗಿದೆ. 

ಸೂರ್ಯನ ಬೆಳಕಿನಿಂದ ದೂರ ಇರಿ
ಸೆಲರಿ ರಸವು ಚರ್ಮದ ಆರೈಕೆಗೆ (skin care) ಏಕೈಕ ಪರಿಹಾರವಲ್ಲ ಎಂಬುದನ್ನು ನೆನಪಿನಲ್ಲಿಡಿ. ರಸವನ್ನು ಸೇವಿಸುವುದರ ಜೊತೆಗೆ, ನೀವು ಚರ್ಮದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಇದಲ್ಲದೆ, ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದರಿಂದ, ನಿಮ್ಮ ಚರ್ಮವು ಹೆಚ್ಚು ಸುಧಾರಿಸುತ್ತದೆ.

ಮನೆಯಲ್ಲಿ ಸೆಲರಿ ಜ್ಯೂಸ್ ತಯಾರಿಸುವುದು ಹೇಗೆ?
ಸೆಲರಿ ರಸವನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಆದರೆ ಇಲ್ಲಿ ನಾವು ನಿಮಗೆ ಬಹಳ ಸರಳವಾದ ಮಾರ್ಗವನ್ನು ಹೇಳುತ್ತಿದ್ದೇನೆ. ಮೊದಲಿಗೆ, ಸೆಲರಿ ತೆಗೆದುಕೊಂಡು ಅದರ ಎಲೆಗಳನ್ನು ಕತ್ತರಿಸಿ. ಈಗ ಅದರ ಕಾಂಡಗಳನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ. ಅವುಗಳನ್ನು ತೊಳೆದು ನೀರಿನೊಂದಿಗೆ ಬ್ಲೆಂಡರ್ ನಲ್ಲಿ ಹಾಕಿ ಮಿಕ್ಸ್ ಮಾಡಿ. ಬಯಸಿದರೆ, ರುಚಿಗಾಗಿ ನಿಂಬೆ ರಸವನ್ನು ಸಹ ಸೇರಿಸಬಹುದು. ಈಗ ಈ ರಸವನ್ನು ಒಂದು ಲೋಟದಲ್ಲಿ ಫಿಲ್ಟರ್ ಮಾಡಿ ಕುಡಿಯಿರಿ. ಯಾವುದಕ್ಕೂ ಇದನ್ನ ಕುಡಿಯೋ ಮುನ್ನ ವೈದ್ಯರ ಸಲಹೆ ಪಡೆಯಿರಿ. 

click me!