ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್; ಫೇರಿಟೇಲ್ ಮದುವೆ ಹೇಗಿತ್ತು ನೋಡಿ!

First Published | Oct 31, 2020, 3:46 PM IST

ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್. ಖಾಸಗಿಯಾಗಿ ನಡೆದ ಡ್ರೀಮ್‌ ವೆಡ್ಡಿಂಗ್ ಹೇಗಿತ್ತು ನೋಡಿ.....

ಮುಂಬೈನ ಪ್ರತಿಷ್ಠಿತ ತಾಜ್‌ ಮಹಾಲ್‌ ಹೊಟೇಲ್‌ನಲ್ಲಿ ಅದ್ಧೂರಿ ಮದುವೆಯಾದ ನಟಿ ಕಾಜಲ್.
ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಧು-ವರನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Tap to resize

ಇದು ಪಕ್ಕಾ Fairytale ವೆಡ್ಡಿಂಗ್ ಆಗಿದ್ದು, ಆಪ್ತ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಕೆಂಪು ಲೆಹೆಂಗಾದಲ್ಲಿ ಕಾಜಲ್ ಮಿಂಚುತ್ತಿದ್ದರೆ, ವೈಟ್‌ ಶೇರ್ವಾನಿಯಲ್ಲಿ ಗೌತಮ್ ಕಾಣಿಸಿಕೊಂಡಿದ್ದಾರೆ.
ಮದುವೆ ಮನೆ ಹಾಗೂ ಹೊಟೇಲ್‌ ಅಲಂಕಾರವನ್ನು ಇನ್‌ಸ್ಟಾ ಫೇಜ್‌ನಲ್ಲಿ ಈವೆಂಟ್ ಮ್ಯಾನೇಜರ್‌ಗಳು ಶೇರ್ ಮಾಡಿಕೊಂಡಿದ್ದಾರೆ.
ಮದುವೆ ಮನೆಯಿಂದ ಹೊಟೇಲ್‌ಗೆ ತೆರಳುವಾಗ ಕಾಜಲ್ ಧರಿಸಿದ ಪಿಂಕ್ ಸೆಲ್ವಾರ್‌ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.
ಕಾಜಲ್ ಮೆಹೆಂದಿ ಹಾಗೂ ಹಳದಿ ಕಾರ್ಯಕ್ರಮದ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಕಾಜಲ್ ಹಾಗೂ ಗೌತಮ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಗುರು ಹಿರಿಯರಿಂದ ಗ್ರೀನ್‌ ಸಿಗ್ನಲ್ ಪಡೆದು ಈಗ ಹ್ಯಾಪಿಲಿ ಮ್ಯಾರಿಡ್.
ವಿಶೇಷ ಏನೆಂದರೆ ಕಾಜಲ್ ಮದುವೆ ಹಾಗೂ ಕಾರ್ಯಕ್ರಮ ಫೋಟೋ ಸೆರೆ ಹಿಡಿಯಲು ಓಡಾಡುತ್ತಿದ್ದ ಮಾಧ್ಯಮ ಮಿತ್ರರಿಗೆ ಕಾಜಲ್ ಸಹೋದರಿ ಸ್ವೀಟ್‌ ಬಾಕ್ಸ್‌ ಕೊಟ್ಟಿದ್ದಾರೆ.

Latest Videos

click me!