ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor)ಪ್ರಸಿದ್ಧ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶುಕ್ರವಾರ, ಜಾನ್ವಿ ಮೆಟ್ಟಿಲುಗಳನ್ನು ಹತ್ತುವ ಮೂಲಕ ತಿರುಪತಿಯ ಬೆಟ್ಟವನ್ನು ಹತ್ತಿ. ಶನಿವಾರ ಮುಂಜಾನೆ ವಿಐಪಿ ದರ್ಶನದ ಮೂಲಕ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಂಡರು.
ಜಾನ್ವಿ ಕಪೂರ್ ತಿರುಪತಿ ದರ್ಶನ ಪಡೆಯುತ್ತಿರೋದು ಇದೇ ಮೊದಲಲ್ಲ, ಪ್ರತಿವರ್ಷ ತಾಯಿ ಶ್ರೀದೇವಿ ಹುಟ್ಟುಹಬ್ಬದಂದು (Sridevi Birthday), ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ನಟಿ ತಿರುಪತಿ ಬೆಟ್ಟವನ್ನು ಏರುತ್ತಾರೆ. ಅಲ್ಲದೇ ಪ್ರತಿಸಲವೂ ನಟಿ ಮೆಟ್ಟಿಲುಗಳನ್ನು ಏರಿಕೊಂಡೇ ತಿಮ್ಮಪ್ಪನ ದರ್ಶನ ಪಡೆಯೋದು ವಿಶೇಷವಾಗಿದೆ.
ಈ ಬಾರಿಯೂ ನಟಿ ಜಾನ್ವಿ ತಮ್ಮ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ (Shikhar Pahariya) ಜೊತೆ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಜೋಡಿ ತಿರುಪತಿಯಲ್ಲಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಲ್ಲದೇ ಜಾನ್ವಿ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಪ್ರತಿಬಾರಿಯೂ ನಟಿ ಜಾನ್ವಿ ದೇಗುಲಕ್ಕೆ ಭೇಟಿ ನೀಡುವಾಗ, ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ನಟಿ ಲಂಗ ದಾವಣಿ (half saree) ತೊಟ್ಟು, ಅಪ್ಪಟ ಸೌತ್ ಇಂಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ, ಗೆಳೆಯ ಶಿಖರ್ ಪಂಚೆ ಹಾಗೂ ಶಲ್ಯ ಧರಿಸಿರೋದು ಕಂಡು ಬಂದಿದೆ.
ಜಾನ್ವಿ ನೀಲಿ ಮತ್ತು ನೇರಳೆ ಬಣ್ಣದ ಲಂಗಾ ದಾವಣಿ ಧರಿಸಿ, ವಜ್ರದ ಹಾರವನ್ನು ಧರಿಸಿದ್ದರು. ಡೈಮಂಡ್ ನೆಕ್ಲೆಸ್ ಜಾನ್ವಿ ಸಿಂಪ್ಲಿಸಿಟಿಗೆ ಹೆಚ್ಚು ಮೆರುಗು ನೀಡಿತ್ತು, ತಮ್ಮ ಫೋಟೊಗಳ ಜೊತೆಗೆ ನಟಿ "ಹ್ಯಾಪಿ ನ್ಯೂ ಇಯರ್" ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ.
ಮತ್ತೊಂದು ಫೋಟೊದಲ್ಲಿ ಜಾನ್ವಿ ಕಪೂರ್ ದೊಡ್ಡ ತಿರುಪತಿ ಲಡ್ಡನ್ನು ಕೈಯಲ್ಲಿ ಹಿಡಿದು ತಿನ್ನುವುದನ್ನು ಕಾಣಬಹುದು. ಆ ಮೂಲಕ ನಟಿ ತಿಮ್ಮಪ್ಪನ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ, ತಿರುಪತಿ ಲಡ್ಡು ತಿಂದು ಧನ್ಯರಾಗಿರೋದನ್ನು ಕಾಣಬಹುದು.
ಇನ್ನು ಕರಿಯರ್ ಬಗ್ಗೆ ಹೇಳೋದಾದರೆ ಜಾನ್ವಿ ಕಪೂರ್ ಇತ್ತೀಚೆಗೆ ದೇವರಾ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಇದು ಬ್ಲಾಕ್ಬಸ್ಟರ್ ಹಿಟ್ ಆಯಿತು. ಇದೀಗ ರಾಮ್ ಚರಣ್ ಗೆ (Ram Charan)ನಾಯಕಿಯಾಗಿ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.