ಮಿಸ್ ಫೈರ್ ಆಗಿದ್ದರಿಂದ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡು ತಗುಲಿದೆ ಎಂದು ವರದಿಯಾಗಿದೆ. ಕೂಡಲೇ ಕುಟುಂಬಸ್ಥರು ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಂದು ಬೆಳಗ್ಗೆ ಗನ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮಿಸ್ ಫೈರ್ ಆಗಿದೆ ಎಂದು ಕೆಲ ವರದಿಗಳು ಪ್ರಕಟವಾಗಿದೆ. ಇದು ಲೈಸೆನ್ಸ್ ಹೊಂದಿರುವ ಗನ್ ಆಗಿದೆ.
ಗನ್ ಮಿಸ್ ಫೈರ್ ಆಗಿರುವ ಬಗ್ಗೆ ಪೊಲೀಸರು ಆಗಲಿ ಅಥವಾ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಗೋವಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Mahmad Rafik