ಜಾಹ್ನವಿ ಕಪೂರ್ ಕುಂಚದಲ್ಲಿ ಮೂಡಿ ಬಂದ ಲಕ್ಷ್ಮೀ ದೇವಿಯ ಚಿತ್ರ... ನಟಿಯ ಟ್ಯಾಲೆಂಟ್ ಗೆ ಭಾರಿ ಮೆಚ್ಚುಗೆ!

First Published | Nov 18, 2024, 6:41 PM IST

ಜಾಹ್ನವಿ ಕಪೂರ್ ಕೇವಲ ಸ್ಟಾರ್ ನಟಿ ಮಾತ್ರ ಅಲ್ಲ, ಇವರು ಅದ್ಭುತ ಚಿತ್ರ ಕಲಾವಿದೆ ಅನ್ನೋದನ್ನ ಇವರು ಸಾಭೀತು ಪಡಿಸಿದ್ದಾರೆ. ಇತ್ತೀಚೆಗೆ, ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಆರ್ಟಿಸ್ಟಿಕ್ ಟ್ಯಾಲೆಂಟ್ ತೋರಿಸಿದ್ದು, ಅಭಿಮಾನಿಗಳು ಇದನ್ನ ನೋಡಿ ಶಾಕ್ ಆಗಿದ್ದಾರೆ, ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

ಜಾಹ್ನವಿ ಕಪೂರ್ (Jahnvi Kapoor) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಲಕ್ಷ್ಮಿ ದೇವಿಯ ಸುಂದರವಾದ ಚಿತ್ರ ಮತ್ತು ಸುಂದರವಾದ ಸೂರ್ಯಾಸ್ತದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜಾಹ್ನವಿ ಟ್ಯಾಲೆಂಟ್ ನೋಡಿ ಫ್ಯಾನ್ಸ್ ಮತ್ತು ಸಹ ನಟರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ತಾವು ರಚಿಸಿದ ಫೋಟೊಗಳ ಜೊತೆಗೆ ತಮ್ಮ ಫೋಟೊವನ್ನು ಶೇರ್ ಮಾಡಿರುವ ಜಾಹ್ನವಿ,  ನನ್ನ ತಂದೆ ನಾನು ಮಾಡಿರುವ ಚಿತ್ರಗಳೊಂದಿಗೆ ಸ್ಟೂಡೆಂಟ್ ನಂತೆ ಪೋಸ್ ನೀಡಲು ಹೇಳಿದ್ದು, ಅದನ್ನ ಅವರು ಅವರ ಫ್ರೆಂಡ್ಸ್ ಗ್ರೂಪ್ ಗೆ ಫಾರ್ವರ್ಡ್ ಮಾಡುವ ಮೂಲಕ ನನ್ನ ಬೆಸಿಕ್ ಸ್ಕಿಲ್ ನ್ನು ಉತ್ತೇಜಿಸುತ್ತಾರೆ ಎಂದು ಬರೆದಿದ್ದಾರೆ ಜಾಹ್ನವಿ. 
 

Tap to resize

ಜಾಹ್ನವಿಯನ್ನು ಕೇವಲ ನಟಿಯಾಗಿ ನೋಡಿದ ಅಭಿಮಾನಿಗಳು ಹಾಗೂ ಅವರ ಚಿತ್ರ ರಂಗದ ಸ್ನೇಹಿತರು ಜಾಹ್ನವಿಯ ಆರ್ಟಿಸ್ಟಿಕ್ ಸ್ಕಿಲ್ (Artistic Skill) ನೋಡಿ ಪ್ರಶಂಸಿಸಿದ್ದಾರೆ.  ಅನೇಕರು ಅವರ ವರ್ಣಚಿತ್ರಗಳನ್ನು ತುಂಬಾನೆ ಸುಂದರವಾಗಿದೆ, ಅದ್ಭುತವಾಗಿದೆ ಎಂದು ಬಣ್ಣಿಸಿದ್ದಾರೆ.  ಕೆಲವರು ಬಹುಮುಖ ಪ್ರತಿಭೆ ಅಂತಾನೂ ಹೇಳಿದ್ದಾರೆ. 
 

ಜಾಹ್ನವಿ ಕೆಲವು ಸಮಯದಿಂದ ಚಿತ್ರಕಲೆಯನ್ನು ತಮ್ಮ ಫ್ರೀ ಟೈಮಲ್ಲಿ ಮಾಡುತ್ತಲಿರುತ್ತಾರೆ, ಆಗಾಗ್ಗೆ ತಮ್ಮ ಕಲಾಕೃತಿಗಳ ಜಲಕ್ ನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಚಿತ್ರಕಲೆಯ ಮೇಲಿನ ಅವರ ಪ್ಯಾಶನ್, ಇವರೊಬ್ಬ ಅದ್ಭುತ ಕಲಾವಿದೆ ಅನ್ನೋದನ್ನು ತೋರಿಸುತ್ತದೆ. 
 

ಚಿತ್ರಕಲೆಯಲ್ಲಿ ಜಾಹ್ನವಿ ಕಪೂರ್ ಅವರ ಪ್ರತಿಭೆ, ಅವರ ನಟನಾ ಪರಾಕ್ರಮವು ಅವರ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುತ್ತದೆ. ನಟಿ ಶ್ರೀದೇವಿ (Actress Shridevi) ಕೂಡ ಪೈಂಟಿಂಗ್ ಕಡೆ ಒಲವು ಬೆಳೆಸಿಕೊಂಡಿದ್ದರು. ಅವರೂ ಕೂಡ ಹೆಚ್ಚಿನ ಸಮಯ ಪೈಂಟಿಂಗ್ ಮಾಡುತ್ತಿದ್ದರು. ಅದೇ ರೀತಿ ಈಗ ಮಗಳು ಕೂಡ ಪೈಂಟಿಂಗ್ ಮಾಡುತ್ತಿದ್ದಾರೆ. 
 

ಜಾಹ್ನವಿ ಕರಿಯರ್ ಬಗ್ಗೆ ಹೇಳೋದಾದರೆ ಇತ್ತೀಚೆಗಷ್ಟೇ ಜಾಹ್ನವಿ ಅಭಿನಯದ ತೆಲುಗು ಸಿನಿಮಾ ದೇವಾರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ನಟಿಯ ಕೈಯಲ್ಲಿ ಸನ್ನಿ ಸಂಸ್ಕಾರಿ ಕೀ ತುಳ್ಸಿ ಕುಮಾರಿ ಸಿನಿಮಾ ಇದೆ. ಚಿತ್ರದ ಶೂಟಿಂಗ್ ನಡೆಯುತ್ತಿದೆ. 
 

Latest Videos

click me!