ಜೊತೆಗಿಲ್ಲ ಅನ್ನೋದು ಬಿಟ್ಟರೆ ನಾನು ಚೆನ್ನಾಗಿದ್ದೀನಿ; ಪತಿಯಿಂದ ದೂರವಿರಲು ಕಾರಣ ಬಿಚ್ಚಿಟ್ಟ ಹೇಮಾ ಮಾಲಿನಿ

Published : Mar 30, 2024, 10:26 AM IST

 ಈ ವಯಸ್ಸಿನಲ್ಲಿ ಖುಷಿಯಾಗಿ ಜೀವನ ಮಾಡಬೇಕು ಯಾಕೆ ಒಂಟಿಯಾಗಿದ್ದೀರಿ ಎಂದು ಪ್ರಶ್ನೆ ಮಾಡುತ್ತಿರುವವರಿಗೆ ಉತ್ತರ ಕೊಟ್ಟ ಹೇಮಾ.....

PREV
18
ಜೊತೆಗಿಲ್ಲ ಅನ್ನೋದು ಬಿಟ್ಟರೆ ನಾನು ಚೆನ್ನಾಗಿದ್ದೀನಿ; ಪತಿಯಿಂದ ದೂರವಿರಲು ಕಾರಣ ಬಿಚ್ಚಿಟ್ಟ ಹೇಮಾ ಮಾಲಿನಿ

ಬಾಲಿವುಡ್ ಬ್ಯೂಟಿ ಹೇಮಾ ಮಾಲಿನಿ ಮದುವೆ ವಿಚಾರ 90ರ ದಶಕದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಅದರಲ್ಲೂ ತಾಯಿ ವಿರೋಧ ಇದ್ದರೂ ಹೇಮಾ ತೆಗೆದುಕೊಂಡ ನಿರ್ಧಾರವನ್ನು ಅನೇಕರು ವಿರೋಧಿಸಿದ್ದರು.
 

28

ಹೌದು! ನಟ ಧರ್ಮೇಂದ್ರ ಮೊದಲು ಕಾಶ್ ಕೌರ್ ಜೊತೆ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರು. ವಿಚ್ಛೇದನ ಕೊಡದೆ ಎರಡನೇ ಮದುವೆ ಮಾಡಿಕೊಂಡರು.
 

38

ಇದಕ್ಕೆ ಹೇಮಾ ಮಾಲಿನಿ ತಾಯಿ ವಿರೋಧ ವ್ಯಕ್ತ ಪಡಿಸಿದ್ದರು. ನಾಲ್ಕು ಮಕ್ಕಳನ್ನು ಹೊಂದಿರುವ ಧರ್ಮೇಂದ್ರನಿಗೆ ಮಗಳನ್ನು ಮದುವೆ ಮಾಡೋದು ಹೇಮಾ ಮಾಲಿನಿ ತಾಯಿಗೆ ಬಿಲ್‌ಕುಲ್ ಇಷ್ಟ ಇರಲಿಲ್ಲ. 

48

ಒಂದಿಷ್ಟು ಸಮಯ ಲೈಫು ಚೆನ್ನಾಗೇ ನಡೀತು. ಆದರೆ ಧರ್ಮೇಂದ್ರ ಸಂಕುಚಿತ ಮನಸ್ಥಿತಿ ಬಗ್ಗೆ ಹೇಮ ಮಾಲಿನಿಗೆ ಒಳಗಿಂದೊಳಗೇ ಅಸಹನೆ ಇದ್ದಿರಬೇಕು. 

58

ಅದಾದ ಮೇಲೆ ತಾನು ಮೊದಲ ಮಗುವಿನ ತಾಯಿಯಾದಾಗ ಆ ವಿಚಾರವನ್ನು ಬಚ್ಚಿಡಲು ಧರ್ಮೇಂದ್ರ ಹೇಳಿದ್ದರು ಎಂಬ ಮಾತನ್ನು ಹೇಮಮಾಲಿನಿ ಹಿಂದೆ ಬಹಿರಂಗ ಪಡಿಸಿದ್ದರು.

68

ನನ್ನ ಕೆಲಸಗಳಲ್ಲಿ ಕಳೆದುಹೋಗಿ ನಾನು ಖುಷಿಯಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿವೆ, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ. ಆ ಸಮಯದಲ್ಲಿ ಧರ್ಮೇಂದ್ರ ಜೊತೆಗೆ ಇದ್ದರು. ಸರಿಯಾದ ಸಮಯಕ್ಕೆ ಮಕ್ಕಳಿಗೆ ಮದುವೆ ಮಾಡಬೇಕು ಅಂತ ಅವರು ಹೇಳುತ್ತಿದ್ದರು.

78

ಆಗ ನಾನು ಆಗತ್ತೆ ಎನ್ನುತ್ತಿದ್ದೆ. ಮಕ್ಕಳ ಮದುವೆ ಆಯ್ತು. ಅವರೂ ಖುಷಿ ಪಟ್ಟರು. ಈಗ ಅವರು ಜೊತೆಗಿಲ್ಲ ಅನ್ನೋ ಕೊರತೆ ಹೊರತಾಗಿ ನಾನು ಚೆನ್ನಾಗಿಯೇ ಇದ್ದೇನೆ' ಎಂದಿದ್ದಾರೆ ಹೇಮಾ.

88
dharmendra and hema malini

ಸದ್ಯಕ್ಕೀಗ ಹೇಮ ಮಾಲಿನಿ ಒಂಟಿ. ಮಕ್ಕಳು ಅವರ ಸಂಸಾರದ ಜೊತೆಗೆ ಬ್ಯುಸಿ ಆಗಿದ್ದಾರೆ. ಹೇಮ ಮಾಲಿನಿ ಬ್ಯುಸಿ ಆಗಿದ್ದರೂ ಈ ವಯಸ್ಸಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿರಬೇಕು ಅನ್ನೋದನ್ನು ಹಂಬಲಿಸುತ್ತಿದ್ದಾರೆ.

Read more Photos on
click me!

Recommended Stories