ದಂಗಲ್ ಸಿನಿಮಾ ಮೂಲಕ ಹಿಟ್ ಆದ ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಎಲ್ಲರಿಗೂ ಗೊತ್ತು. ಸಿಂಪಲ್ ಸುಂದರಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ಬಾಲನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು ಫಾತಿಮಾ
ಇದೀಗ ನಟಿ ಬಾಲ್ಯದ ಭಯಾನಕ ಲೈಂಗಿಕ ದೌರ್ಜನ್ಯದ ಘಟನೆ ನೆನಪಿಸಿಕೊಂಡಿದ್ದಾರೆ.
ನಾನು ಮೂರು ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು ಎಂದಿದ್ದಾರೆ ನಟಿ.
ಲೈಂಗಿಕ ಕಿರುಕುಳ ಎಂಬ ವಿಚಾರದ ಬಗ್ಗೆಯೇ ಒಂದು ಕಳಂಕವಿದೆ. ಅದೇ ಕಾರಣದಿಂದ ಮಹಿಳೆಯರು ಮತ್ತು ಜೀವನದಲ್ಲಿ ಶೋಷಣೆಗೆ ಒಳಗಾದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ ಎಂದಿದ್ದಾರೆ.
ಇಂದು ಪ್ರಪಂಚ ಬದಲಾಗಿದೆ. ಇದರ ಬಗ್ಗೆ ಹೆಚ್ಚಿನ ಅರಿವು ಮತ್ತು ಶಿಕ್ಷಣವಿದೆ ಎಂದಿದ್ದಾರೆ ನಟಿ.
ನಾನು ಕಾಸ್ಟಿಂಗ್ ಕೌಚ್ ಕೂಡಾ ಎದುರಿಸಿದ್ದೇನೆ. ಸೆಕ್ಸ್ ಮಾಡಿದ್ರೇನೆ ಕೆಲಸ ಸಿಗೋದು ಅನ್ನೋ ಸಂದರ್ಭವನ್ನೂ ಅನುಭವಿಸಿದ್ದೇನೆ ಎಂದಿದ್ದಾರೆ ದಂಗಲ್ ಚೆಲುವೆ.
ಬಹಳಷ್ಟು ಸಲ ಇನ್ಯಾರದೋ ರೆಫರೆನ್ಸ್ ಮೇಲೆ ಸಿಕ್ಕಿದ ಸಿನಿಮಾ ಕೈತಪ್ಪಿಹೋಗಿದೆ ಎಂದಿದ್ದಾರೆ.